ಎರಡು ಗರ್ಭಕೋಶದಲ್ಲಿ ಎರಡು ಮಕ್ಕಳು – ಯಶಸ್ವೀ ಶಸ್ತ್ರಚಿಕಿತ್ಸೆಯಿಂದ ಕಂದಮ್ಮಗಳ ಜೊತೆ ತಾಯಿಯೂ ಸೇಫ್..!
ತಾಯ್ತನ ಅಂದರೆ ಅದು ದೇವರ ಕೊಟ್ಟ ವರ. ಮಗುವಿಗೆ ಜನ್ಮ ನೀಡುವಾಗ ತಾಯಿ ಮತ್ತೊಂದು ಜನ್ಮ ಪಡೆಯುತ್ತಾಳೆ ಅನ್ನೋದು ಕೂಡಾ ನಿಜ. ಗರ್ಭ ಧರಿಸುವ ಸಮಯದಿಂದ ಹಿಡಿದು ಮಗುವಿಗೆ ಜನ್ಮ ನೀಡುವ ತನಕ ತಾಯಿಯ ಪಾತ್ರ ಅತ್ಯಂತ ಮಹತ್ವದ್ದು. ಇನ್ನು ಸಾಮಾನ್ಯವಾಗಿ ಮಹಿಳೆಯರಿಗೆ ಒಂದೇ ಗರ್ಭಾಶಯ ಇರುತ್ತದೆ. ಅದರಿಂದಲೇ ಒಂದು ಮಗು, ಇಲ್ಲ ಅವಳಿ, ತ್ರಿವಳಿ ಮಕ್ಕಳು ಕೂಡಾ ಜನಿಸುವುದನ್ನ ನೋಡಿದ್ದೇವೆ. ಆದರೆ, ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ಎರಡು ಗರ್ಭಾಶಯವನ್ನು ಹೊಂದಿರುವ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ: 91ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿಗೆ ಪ್ರೇಮಾಂಕುರ – ಕುಬೇರನ ಮನಗೆದ್ದ ಚೆಲುವೆ ಯಾರು ಗೊತ್ತಾ?
ನಾಡಿಯಾ ಜಿಲ್ಲೆಯ ಶಾಂತಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಎರಡು ಗರ್ಭಾಶಯವನ್ನು ಹೊಂದಿದ್ದು, ಗರ್ಭಿಣಿಯಾಗಿದ್ದರು. ಮಹಿಳೆ ಎರಡು ಗರ್ಭಕೋಶ ಹೊಂದಿರುವುದು ವೈದ್ಯ ಲೋಕಕ್ಕೆ ಸವಾಲು ಎನ್ನಲಾಗಿತ್ತು. ಆದರೂ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸ್ತ್ರೀ ರೋಗ ತಜ್ಞೆ ಡಾ.ಪವಿತ್ರ ಬೆಪರಿ ನೇತೃತ್ವದಲ್ಲಿ ಈ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ತಾಯಿ ಮತ್ತು ಅವಳಿ ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಯರು ಎರಡು ಗರ್ಭಕೋಶವನ್ನು (Uterus) ಹೊಂದಿರುವುದ ಪ್ರಕರಣ ವೈದ್ಯಕೀಯ ಲೋಕದ ವಿಸ್ಮಯ. ಇದುವರೆಗೂ ಜಗತ್ತಿನಲ್ಲಿ ಇಂಥಾ 17 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಮೂರು ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ಎರಡು ಭ್ರೂಣಗಳು ಆ ಎರಡು ಗರ್ಭಾಶಯದಲ್ಲಿರುವುದು ಅಪರೂಪದ ವಿದ್ಯಮಾನವಾಗಿದೆ. ಮಹಿಳೆಗೆ ಬೈಕಾರ್ನುಯೇಟ್ ಗರ್ಭಾಶಯವಿದ್ದರೆ, ಇದರ ಅರ್ಥವೇನೆಂದರೆ ಅವಳ ಗರ್ಭಾಶಯವು ಹೃದಯ ಆಕಾರದಲ್ಲಿದೆ ಎಂಬುದಾಗಿದೆ. ಗರ್ಭಾಶಯವು ಭ್ರೂಣವನ್ನು ಹೊಂದಿರುವ ಮಹಿಳೆಯ ದೇಹದಲ್ಲಿನ ಅಂಗವಾಗಿದೆ (Organ). ಗರ್ಭಿಣಿಯಾಗಿದ್ದರೆ ಗರ್ಭಾಶಯದ ಆಕಾರವು ಮುಖ್ಯವಾಗಿದೆ ಏಕೆಂದರೆ ಅದು ಅವಳ ಗರ್ಭದಲ್ಲಿ ಭ್ರೂಣವು ಹೇಗೆ ಇರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಡಬಲ್ ಗರ್ಭಾಶಯವನ್ನು ಹೊಂದಿರುವ ಮಹಿಳೆಯರು ಹೆಚ್ಚಾಗಿ ಯಶಸ್ವಿ ಗರ್ಭಧಾರಣೆಯನ್ನು ಹೊಂದಿರುತ್ತಾರೆ. ಆದರೆ ಈ ಸ್ಥಿತಿಯು ಗರ್ಭಪಾತ (Abortion) ಅಥವಾ ಅಕಾಲಿಕ ಜನನದ ಅಪಾಯವನ್ನು ಹೆಚ್ಚಿಸುತ್ತದೆ. ಪ್ರಖ್ಯಾತ ಸ್ತ್ರೀರೋಗತಜ್ಞ ಡಾ. ಪಾವಿತ್ರಾ ಬೈಕಾರಾ ನಡೆಸಿದ ಈ ಯಶಸ್ವೀ ಶಸ್ತ್ರಚಿಕಿತ್ಸೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಂತಿಪುರ ಆಸ್ಪತ್ರೆಯ ಮುಂದೆ ನಿಂತು ಅವಳಿ ಮಕ್ಕಳ ತಂದೆ ಜಿತೇಂದ್ರ ಮೊಂಡಾಲ್ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.