ಬೆಂಕಿ ಹಚ್ಚಿ ಪ್ರಾಂಶುಪಾಲರನ್ನೇ ಕೊಂದ ವಿದ್ಯಾರ್ಥಿ – ಮಾರ್ಕ್ಸ್ ಕಾರ್ಡ್ ಗಾಗಿ ಕಾಲೇಜಿನಲ್ಲೇ ಅಟ್ಟಹಾಸ!

ಬೆಂಕಿ ಹಚ್ಚಿ ಪ್ರಾಂಶುಪಾಲರನ್ನೇ ಕೊಂದ ವಿದ್ಯಾರ್ಥಿ – ಮಾರ್ಕ್ಸ್ ಕಾರ್ಡ್ ಗಾಗಿ ಕಾಲೇಜಿನಲ್ಲೇ ಅಟ್ಟಹಾಸ!

ಗುರು ಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಅನ್ನೋ ಮಾತೇ ಇದೆ. ನಮ್ಮ ಸಂಸ್ಕೃತಿಯಲ್ಲಿ ಗುರುಗಳಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಆದ್ರೆ ಅಂಕಪಟ್ಟಿ ನೀಡಲು ವಿಳಂಬ ಮಾಡಿದ್ರು ಅನ್ನೋ ಒಂದೇ ಕಾರಣಕ್ಕೆ ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿ ವಿದ್ಯಾರ್ಥಿಯೇ ಕೊಂದು ಹಾಕಿದ್ದಾನೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಇಂಥಾದ್ದೊಂದು ಅಟ್ಟಹಾಸ ನಡೆದಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿಯೊಬ್ಬ ಅಂಕಪಟ್ಟಿ ನೀಡಲು ವಿಳಂಬ ಮಾಡಿದಕ್ಕಾಗಿ ಮಹಿಳಾ ಪ್ರಾಂಶುಪಾಲರೊಬ್ಬರ ಮೇಲೆ ಬೆಂಕಿ ಹಚ್ಚಿದ್ದಾನೆ.  ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ (Vimukta Sharma) ಎಂಬುವವರ ಮೇಲೆ ಕಾಲೇಜಿನ ಹಿರಿಯ ಅಶುತೋಷ್ ಶ್ರೀವಾಸ್ತವ ಬೆಂಕಿ ಹಚ್ಚಿರುವ ಪರಿಣಾಮ ಅವರು ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವಿಮುಕ್ತ ಶರ್ಮಾ ವವರ ಸಹೋದರ ಅರವಿಂದ್ ತಿವಾರಿ ನನ್ನ ತಂಗಿ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮದುವೆ ವೇಳೆಯೇ ಹೃದಯಾಘಾತದಿಂದ ಮದುಮಗಳು ಬಲಿ – ತಂಗಿಗೇ ತಾಳಿ ಕಟ್ಟಿದ ಮದುಮಗ!

ಫೆಬ್ರವರಿ 20 ರಂದು ಸಿಮ್ರೋಲ್ ಪ್ರದೇಶದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ (24) ತನ್ನ ಬಿ.ಫಾರ್ಮಾ ಅಂಕಪಟ್ಟಿ ನೀಡಿಲ್ಲ ಎಂದು ಆರೋಪಿಸಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪ್ರಾಂಶುಪಾಲೆ ವಿಮುಕ್ತ ಶರ್ಮಾ ಅವರ ದೇಹ 90 ಪ್ರತಿಶತದಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಆಕೆಯ ಕಾಲೇಜು ಸಹೋದ್ಯೋಗಿಗಳು ಆಕೆಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಆಕೆಯನ್ನು ಚೋತ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದೋರ್ ಆಡಳಿತವು ಅಶುತೋಷ್ ಶ್ರೀವಾಸ್ತವ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಮೂಲಕ ವಿಚಾರಣೆ ಪ್ರಾರಂಭಿಸಿದೆ. ತನಿಖೆಯ ಸಮಯದಲ್ಲಿ, ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು, ಮಹಿಳಾ ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿ ಆರೋಪಿಗಳು ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿ ಎರಡು ಮೂರು ದೂರುಗಳನ್ನು ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ಪಿಟಿಐಗೆ ತಿಳಿಸಿದ್ದಾರೆ.

ವಿಮುಕ್ತ ಶರ್ಮಾ ಅವರಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಸುಟ್ಟ ಗಾಯಗಳಾಗಿದ್ದ ಶ್ರೀವಾಸ್ತವ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಎಂ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಆರೋಪಿಸಿದ್ದು, ಪೊಲೀಸರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಆರೋಪಿಗಳು ಈ ಹಿಂದೆ ಕಾಲೇಜು ಪ್ರಾಧ್ಯಾಪಕರೊಬ್ಬರಿಗೆ ಚಾಕುವಿನಿಂದ ಇರಿದಿದ್ದು, ಕ್ಯಾಂಪಸ್‌ನಲ್ಲಿ ಹಲವು ಬಾರಿ ಗಲಾಟೆ ಸೃಷ್ಟಿಸಿದ್ದರು. ಈ ಹಿಂದೆಯೂ ಹಲವು ಬಾರಿ ಕಾಲೇಜು ಪ್ರಾಂಶುಪಾಲರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದರು.

suddiyaana