ಫೆಬ್ರವರಿ 27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಶಕ್ತಿಪ್ರದರ್ಶನ – ರೋಡ್ ಶೋಗೆ ಹೇಗಿದೆ ಗೊತ್ತಾ ಸಿದ್ಧತೆ..?
ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ರಾಜಕೀಯ ಅಖಾಡ ರಂಗೇರುತ್ತಿದೆ. ಮೂರೂ ಪಕ್ಷಗಳ ತಯಾರಿ ಕೂಡ ಜೋರಾಗಿದೆ. ಅದ್ರಲ್ಲೂ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇಪದೆ ರಾಜ್ಯಕ್ಕೆ ಭೇಟಿ ನೀಡ್ತಿದ್ದಾರೆ. ಸದ್ಯ ಫೆ.27ರಂದು ಕುಂದಾನಗರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಲಿದ್ದಾರೆ. ಮೋದಿ ಆಗಮನಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ನಾಡಿನ ಮಹನೀಯರು ಇತಿಹಾಸ ಸಾರುವ ಲೈವ್ ಶೋಗೆ ಸಿದ್ಧತೆ ನಡೆದಿದೆ.
ಫೆ.27ರಂದು ಬೆಳಗಾವಿ ನಗರದ ಸಿಪಿಎಡ್ ಮೈದಾನಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಬಿಜೆಪಿ ಪಕ್ಷದ ನಾಯಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ 8 ಕಿಲೋಮೀಟರ್ ರೋಡ್ ಶೋಗೆ ಭರ್ಜರಿ ಸಿದ್ಧತೆ ನಡೆದಿದ್ದು, ರೋಡ್ ಶೋ ಮಾರ್ಗದಲ್ಲಿ ಸ್ವತಃ ಪಕ್ಷದ ಧ್ವಜ, ಬಂಟಿಂಗ್ಸ್ ಕಟ್ಟಿದ ಬಿಜೆಪಿ ಶಾಸಕ ಅಭಯ ಪಾಟೀಲ್ (Abhay Patil) ರೋಡ್ ಶೋ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ ಪಕ್ಷದ ಧ್ವಜ ಕಾರ್ಯಕರ್ತರು ಕಟ್ಟುತ್ತಿದ್ದಾರೆ. 8 ಕಿಲೋಮೀಟರ್ ರೋಡ್ ಶೋ ಉದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅವಳವಡಿಕೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಸೌರಮಂಡಲದಲ್ಲಿ ನಡೆಯಿತು ಅಪರೂಪದ ಚಮತ್ಕಾರ – ಖಗೋಳದ ಕೌತುಕತೆ ನಿಮಗೂ ಕಾಣುತ್ತೆ..!
ಡಿಸಿ ನಿತೇಶ್ ಪಾಟೀಲ್ ಅವರು ತಡರಾತ್ರಿ ಸಿದ್ಧತಾ ಕಾರ್ಯ ಪರಿಶೀಲನೆ ನಡೆಸಿದ್ದಾರೆ. ರೋಡ್ ಶೋ ಮಾರ್ಗದಲ್ಲಿ 90 ಲೈವ್ ಶೋಗೆ ನಿರ್ಧಾರ ಮಾಡಲಾಗಿದ್ದು, ಅದರಲ್ಲಿ ಪ್ರಮುಖವಾಗಿ ಛತ್ರಪತಿ ಶಿವಾಜಿ ಮಹಾರಾಜರು, ವೀರ ಮದಕರಿನಾಯಕ, ವಿಶ್ವಗುರು ಬಸವಣ್ಣ, ವೀರರಾಣಿ ಕಿತ್ತೂರು ಚೆನ್ನಮ್ಮ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಸೇರಿ ಹಲವು ಮಹನೀಯರ ಇತಿಹಾಸ ಸಾರುವ ಲೈವ್ ಶೋಗೆ ನಿರ್ಧಾರ ಮಾಡಿಕೊಳ್ಳಲಾಗಿದೆ.
ವಿಧಾನಸಭಾ ಚುನಾವಣೆ ಸನಿಹದಲ್ಲಿರುವುದರಿಂದ ಬೆಳಗಾವಿಗೂ ಭೇಟಿ ನೀಡಲಿದ್ದು, ಹತ್ತು ಕಿ.ಮೀ. ರೋಡ್ ಶೋ ದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಆ ಸಮಯದಲ್ಲಿ ಹತ್ತು ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. ಬೆಳಗಾವಿ ಚನ್ನಮ್ಮ ಸರ್ಕಲ್‌ನಿಂದ ಮಾಲಿನಿ ಸಿಟಿಯವರೆಗೆ ಭರ್ಜರಿ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಹತ್ತು ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋ ನಡೆಯುವ ಅಕ್ಕಪಕ್ಕದ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ನಾಲ್ಕೈದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.