ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ

ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ

ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕರಿಸಿದ್ದಾರೆ. ನಿಕಟ ಪೂರ್ವ ಕಮಿಷನರ್ ಎನ್.ಶಶಿಕುಮಾರ್, ಕುಲದೀಪ್ ಆರ್ ಜೈನ್ ಗೆ  ಅಧಿಕಾರ ಹಸ್ತಾಂತರಿಸಿದರು. ಬೆಂಗಳೂರು ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿಯಾಗಿದ್ದ ಕುಲದೀಪ್ ಜೈನ್ ಅವರನ್ನು ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಎನ್.ಶಶಿಕುಮಾರ್ ಅವರು ರೈಲ್ವೇ ಡಿಐಜಿ ಆಗಿ ವರ್ಗಾವಣೆ ಆಗಿದ್ದಾರೆ. 2011ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿರುವ ಕುಲದೀಪ್ ಆರ್.ಜೈನ್, ಮೂಲತಃ ರಾಜಸ್ಥಾನದವರಾಗಿದ್ದು, ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಐಪಿಎಸ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿದ್ದರು.

ಇದನ್ನೂ ಓದಿ:  ಭ್ರಷ್ಟಾಚಾರದ ಆರೋಪದ ಬೆನ್ನಲ್ಲೇ ಎನ್.ಶಶಿಕುಮಾರ್ ಎತ್ತಂಗಡಿ – 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ!

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಕುಲದೀಪ್ ಆರ್ ಜೈನ್, ‘ಎಲ್ಲರ ಸಹಯೋಗದೊಂದಿಗೆ ಒಳ್ಳೆಯ ರೀತಿ ಕೆಲಸ ಮಾಡುತ್ತೇನೆ. ಮಂಗಳೂರು ಬಹಳ ಚೆನ್ನಾಗಿದೆ. ಹತ್ತು ವರ್ಷದ ಹಿಂದೆ ಪ್ರೊಬೆಷನರಿಯಾಗಿ ಇಲ್ಲಿಗೆ ಬಂದಿದ್ದೆ. ಇಲ್ಲಿ ಚಾಲೆಂಜ್ ಅನ್ನೋದಕ್ಕಿಂತ ದಿನನಿತ್ಯ ಸರಿಯಾಗಿ ಕೆಲಸ ಮಾಡಬೇಕು. ಸೂಪರ್ ವಿಷನ್, ಸಂಪರ್ಕ ಚೆನ್ನಾಗಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ಅಕ್ರಮ ಚಟುವಟಿಕೆ ಮಾಹಿತಿ ಬಂದ್ರೆ ಕ್ರಮ ನಿಶ್ಚಿತ. ಸೂಕ್ಷ್ಮವಾಗಿದ್ದ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡ್ತೀನಿ. ಭ್ರಷ್ಟಾಚಾರವನ್ನ ಸಹಿಸಲ್ಲ, ಯಾವುದೇ ಮಾಹಿತಿ ಇದ್ರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ತೀನಿ. ನನ್ನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ನಾನು ಕೇಳಿಕೊಳ್ಳುತ್ತೇನೆ. ಯಾವುದಕ್ಕೂ ಅವಕಾಶ ಕೊಡದೇ ಕೆಲಸ ಸರಿಯಾಗಿ ಮಾಡಿ ಜನರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಿ ಭ್ರಷ್ಟಾಚಾರದ ಬಗ್ಗೆ ಮೊದಲು ನಾನೇ ಕಣ್ಗಾವಲು ಇಡ್ತೇನೆ. ಟ್ರಾಫಿಕ್ ಜಾಗೃತಿ ಮತ್ತು ಕ್ರಮಗಳ ಬಗ್ಗೆ ವಿಶೇಷ ಗಮನ ಹರಿಸುತ್ತೇನೆ. ಮಂಗಳೂರಿನ ಜನರು ದಯವಿಟ್ಟು ಟ್ರಾಫಿಕ್ ರೂಲ್ಸ್ ಪಾಲಿಸಿ. ನಾನು ಹುಟ್ಟಿದ್ದು ರಾಜಸ್ಥಾನ, ಬೆಳೆದಿದ್ದು ಚೆನ್ನೈನಲ್ಲಿ. 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿ, ದ.ಕ ಜಿಲ್ಲೆಯಲ್ಲಿ ಪ್ರೊಬೆಷನರಿಯಾಗಿದ್ದೆ. ಚನ್ನಪಟ್ಟಣ ಎಎಸ್ಪಿ, ಚಾಮರಾಜನಗರ ಎಸ್ಪಿ, ಬಿಜಾಪುರ ಎಸ್ಪಿ, ಬೆಂಗಳೂರು ಸಿಟಿ ಕ್ರೈಂ ಮತ್ತು ಟ್ರಾಫಿಕ್ ಡಿಸಿಪಿ, ಕೆಎಸ್ಆರ್ಪಿ ಹಾಗೂ ಎಸಿಬಿಯಲ್ಲಿ ಕೆಲಸ ಮಾಡಿದ್ದೇನೆ’ ಎಂದರು.

 

suddiyaana