ಮನುಷ್ಯನುದ್ದಕ್ಕೂ ಎದ್ದು ನಿಂತ ಕಾಳಿಂಗ ಸರ್ಪ –  ಎದೆ ಝಲ್ ಅನ್ನಿಸುವಂತಿದೆ ಈ ದೃಶ್ಯ

ಮನುಷ್ಯನುದ್ದಕ್ಕೂ ಎದ್ದು ನಿಂತ ಕಾಳಿಂಗ ಸರ್ಪ –  ಎದೆ ಝಲ್ ಅನ್ನಿಸುವಂತಿದೆ ಈ ದೃಶ್ಯ

ಕಾಳಿಂಗ ಸರ್ಪ ವಿಶ್ವದ ಅತೀ ಉದ್ದದ ವಿಷಕಾರಿ ಹಾವು ಎಂದೇ ಖ್ಯಾತಿ ಪಡೆದಿದೆ. ಈ ಹಾವುಗಳು ಅತಿ ವಿರಳ ಸಂಖ್ಯೆಯಲ್ಲಿವೆ. ಅಲ್ಲದೇ ಈ ಹಾವುಗಳು ಹೆಚ್ಚಾಗಿ ಮಳೆ ಕಾಡುಗಳಲ್ಲಿ ವಾಸಿಸುವುದರಿಂದ ಅಪರೂಪಕ್ಕೆ ಜನರ ಮುಂದೆ ಪ್ರತ್ಯಕ್ಷವಾಗುತ್ತವೆ. ಇದು ವಿಷಕಾರಿ ಹಾವು ಆಗಿರುವುದರಿಂದ ಜನ ಅದನ್ನು ಕಂಡ ಕೂಡಲೇ ಬದುಕಿದೆಯಾ ಬಡ ಜೀವವೇ ಅಂತಾ ದೂರ ಓಡಿಹೋಗುತ್ತಾರೆ. ಹಾಗಾಗಿ ಅವುಗಳ ವಿರಾಟ ರೂಪ ಬಲು ಅಪರೂಪವಾಗಿರುತ್ತದೆ. ಇದೀಗ ಕಾಳಿಂಗ ಸರ್ಪದ ವಿಡಿಯೋ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: 2 ವರ್ಷಗಳಲ್ಲಿ 240 ಸಿಂಹಗಳು ಸಾವು – ಗಿರ್ ಅರಣ್ಯದಲ್ಲಿ ಮೃಗರಾಜನ ಜೀವಕ್ಕೆ ಕಂಟಕ ಬಂದಿದ್ದು ಹೇಗೆ?

ಕೆಲ ಕಾಳಿಂಗ ಸರ್ಪಗಳು 15 ಅಡಿಗಿಂತ ಹೆಚ್ಚು ಉದ್ದವಾಗಿರುತ್ತವೆ. ಈ ಸರ್ಪಗಳು ಹೆಡೆ ಎತ್ತಿ ನಿಂತರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಅಲ್ಲದೇ ಇವು ಇತರ ಹಾವುಗಳಿಗಿಂತ ಭಿನ್ನವಾಗಿವೆ. ಏಕೆಂದರೆ ಇವು ತೆವಳುತ್ತಾ ಹೋಗುವುದು ಮಾತ್ರವಲ್ಲ, ಕೆಲ ಸಂದರ್ಭಗಳಲ್ಲಿ ಆಳೆತ್ತರಕ್ಕೆ ಎದ್ದು ನಿಲ್ಲುತ್ತದೆ. ಇದೀಗ ವೈರಲ್ ಆಗಿರುವ ದೃಶ್ಯವೊಂದರಲ್ಲಿ ಕಾಳಿಂಗ ಸರ್ಪವೊಂದು ಬರೋಬ್ಬರಿ 5 ಅಡಿ ಎತ್ತರಕ್ಕೆ ಎದ್ದು ನಿಂತಿದೆ. ಅಷ್ಟೇ ಅಲ್ಲದೇ ಅದು ತನ್ನ ದೇಹದ ಮೂರನೇ ಒಂದು ಭಾಗವನ್ನು ಮೇಲಕ್ಕೆ ಎತ್ತಿ ಬ್ಯಾಲೆನ್ಸ್ ಮಾಡಿದೆ ಅಂದರೆ ಈ ಹಾವು 15 ಅಡಿಗೂ ಹೆಚ್ಚು ಉದ್ದವಿದೆ.

ಐಎಫ್ ಎಸ್ ಅಧಿಕಾರಿ ಸುಸಂತ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಳಿಂಗ ಸರ್ಪ ತನ್ನ ದೇಹದ ಮೂರನೇ ಒಂದರಷ್ಟು ಭಾಗವನ್ನು ಮೇಲಕ್ಕೆ ಎತ್ತಿ ನಿಲ್ಲಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

suddiyaana