ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ವರದಿಯಾಗಿದೆ. ಮಂಗಳವಾರ ಮುಂಜಾನೆ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಹ್ಯಾಕರ್ ಗಳು ಪ್ರೊಫೈಲ್  ಹೆಸರು ಮತ್ತು ಪ್ರೊಫೈಲ್ ಪಿಕ್ಚರ್ ಬದಲಾಯಿಸಿದ್ದಾರೆ ಎನ್ನಲಾಗಿದೆ.

ಸುಮಾರು ಆರೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಈ ಖಾತೆಯನ್ನು ಅಮೆರಿಕ ಮೂಲದ “ಯುಗ ಲ್ಯಾಬ್ಸ್” ಎಂಬ ಕ್ರಿಪ್ಟೋ ಕಂಪನಿಯ ಹೆಸರಿಗೆ ಬದಲಾಯಿಸಲಾಗಿದೆ. ಈ ಖಾತೆ ಹ್ಯಾಕ್ ಆದ ನಂತರ ಪ್ರೊಫೈಲ್ ಪಿಕ್ಚರ್, ಫೋಟೋ ಬದಲಾಯಿಸಿದ್ದರೂ, ಯಾವುದೇ ಟ್ವೀಟ್ ಗಳನ್ನು ಹ್ಯಾಕರ್ ಗಳು ಹಾಕಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮಾತು ಕೊಟ್ಟು ತಪ್ಪಿದ ಜಗತ್ತಿನ ಶ್ರೀಮಂತ ಎಲಾನ್ ಮಸ್ಕ್ – ಟ್ವಿಟರ್ ಉದ್ಯೋಗಿಗಳಿಗೆ ಇದೆಂಥಾ ಶಿಕ್ಷೆ..?

ಹ್ಯಾಕ್ ಆದ ಬಳಿಕ ಯಾವುದೇ ಹೊಸ ಪೋಸ್ಟ್​ ಮಾಡಿಲ್ಲ. ಈ ಬಗ್ಗೆ ಟ್ವಿಟ್ಟರ್​ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಅಲ್ಲದೇ ಹ್ಯಾಕ್ ಆದ ಖಾತೆಯನ್ನು ಸರಿಪಡಿಸುವಂತೆ ಕೇಳಿಕೊಳ್ಳಲಾಗಿದೆ. ಟ್ವಿಟರ್‌ನ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಅವರು ತ್ವರಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯೆನ್ ಹೇಳಿದ್ದಾರೆ.

ಈ ಹಿಂದೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ, ಟಿಡಿಪಿ ಟ್ವಿಟರ್ ಖಾತೆ, ಎಲಾನ್ ಮಸ್ಕ್, ಜೆಫ್ ಬೆಜೋಸ್, ಬಿಲ್ ಗೇಟ್ಸ್, ಬರಾಕ್ ಒಬಾಮಾ, ಜೋ ಬೈಡನ್ ಅವರ ಟ್ವಿಟ್ಟರ್ ಖಾತೆಯೂ ಹ್ಯಾಕ್ ಆಗಿತ್ತು.

suddiyaana