ವರ್ಷ ಕಳೆದ್ರೂ ನಿಲ್ಲುತ್ತಿಲ್ಲ ಪುಟಿನ್ ಯುದ್ಧದಾಹ – ರಷ್ಯಾ ಅಧ್ಯಕ್ಷನ ಹತ್ಯೆಗೆ ಆಪ್ತರೇ ಇಟ್ಟರಾ ಮುಹೂರ್ತ..?
ರಷ್ಯಾ-ಉಕ್ರೇನ್ ಯುದ್ಧ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕ್ಷಣ ಅದು. ಈಗಾಗ್ಲೇ ಉಭಯದೇಶಗಳ ನಡುವೆ ಯುದ್ಧ ಆರಂಭವಾಗಿ 1 ವರ್ಷ ಪೂರೈಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2022ರ ಫೆಬ್ರವರಿ 24ರಂದು ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗ ಯುದ್ಧವು ಒಂದು ವರ್ಷ ಕಳೆದರೂ ನಿಲ್ಲದು ಎಂಬುದರ ಬಗ್ಗೆ ಯಾರಿಗೂ ಸಣ್ಣ ಕಲ್ಪನೆ ಇರಲಿಲ್ಲ. ಉಕ್ರೇನ್‌ಗೆ ಹೋಲಿಸಿದರೆ ರಷ್ಯಾ ಬಹುದೊಡ್ಡ ಸೇನಾ ಶಕ್ತಿ ಹೊಂದಿರುವ ರಾಷ್ಟ್ರ. ಇದೇ ಶಕ್ತಿಯೊಂದಿಗೆ ಆದಷ್ಟು ಬೇಗ ಉಕ್ರೇನ್ನನ್ನ ವಶಪಡಿಸಿಕೊಳ್ಳಬಹುದು ಎಂಬ ಪುಟಿನ್ ಲೆಕ್ಕಾಚಾರ ಉಲ್ಟಾ ಆಗಿದೆ.
ಇದನ್ನೂ ಓದಿ : ಮಗುವಿಗೆ ಜನ್ಮ ಕೊಟ್ಟ ಮೇಲೆ ಕೈ ಕಾಲು ಕಳೆದುಕೊಂಡ ಅಮ್ಮ- ಎರಡು ಮಕ್ಕಳ ತಾಯಿ ಬದುಕಿದ್ದೇ ಹೆಚ್ಚು
ಸಣ್ಣ ರಾಷ್ಟ್ರವಾದ್ರೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಸರಿಸಮವಾಗಿಯೇ ಹೋರಾಟ ಮಾಡುತ್ತಿದ್ದಾರೆ. ವರ್ಷ ಕಳೆದ್ರೂ ಯುದ್ಧ ನಿಲ್ಲಿಸದ ಪುಟಿನ್ ವಿರುದ್ಧ ಝೆಲೆನ್ಸ್ಕಿ ಕಿಡಿ ಕಾರಿದ್ದಾರೆ. ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಝೆಲೆನ್ಸ್ಕಿ ಅವರ ಈ ಹೇಳಿಕೆ ಉಕ್ರೇನ್‌ನ ‘ಇಯರ್’ (Year) ಹೆಸರಿನ ಸಾಕ್ಷ್ಯಚಿತ್ರದಲ್ಲಿ (Documentary) ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿರುವ ಹಿನ್ನೆಲೆ ಶುಕ್ರವಾರ ಇಯರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
‘ರಷ್ಯಾದೊಳಗೆ ಪುಟಿನ್ ಆಡಳಿತದ ಕ್ರೂರತೆಯನ್ನು ಅನುಭವಿಸುವ ಒಂದು ಕ್ಷಣ ಖಂಡಿತವಾಗಿಯೂ ಬರುತ್ತದೆ ಮತ್ತು ನಂತರ ಬೇಟೆಗಾರರು ತಮ್ಮ ಬೇಟೆಗಾರರಲ್ಲಿ ಒಬ್ಬರನ್ನು ತಿನ್ನುತ್ತಾರೆ. ಅವರು ಕೊಲೆಗಾರನನ್ನು ಕೊಲ್ಲಲು ಕಾರಣವನ್ನು ಕಂಡುಕೊಳ್ಳುತ್ತಾರೆ’ ಎಂಬ ಕೊಮರೊವ್ ಮಾತುಗಳನ್ನು ಝೆಲೆನ್ಸ್ಕಿ ನೆನಪಿಸಿಕೊಂಡಿದ್ದಾರೆ.. ಅವರು ಕೊಲೆಗಾರನನ್ನು ಕೊಲ್ಲಲು ಕಾರಣವನ್ನು ಕಂಡುಕೊಳ್ಳುತ್ತಾರೆ, ಅದು ಕೆಲಸ ಮಾಡುತ್ತದೆಯೇ? ಹೌದು ಅದು ಕೆಲಸ ಮಾಡುತ್ತದೆ ಆದರೆ ಯಾವಾಗ? ನನಗೆ ಗೊತ್ತಿಲ್ಲ. ಪುಟಿನ್ ಹತ್ತಿರ ಇರುವವರು ಮಾತ್ರ ಅವರ ಮೇಲೆ ಕೋಪಗೊಂಡಿದ್ದಾರೆ.. ಅವರೇ ಪುಟಿನ್ ರನ್ನು ಮುಗಿಸುತ್ತಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಮೇಲೆ ಯುದ್ಧವನ್ನು ಸಾರಿದ ಬಳಿಕ ಆಗಾಗ ರಷ್ಯಾ ಅಧ್ಯಕ್ಷ ಪುಟಿನ್ ಬಗ್ಗೆ ಅವರ ಆಂತರಿಕ ವಲಯದಲ್ಲೇ ಅಸಮಾಧಾನ ಹೊಂದಿರುವ ಬಗ್ಗೆ ರಷ್ಯಾದಲ್ಲಿ ವರದಿಯಾಗಿದೆ. ಪುಟಿನ್‌ರ ಆಪ್ತ ವಲಯದವರೇ ಅವರ ಬಗ್ಗೆ ಹೆಚ್ಚು ಹತಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದ ವೇಳೆಯೂ ರಷ್ಯಾದ ಸೈನಿಕರು ಅಧ್ಯಕ್ಷನ ವಿರುದ್ಧ ದೂರುವುದು ಹಲವು ವೀಡಿಯೋಗಳಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.