ಅರೆಬರೆ ಬಟ್ಟೆ ತೊಟ್ಟು ಸೊಂಟ ಬಳುಕಿಸಿದ ಹುಡುಗಿಯರು – ಮಂಡ್ಯದಲ್ಲಿ ಮತದಾರರ ಮನಗೆಲ್ಲಲು ನಂಗಾನಾಚ್!

ಅರೆಬರೆ ಬಟ್ಟೆ ತೊಟ್ಟು ಸೊಂಟ ಬಳುಕಿಸಿದ ಹುಡುಗಿಯರು – ಮಂಡ್ಯದಲ್ಲಿ ಮತದಾರರ ಮನಗೆಲ್ಲಲು ನಂಗಾನಾಚ್!

ಗಿಫ್ಟ್ ಗಳ ಗಿಮಿಕ್. ಪ್ರಚಾರದ ಅಬ್ಬರ. ರೋಡ್ ಶೋನಲ್ಲೇ ಡಂಗೂರ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲೋಕೆ ಮೂರೂ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿವೆ. ಆದ್ರೆ ಮಂಡ್ಯದಲ್ಲಿ ಪುರುಷರನ್ನ ಸೆಳೆಯೋಕೆ ಹುಡುಗಿಯರನ್ನೇ ಅಖಾಡಕ್ಕೆ ಇಳಿಸಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ನಂಗಾಚಾಚ್ ಹಾವಳಿ ಶುರುವಾಗಿದೆ. ಪುರುಷ ಮತದಾರರನ್ನ ಬುಟ್ಟಿಗೆ ಹಾಕಿಕೊಳ್ಳೋಕೆ ಮೈಚಳಿ ಬಿಟ್ಟು ಸೊಂಟ ಬಳುಕಿಸೋ ಹೆಣ್ಣು ಮಕ್ಕಳನ್ನೇ ಮುಂದೆ ಬಿಟ್ಟಿದ್ದಾರೆ. ಮಂಡ್ಯದಲ್ಲಿ  ಜಾತ್ರಾ ಮಹೋತ್ಸವದಲ್ಲೇ ನಂಗಾನಾಚ್ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಗಮಂಗಲದಲ್ಲಿ ಮತ್ತೆ ಅರೆಬೆತ್ತಲೆ ಡ್ಯಾನ್ಸ್ ಮಾಡಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಅಶ್ಲೀಲ ನೃತ್ಯ ಆಯೋಜಿಸಿ ಯುವಕರು, ಪುರುಷರ ಮತದಾರರನ್ನು ಸೆಳೆಯುವ ತಂತ್ರ ನಡೆದಿದೆ.

ಇದನ್ನೂ ಓದಿ :ಬಾವಿಗೆ ಎಸೆದ ಮಗುವಿನ ಹೊಟ್ಟೆ ಸುತ್ತಿಕೊಂಡು ಕಾಪಾಡಿತು ನಾಗರಹಾವು – ಗ್ರಾಮಸ್ಥರಿಗೆ ಕಂಡಿದ್ದೆಂಥಾ ಪವಾಡ?

ಪುರುಷ ಮತದಾರನ ಮನ ಗೆಲ್ಲಲು ಜೆಡಿಎಸ್ ಶಾಸಕ ಸುರೇಶ್ ಗೌಡ ಬೆಂಬಲಿಗರು ನಂಗಾನಾಚ್ ಕಾರ್ಯಕ್ರಮ ಆಯೋಜಿಸಿದ್ದಾರೆ. ವೇದಿಕೆ ಮೇಲೆ ಮೈ ಚಳಿ ಬಿಟ್ಟು ಯುವತಿಯರು ಮೈ ಬಳುಕಿಸಿದ್ದಾರೆ. ಅಶ್ಲೀಲ ನೃತ್ಯಕ್ಕೆ ಅಪ್ರಾಪ್ತ ಬಾಲಕನನ್ನ ಬಳಸಿಕೊಂಡು ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ ಪ್ರಸಂಗವೂ ನಡೆದಿದೆ. ಸದ್ಯ ಈ ನೃತ್ಯಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಟಿ.ಚನ್ನಾಪುರ ಗ್ರಾಮದಲ್ಲಿ ಶ್ರೀ ಮಂಚಮ್ಮದೇವಿ, ಮಸಣಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆಡಿಎಸ್‌ ಶಾಸಕ ಸುರೇಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರು ವೇದಿಕೆಯಿಂದ ತೆರಳುತ್ತಿದ್ದಂತೆ ಅಶ್ಲೀಲ ನೃತ್ಯ ಪ್ರಾರಂಭವಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಶಾಸಕ ಬಂಡೆಪ್ಪ ಕಾಂಶಪುರ್, ಮಾಜಿ MLC ಅಪ್ಪಾಜಿಗೌಡ ಹೆಸರು ನಮೂದಿಸಲಾಗಿದ್ದು ಮತದಾರರ ಓಲೈಕೆಗೆ ಅಸಭ್ಯ ನೃತ್ಯ ಪ್ರದರ್ಶಿಸಲಾಗಿದೆ.

ಆರ್ಕೆಸ್ಟ್ರಾ ಹೆಸರಲ್ಲಿ ನಂಗಾನಾಚ್ ನಡೆಸಿ ಪಡ್ಡೆ ಹುಡುಗರ ಮನ ಗೆಲ್ಲಲು ಯತ್ನ ನಡೆದಿದೆ. ವೇದಿಕೆ ಮೇಲೆ ಅರೆಬರೆ ಬಟ್ಟೆ ತೊಟ್ಟು ಹುಡುಗಿಯರು ಡ್ಯಾನ್ಸ್ ಶುರು ಮಾಡ್ತಿದ್ದಂತೆ ಪುರುಷರು ಮತ್ತು ಯುವಕರೆಲ್ಲಾ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಆದ್ರೆ ಈ ಅಸಭ್ಯ ನೃತ್ಯ ನೋಡಿ ಕೆಲ ಮಹಿಳೆಯರಿಗೆ ಮುಜುಗರವಾದಂತಾಗಿ ಕಾರ್ಯಕ್ರಮದಿಂದ ಕಾಲ್ಕಿತ್ತಿದ್ದಾರೆ. ಈ ಹಿಂದೆಯೂ ನಾಗಮಂಗಲ ನಂಗಾನಾಚ್‌ಗೆ ಸುದ್ದಿಯಾಗಿತ್ತು. ಚುನಾವಣೆ ಹತ್ತಿರವಾಗ್ತಿದ್ದಂತೆ ಮತ್ತೆ ಹಳೇ ಚಾಳಿ ಮುಂದುವರೆದಿದೆ.

suddiyaana