ದೆಹಲಿ ಪಾಲಿಕೆ ಹೈಡ್ರಾಮಾ ಅಂತ್ಯ! – ಆಪ್ಗೆ ಮೇಯರ್ ಮಟ್ಟ!
ದೆಹಲಿ ಮಹಾನಗರ ಪಾಲಿಕೆಗೆ ಕೊನೆಗೂ ಮೇಯರ್ ಆಯ್ಕೆಯಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದು, ಆಮ್ ಆದ್ಮಿ ಪಕ್ಷ 134 ಸ್ಥಾನಗಳನ್ನ ಪಡೆದು ಗೆದ್ದು ಬೀಗಿತ್ತು. ಆದ್ರೆ, ಮೇಯರ್ ಆಯ್ಕೆ ವೇಳೆ ಬಿಜೆಪಿ ಮತ್ತು ಆಪ್ ಮಧ್ಯೆ ಭಾರಿ ಗಲಾಟೆ ನಡೆದಿತ್ತು. ಜನವರಿ 6, ಜನವರಿ 24 ಮತ್ತು ಫೆಬ್ರವರಿ 6ರಂದು ಒಟ್ಟು ಮೂರು ಬಾರಿಯೂ ಗದ್ದಲ, ಗಲಾಟೆಯಾಗಿ ಮೇಯರ್ ಆಯ್ಕೆಯನ್ನ ಮುಂದೂಡಲಾಗಿತ್ತು. ಅಂತಿಮವಾಗಿ ಇಂದು ಮೇಯರ್ ಸ್ಥಾನಕ್ಕೆ ಮತದಾನ ನಡೆದಿದ್ದು, ಆಪ್ನ ಶೆಲ್ಲಿ ಒಬೆರಾಯ್ 150 ಮತಗಳನ್ನ ಪಡೆದು ಮೇಯರ್ ಪಟ್ಟಕ್ಕೇರಿದ್ದಾರೆ. ಇನ್ನು ಬಿಜೆಪಿಯ ರೇಖಾ ಗುಪ್ತಾ ಕೇವಲ 34 ಮತಗಳನ್ನಷ್ಟೇ ಪಡೆದಿದ್ದಾರೆ. ಇನ್ನು ತಮ್ಮ ಪಕ್ಷದ ಅಭ್ಯರ್ಥಿ ಮೇಯರ್ ಆಗುತ್ತಲೇ, ಗೂಂಡಾಗಳು ಸೋತಿದ್ದಾರೆ. ಜನರು ಗೆದ್ದಿದ್ದಾರೆ ಅಂತಾ ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ರು.