ಮುಕೇಶ್ ಅಂಬಾನಿ & ಫ್ಯಾಮಿಲಿಗೆ ವಿದೇಶದಲ್ಲೂ ಝಡ್+ ಭದ್ರತೆ : ವೆಚ್ಚದ ಜವಾಬ್ದಾರಿ ಯಾರದ್ದು ಗೊತ್ತಾ?

ಮುಕೇಶ್ ಅಂಬಾನಿ & ಫ್ಯಾಮಿಲಿಗೆ ವಿದೇಶದಲ್ಲೂ ಝಡ್+ ಭದ್ರತೆ : ವೆಚ್ಚದ ಜವಾಬ್ದಾರಿ ಯಾರದ್ದು ಗೊತ್ತಾ?

ಉದ್ಯಮಿ, ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭಾರತ ಮತ್ತು ವಿದೇಶಗಳಲ್ಲಿ ಅತ್ಯುನ್ನತ ಝಡ್‌+ ದರ್ಜೆಯ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಮುಕೇಶ್‌ ಅಂಬಾನಿ ಅವರಿಗೆ ಭಾರತ ಅಥವಾ ವಿದೇಶದಲ್ಲಿ ಒದಗಿಸುವ ಝಡ್‌+ ಭದ್ರತೆಯ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಲಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿದೆ. ಭಾರತ ಹಾಗೂ ವಿದೇಶದಲ್ಲಿ ಅತ್ಯುನ್ನತ ಝಡ್‌+ ಭದ್ರತೆಯನ್ನು ಒದಗಿಸಬೇಕು ಮತ್ತು ಮಹಾರಾಷ್ಟ್ರ ರಾಜ್ಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಎಂಹೆಚ್‌ಎ) ಇದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಇದನ್ನೂ ಓದಿ :  ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಿದ ‘ಕೈಲಾಸ’ದ ಪ್ರತಿನಿಧಿ – ನಿತ್ಯಾನಂದನಿಗೆ ರಕ್ಷಣೆ ಕೋರಿದ ಶಿಷ್ಯೆ..!

ಮುಕೇಶ್‌ ಅಂಬಾನಿ ಅವರಿಗೆ ಭಾರತ ಅಥವಾ ವಿದೇಶದಲ್ಲಿ ಅತ್ಯುನ್ನತ ಮಟ್ಟದ ಝಡ್‌+ ಭದ್ರತೆಯನ್ನು ಒದಗಿಸುವ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ‘ಭದ್ರತಾ ಬೆದರಿಕೆಯಿದ್ದರೆ ನೀಡಲಾಗುವ ಭದ್ರತೆಯನ್ನು ಸ್ವಂತ ವೆಚ್ಚದಲ್ಲಿ ಭರಿಸಬೇಕಾಗುತ್ತದೆ. ಇದನ್ನು ನಿರ್ದಿಷ್ಟ ಪ್ರದೇಶ ಅಥವಾ ತಂಗುವ ಸ್ಥಳಕ್ಕೆ ನಿರ್ಬಂಧಿಸಲಾಗುವುದಿಲ್ಲ ಎಂದು ನಾವು ಪರಿಗಣಿಸಿದ್ದೇವೆ. ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ದೇಶದ ಒಳಗೆ ಮತ್ತು ದೇಶದ ಹೊರಗೆ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತಿದ್ದು, ನಿರ್ದಿಷ್ಟ ಸ್ಥಳ ಅಥವಾ ಪ್ರದೇಶಕ್ಕೆ ಭದ್ರತೆಯನ್ನು ಮಿತಿಗೊಳಿಸಿದರೆ ಭದ್ರತಾ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನೇ ಪೂರೈಸಿದಂತಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರಿಗೆ ಅತ್ಯುನ್ನತ ಮಟ್ಟದ ಭದ್ರತೆ ಒದಗಿಸಲಾಗಿದ್ದು, ಇದಕ್ಕಾಗಿ ಅಂಬಾನಿ ಕುಟುಂಬವು ವೆಚ್ಚವನ್ನು ಭರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ..

suddiyaana