ದೇಗುಲದ ತುಂಬಾ ರಾಶಿ ರಾಶಿ ಚಿನ್ನ, ಬೆಳ್ಳಿ ಆಭರಣ – ಬೆತ್ತಲೆಯಾಗಿ ಬಂದು ಬೆತ್ತಲೆಯಾಗೇ ಹೋಗಬೇಕು ಭಕ್ತರು!
ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾಳೆ. ಎಲ್ಲವನ್ನೂ ಸಾಧಿಸಿ ತೋರಿಸಿದ್ದಾಳೆ. ಪುರುಷನಷ್ಟೇ ಸರಿಸಮನಾಗಿ ಬೆಳೆಯುತ್ತಿದ್ದಾಳೆ. ಆದ್ರೂ ಕೂಡ ಕೆಲವೊಂದು ಕಡೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸಮಾನತೆ ಸಿಕ್ಕಿಲ್ಲ. ಅದ್ರಲ್ಲೂ ಕೆಲ ದೇಗುಲಗಳಲ್ಲಿ ಇಂದಿಗೂ ಮಹಿಳೆಯರಿಗೆ ಪ್ರವೇಶ ನಿರಾಕರಿಸಿಲಾಗಿದೆ.
ಭಾರತದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡುವಂತಿಲ್ಲ. ಇದನ್ನು ವಿರೋಧಿಸಿ ನಾನಾ ಹೋರಾಟ ನಡೆದಿದೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಭಾರತ ಮಾತ್ರವಲ್ಲದೆ ವಿಶ್ವದ ಕೆಲ ದೇವಸ್ಥಾನಗಳಲ್ಲೂ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಅದ್ರಲ್ಲಿ ಜಪಾನ್ ಕೂಡ ಒಂದು. ಜಪಾನ್ ನಲ್ಲಿರುವ ಒಂದು ದೇವಸ್ಥಾನಕ್ಕೆ ಮಹಿಳೆಯರು ಕಾಲಿಡುವಂತಿಲ್ಲ. ಪುರುಷರು ಕೂಡ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ಬೇಕು. ಅಷ್ಟಕ್ಕೂ ಮಹಿಳೆಯರಿಗೆ ನಿಷೇಧವಿರುವ ಜಪಾನ್ ನ ಆ ಪ್ರದೇಶ ಯಾವುದು ಗೊತ್ತಾ?
ಇದನ್ನೂ ಓದಿ : ಆನೆ ಬಂತೊಂದಾನೆ.. ಎಲೆಕ್ಷ್ರಿಕ್ ಆನೆ – ದೇವರಿಗೆ ರೋಬೋಟ್ ಆನೆಯಿಂದ ಪೂಜೆ!
ಜಪಾನ್ (Japan) ನಲ್ಲಿರುವ ಆ ದ್ವೀಪದ ಹೆಸರು ಓಕಿನೋಶಿಮಾ (Okinoshima) ದ್ವೀಪ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಿದೆ. ಇಲ್ಲಿ ಶಿಂಟೋ ಧರ್ಮದ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈ ದ್ವೀಪ ಕೊರಿಯಾಕ್ಕೆ ಹತ್ತಿರದಲ್ಲಿದೆ. ಆದ್ರೆ ಜಪಾನ್ ಗಡಿ ಭಾಗದಲ್ಲಿ ಈ ದ್ವೀಪ ಬರುತ್ತದೆ. ಸಾವಿರಾರು ವರ್ಷಗಳ ಹಿಂದಿನ ನಂಬಿಕೆಯ ಪ್ರಕಾರ ಮಹಿಳೆಯರು ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ. ಲಿಂಗ ತಾರತಮ್ಯಕ್ಕಿಂತ ಮಹಿಳೆಯರ ರಕ್ಷಣೆಯ ದೃಷ್ಟಿಯಿಂದ ಇಲ್ಲಿಗೆ ಪ್ರವೇಶ ನಿಷೇಧಿಸಲಾಗಿದೆ ಎನ್ನಲಾಗುತ್ತದೆ. ಯಾಕೆಂದ್ರೆ ಇದು ಅತ್ಯಂತ ಅಪಾಯಕಾರಿ ದ್ವೀಪವಾಗಿದೆ. ಅಷ್ಟಕ್ಕೂ ಈ ದ್ವೀಪದ ಬಗೆಗಿನ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಈ ದ್ವೀಪದ ಇತಿಹಾಸ (History) :
ಶಿಂಟೋ (Shinto) ಧರ್ಮದ ಧಾರ್ಮಿಕ ಸ್ಥಳ ಇದಾಗಿದ್ದು, ಇಲ್ಲಿ 17 ನೇ ಶತಮಾನದ ದೇವಾಲಯವಿದೆ. ದಂತಕಥೆಯ ಪ್ರಕಾರ, ನಾವಿಕರ ಸುರಕ್ಷತೆಗಾಗಿ ಮೊದಲು ಇಲ್ಲಿ ಪ್ರಾರ್ಥನೆ (Prayer) ಗಳನ್ನು ಸಲ್ಲಿಸಲಾಯಿತು. ಒಕಿತ್ಸು ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಪೂಜೆಯ ವೇಳೆಯೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಲಾಗುತ್ತದೆ.style=”color:blue;”
ಭಕ್ತರು ಪಾಲಿಸಲೇಬೇಕು ಈ ನಿಯಮ :
ದೇವಸ್ಥಾನಕ್ಕೆ ಬರುವ ಮೊದಲು ಸ್ನಾನ ಮಾಡ್ಬೇಕಾಗುತ್ತದೆ. ದ್ವೀಪವನ್ನು ಹೊಕ್ಕ ನಂತ್ರ ನಿಶ್ಚಿತ ಸಮಯಕ್ಕೆ ಅವರು ದ್ವೀಪವನ್ನು ಬಿಡಬೇಕು. ದ್ವೀಪದಿಂದ ಯಾವುದೇ ವಸ್ತುವನ್ನು ಅವರು ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೆಯೇ ದ್ವೀಪದಲ್ಲಿ ತಮಗಾದ ಅನುಭವವನ್ನು ಅವರು ಯಾರ ಬಳಿಯೂ ಹಂಚಿಕೊಳ್ಳುವಂತಿಲ್ಲ.
ದ್ವೀಪದಲ್ಲಿದೆ ಚಿನ್ನ, ಬೆಳ್ಳಿ ಆಭರಣ :
ಈ ದ್ವೀಪದಲ್ಲಿ ಏನಿದೆ ಎಂಬುದನ್ನು ಅಲ್ಲಿಗೆ ಹೋದವರು ಹೇಳುವಂತಿಲ್ಲ. ವರದಿ ಪ್ರಕಾರ ದ್ವೀಪದಲ್ಲಿ ಅನೇಕ ಬೆಲೆ ಬಾಳುವ ವಸ್ತುಗಳಿವೆ. ಚಿನ್ನ, ಬೆಳ್ಳಿಯಿಂದ ಮಾಡಿದ ವಿಗ್ರಹಗಳು ಸಾಕಷ್ಟಿವೆಯಂತೆ. ಆದ್ರೆ ದ್ವೀಪದಿಂದ ಹೊರಗೆ ಹೋಗುವಾಗ ವ್ಯಕ್ತಿ ಬರಿಗೈನಲ್ಲಿ ಹೋಗೋದು ಅನಿವಾರ್ಯ.
ಪುರುಷರು ಅನುಸರಿಸಬೇಕು ಈ ಪದ್ಧತಿ :
ಇಲ್ಲಿಗೆ ಬರುವ ಮೊದಲು ಪುರುಷರು ಕೊರಿಯಾ ಜಲಸಂಧಿಯ ನೀರಿನಲ್ಲಿ ಸ್ನಾನ ಮಾಡಬೇಕು. ನಂತ್ರ ಬೆತ್ತಲೆಯಾಗಿಯೇ ಅವರು ದ್ವೀಪಕ್ಕೆ ಬರಬೇಕು. ನಂತ್ರ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಬೇಕು.
ಎಷ್ಟು ಜನರಿಗೆ ಅವಕಾಶ :
ದ್ವೀಪಕ್ಕೆ ಜನರು ಮನಸೋಇಚ್ಛೆ ಬರುವಂತಿಲ್ಲ. ಪ್ರತಿ ವರ್ಷ 200 ಜನರನ್ನು ಮಾತ್ರ ಈ ದ್ವೀಪಕ್ಕೆ ಹೋಗಲು ಆಯ್ಕೆ ಮಾಡಲಾಗುತ್ತದೆ. ಮೇ 27 ರಂದು ಮಾತ್ರ ಇಲ್ಲಿ ಪೂಜೆ ಮಾಡಲಾಗುತ್ತದೆ. ರಕ್ಷಣೆ ಮಾತ್ರವಲ್ಲದೆ ಸ್ನಾನ ಹಾಗೂ ಬೆತ್ತಲೆ ಪ್ರವೇಶದ ಕಾರಣಕ್ಕೂ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜನರು ನಂಬಿದ್ದಾರೆ.