ಸಿಂ‘ಹಾಸನ’ ಗಟ್ಟಿ ಮಾಡಿಕೊಂಡರಾ ಭವಾನಿ ರೇವಣ್ಣ..?- ಟಿಕೆಟ್ ಫೈನಲ್ ಗೂ ಮುನ್ನವೇ ಅಬ್ಬರದ ಪ್ರಚಾರ!

ಸಿಂ‘ಹಾಸನ’ ಗಟ್ಟಿ ಮಾಡಿಕೊಂಡರಾ ಭವಾನಿ ರೇವಣ್ಣ..?-  ಟಿಕೆಟ್ ಫೈನಲ್ ಗೂ ಮುನ್ನವೇ ಅಬ್ಬರದ ಪ್ರಚಾರ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕವೇ ಘೋಷಣೆ ಆಗಿಲ್ಲ. ಆದ್ರೆ ಘೋಷಣೆಗೂ ಮುನ್ನವೇ ಹಾಸನದ ಜೆಡಿಎಸ್ ಟಿಕೆಟ್ ವಿಚಾರ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂಘೋಷಣೆ ಮಾಡಿಕೊಂಡ ಬಳಿಕ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಕುಟುಂಬದವರಿಗೆ ಬಿಲ್​ಕುಲ್ ಟಿಕೆಟ್ ಕೊಡಲ್ಲ ಅಂತಾ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಷ್ಟಾದ್ರೂ ಭವಾನಿ ರೇವಣ್ಣ ಸಿಂಹಾಸನ ಗಟ್ಟಿ ಮಾಡಿಕೊಂಡಂತೆ ಕಾಣ್ತಿದೆ.

ಇದನ್ನೂ ಓದಿ : ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ರೆಡಿ – ಚುನಾವಣೆಗೆ ಬಿಜೆಪಿ ಬಿಡುತ್ತಾ ‘ರಾಮ’ಬಾಣ..? 

ಹಾಸನ ವಿಧಾನಸಭಾ ಕ್ಷೇತ್ರದ ಟೆಕೆಟ್ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಟಿಕೆಟ್ ಫೈನಲ್​ಗೂ ಮುನ್ನವೇ ರೌಂಡ್ಸ್ ಶುರು ಮಾಡಿದ್ದಾರೆ. ದೊಡ್ಡಪುರ ರಾಮೇಶ್ವರ ದೇಗುಲದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಭವಾನಿ ರೇವಣ್ಣ ಹಾಸನ ಕ್ಷೇತ್ರದ ಮುಂದಿನ ಎಂಎಲ್‌ಎ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲ ಅಭಿಮಾನಿಗಳು ಪೋಸ್ಟ್ ಕೂಡ ಹಾಕುತ್ತಿದ್ದಾರೆ. ಅವರ ಓಡಾಟ, ದೇಗುಲಗಳಲ್ಲಿ ಪೂಜೆ ಗಮನಿಸಿದರೆ ಹಾಸನ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದು ಗುಟ್ಟಾಗೇನೂ ಉಳಿಯುವುದಿಲ್ಲ.

ಇನ್ನು ಡಿಸೆಂಬರ್ ತಿಂಗಳಿನಲ್ಲಿಯೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿತ್ತು. 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಘೋಷಣೆ ಕೂಡ ಮಾಡಿತ್ತು. ಆದ್ರೆ ತನ್ನದೇ ಭದ್ರಕೋಟೆಯಾಗಿರುವ ಹಾಸನದ ಯಾವ ಕ್ಷೇತ್ರಕ್ಕೂ ಅಭ್ಯರ್ಥಿಯ ಹೆಸರನ್ನ ಘೋಷಿಸಿರಲಿಲ್ಲ. ಆದ್ರೂ ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅನ್ನುವಂತೆ ಸಂಚಾರ ಶುರು ಮಾಡಿದ್ದಾರೆ. ಭವಾನಿಗೆ ಪತಿ ರೇವಣ್ಣ, ಪುತ್ರರಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸಾಥ್ ನೀಡುತ್ತಿರೋದು ಭಾರೀ ಕುತೂಹಲಕ್ಕೂ ಕಾರಣವಾಗಿದೆ.

suddiyaana