ಹಸೆಮಣೆ ಏರಲು ಸಜ್ಜಾದ ಶಾರ್ದೂಲ್ – ಶ್ರೇಯಸ್ ಹಾಡಿಗೆ ನವಜೋಡಿ ಭರ್ಜರಿ ಸ್ಟೆಪ್ಸ್

ಹಸೆಮಣೆ ಏರಲು ಸಜ್ಜಾದ ಶಾರ್ದೂಲ್ – ಶ್ರೇಯಸ್ ಹಾಡಿಗೆ ನವಜೋಡಿ ಭರ್ಜರಿ ಸ್ಟೆಪ್ಸ್

ಟೀಮ್‌ ಇಂಡಿಯಾ ಆಟಗಾರರ ಮದುವೆಯ ಪರ್ವ ಮುಂದುವರಿದಿದೆ. ಕೆಎಲ್‌ ರಾಹುಲ್‌, ಅಕ್ಷರ್‌ ಪಟೇಲ್‌, ಹಾರ್ದಿಕ್ ಪಾಂಡ್ಯ ಬಳಿಕ ಆಲ್ ರೌಂಡರ್‌ ಶಾರ್ದೂಲ್‌ ಠಾಕೂರ್‌ ಕೂಡ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ಇಂದು ಮುಂಬೈನಲ್ಲಿ ಅವರ ವಿವಾಹ ಸಮಾರಂಭ ನಡೆಯಲಿದ್ದು, ಉದ್ಯಮಿ ಮಿಥಾಲಿ ಪರುಲ್ಕರ್‌ ಅವರನ್ನು ವರಿಸಲಿದ್ದಾರೆ.

ಈಗಾಗಲೇ ವಿವಾಹದ ಕೆಲ ಶಾಸ್ತ್ರ ನಡೆಯುತ್ತಿದೆ. ಇದರ ಸಂತಸದ ಕೆಲ ಕ್ಷಣಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈಗ ವೈರಲ್ ಆದ ವಿಡಿಯೋದಲ್ಲಿ ಶಾರ್ದೂಲ್ ಅವರ ಮದುವೆ ಸಂಗೀತ ಸಮಾರಂಭದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ದುಬಾರಿ ವಿಲ್ಲಾ ಖರೀದಿಸಿ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ – ಅಬ್ಬಬ್ಬಾ ಅದರ ಬೆಲೆ ಕೇಳಿದ್ರೆ ಶಾಕ್ ಪಕ್ಕಾ!

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಸಮಯವಿದ್ದು, ಟೀಂ ಇಂಡಿಯಾದ ಕೆಲ ಆಟಗಾರರು ಶಾರ್ದೂಲ್ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಸಂಗೀತ ಸಮಾರಂಭದ ವೇಳೆ ಟೀಂ ಇಂಡಿಯಾದ ಆಟಗಾರರು ಹಾಡು ಹಾಡುವುದರೊಂದಿಗೆ, ಮದುಮಗನೊಂದಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ.  ಇವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರಾಗಿದ್ದು, ಹಾಡು ಹಾಡುವುದರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.

ವಾಸ್ತವವಾಗಿ, ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ಈ ವಿಡಿಯೋ ಹಂಚಿಕೊಂಡಿದೆ. ಇದರಲ್ಲಿ ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ ಹಾಡಿದ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ಕಾಣಬಹುದಾಗಿದೆ. ಮೊದಮೊದಲು ಇಬ್ಬರೂ ಜೊತೆಗೆ ಹಾಡುತ್ತಿದ್ದರು. ಆ ಬಳಿಕ ವೇದಿಕೆಯಿಂದ ಕೆಳಗಿಳಿದ ಶಾರ್ದೂಲ್, ಶ್ರೇಯಸ್ ಹಾಡಿದ ಹಾಡಿಗೆ ಭಾವಿ ಪತ್ನಿಯೊಂದಿಗೆ ಹೆಜ್ಜೆಹಾಕಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ಹಾಡಿದ ಹಾಡಿನಲ್ಲಿ ಶಾರ್ದೂಲ್ ತಮ್ಮ ಭಾವಿ ಪತ್ನಿಯೊಂದಿಗೆ ಮಾಡಿದ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಅಂದಹಾಗೆ, ಇದಕ್ಕೂ ಮೊದಲು, ಶಾರ್ದೂಲ್ ಠಾಕೂರ್ ಅವರ ಮೆಹೆಂದಿ ಸಮಾರಂಭದ ವಿಡಿಯೋ ಕೂಡ ವೈರಲ್ ಆಗಿತ್ತು, ಅದರಲ್ಲಿ ಅವರು ಹಳದಿ ಕುರ್ತಾದಲ್ಲಿ ಜಿಂಗಾಟ್ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ಕಾಣಬಹುದಾಗಿದೆ.

ಟೀಂ ಇಂಡಿಯಾದ ಆಲ್​ ರೌಂಡರ್​ ಶಾರ್ದೂಲ್, ಇಂದು ತಮ್ಮ ಬಹುದಿನಗಳ ಗೆಳತಿ ಮಿಥಾಲಿ ಪಾರುಲ್ಕರ್ ಅವರೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಮಿಥಾಲಿ ಮತ್ತು ಶಾರ್ದೂಲ್ ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಪ್ರಯಾಣ ತೊಂದರೆಗಳಿಂದಾಗಿ ಮದುವೆ ಸ್ಥಳವನ್ನು ಬದಲಿಸಬೇಕಾಯಿತು. ಇಂದು ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

suddiyaana