ಕಡಲತೀರದಲ್ಲಿ ತೇಲಿಬಂದ ಲೋಹದ ಚೆಂಡು – ಇದು ಬಂದಿದ್ದು ಎಲ್ಲಿಂದ ? ಇದರ ಹಿಂದಿದೆಯಾ ನೆರೆರಾಷ್ಟ್ರದ ಸಂಚು?

ಕಡಲತೀರದಲ್ಲಿ ತೇಲಿಬಂದ ಲೋಹದ ಚೆಂಡು – ಇದು ಬಂದಿದ್ದು ಎಲ್ಲಿಂದ ? ಇದರ ಹಿಂದಿದೆಯಾ ನೆರೆರಾಷ್ಟ್ರದ ಸಂಚು?

ಇತ್ತೀಚೆಗಷ್ಟೇ ಅಮೆರಿಕಾದ ಆಕಾಶದಲ್ಲಿ ದೊಡ್ಡ ಗಾತ್ರದ ನಿಗೂಢ ಬಲೂನ್‌ಗಳನ್ನು ಅಲ್ಲಿನ ರಕ್ಷಣಾ ಪಡೆ ಹೊಡೆದುರುಳಿಸಿತ್ತು. ಚೀನಾ ಬೇಹುಗಾರಿಕೆ ನಡೆಸುವ ಸಲುವಾಗಿ ನಿಗೂಢ ಬಲೂನ್‌ಗಳನ್ನು ಅಮೆರಿಕಾದ ಆಕಾಶದಲ್ಲಿ ಹಾರಿ ಬಿಟ್ಟಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಜಪಾನ್‌ನ ಕಡಲ ತೀರದಲ್ಲಿ ನಿಗೂಢವಾದ ಬೃಹದಾಕಾರದ ಲೋಹದ ಚೆಂಡು ಸಮುದ್ರ ತೀರಕ್ಕೆ ತೇಲಿ ಬಂದಿದೆ. ಸುಮಾರು 1.5 ಮೀಟರ್ ಅಗಲದ ಈ ನಿಗೂಢ ಲೋಹದ ಚೆಂಡು ಜಪಾನ್‌ ಕರಾವಳಿಯ ಹಮಾಮಟ್ಸು ನಗರದ ಎನ್ಶು ಕಡಲತೀರದಲ್ಲಿ ಕಾಣಿಸಿಕೊಂಡಿದೆ. ಅಚ್ಚರಿ ಜೊತೆಗೆ ಗಾಬರಿ ಮೂಡಿಸಿದ ಈ ಲೋಹದ ಚೆಂಡು ಪತ್ತೆಯಾಗುತ್ತಿದ್ದಂತೆ ಅಲ್ಲಿನ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ನುರಿತ ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ತಜ್ಞರು ಎಕ್ಸರೇ ನಡೆಸಿ ನೋಡಿದಾಗ ಒಳಭಾಗ ಟೊಳ್ಳಾಗಿದೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ:  ಗಂಡನ ತಂಗಿಯನ್ನೇ ಮದುವೆಯಾದ ಎರಡು ಮಕ್ಕಳ ತಾಯಿ – ‘ಅತ್ತಿಗೆ-ನಾದಿನಿ’ ಕಲ್ಯಾಣದ ಕಹಾನಿ ಏನು?

ನೆರೆಯ ದೇಶಗಳಾದ ಉತ್ತರ ಕೊರಿಯಾ ಅಥವಾ ಚೀನಾದ ಬೇಹುಗಾರಿಕೆಯ ಸಾಧನವೇ ಎಂಬ ಬಗ್ಗೆ ಕೆಲಕಾಲ ಗೊಂದಲ ಉಂಟಾಗಿತ್ತು. ಆದರೆ ಇದು ಮೂರಿಂಗ್  ಬೋಯ್ ಆಗಿರಬಹುದು ಎಂದು ಶಂಕಿಸಲಾಗಿದೆ. ಮೂರಿಂಗ್ ಬೋಯ್ ಎಂದರೆ  ತೇಲುವ ನೀರಿನಲ್ಲಿ ಹಡಗು, ದೋಣಿಗಳು ಲಂಗರು ಹಾಕಲು ಅಥವ ಆಳವಾದ ನೀರಿನಲ್ಲಿ ದೋಣಿಗಳನ್ನು ಲಂಗರು ಹಾಕಿಸಲು ಬಳಸುವ ಸಾಧನ. ಇದರ ಬಗ್ಗೆ ಹೆಚ್ಚಿನ ತನಿಖೆಗಾಗಿ ಇದರ ಫೋಟೋಗಳನ್ನು ಜಪಾನ್‌ನ ಕೋಸ್ಟ್‌ ಗಾರ್ಡ್‌ಗೆ (coast guard) ಕಳುಹಿಸಲಾಗಿದೆ.

ಇತ್ತೀಚೆಗಷ್ಟೇ ಅಮೆರಿಕಾದ ಆಕಾಶದಲ್ಲಿ ದೊಡ್ಡ ಗಾತ್ರದ ನಿಗೂಢ ಬಲೂನ್‌ಗಳನ್ನು ಅಲ್ಲಿನ ರಕ್ಷಣಾ ಪಡೆ ಹೊಡೆದುರುಳಿಸಿದ ಘಟನೆ ನಡೆದಿತ್ತು, ಚೀನಾ ಬೇಹುಗಾರಿಕೆ ನಡೆಸುವ ಸಲುವಾಗಿ ಈ ನಿಗೂಢ ಬಲೂನ್‌ಗಳನ್ನು ಹಾರಿ ಬಿಟ್ಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಅದು ಸಂಶೋಧನೆಗಾಗಿ ಹಾರಿಬಿಟ್ಟ ಬಲೂನ್ ಎಂದು ತೇಪೆ ಹಾಕಿತ್ತು. ಈ ಘಟನೆ ಮಾಸುವ ಮೊದಲೇ ಜಪಾನ್‌ನ ಕಡಲ ತೀರದಲ್ಲಿ ಪತ್ತೆಯಾದ ಈ ನಿಗೂಢವಾದ ಬೃಹದಾಕಾರದ ಲೋಹದ ಚೆಂಡು ಸಮುದ್ರ ತೀರಕ್ಕೆ ತೇಲಿ ಬಂದಿರುವುದು ಕೆಲಕಾಲ ಗೊಂದಲಕ್ಕೂ ಕಾರಣವಾಗಿತ್ತು.

 

suddiyaana