ಕೋವಿಡ್‌ಗೆ ಹೆದರಿ ಮೂರು ವರ್ಷಗಳಿಂದ ಗೃಹಬಂಧನ – ಹೊರ ಪ್ರಪಂಚಕ್ಕೆ ಕೊನೆಗೂ ಕಾಲಿಟ್ಟ ತಾಯಿ ಮಗ

ಕೋವಿಡ್‌ಗೆ ಹೆದರಿ ಮೂರು ವರ್ಷಗಳಿಂದ ಗೃಹಬಂಧನ – ಹೊರ ಪ್ರಪಂಚಕ್ಕೆ ಕೊನೆಗೂ ಕಾಲಿಟ್ಟ ತಾಯಿ ಮಗ

ಕೋವಿಡ್ ಕಂಟಕದಿಂದ ಇಡೀ ಜಗತ್ತೇ ನಲುಗಿಹೋಗಿತ್ತು. ಈಗ ಮತ್ತೆ ಯಥಾಸ್ಥಿತಿಯಲ್ಲಿ ಜನಜೀವನ ನಡೆಯುತ್ತಿದೆ. ಹೀಗಿದ್ದರೂ ಕೂಡಾ ಇಲ್ಲೊಬ್ಬ ಮಹಿಳೆ ಕೋವಿಡ್‌ಗೆ ಹೆದರಿ 2020ರಿಂದ ಮನೆಯಿಂದ ಹೊರಗೆ ಬಂದಿಲ್ಲ. ಗುರುಗ್ರಾಮ್‌ನ ಮಾರುತಿ ಕುಂಜ್ ನಗರ ನಿವಾಸಿ ಮುನ್ಮುನ್ ಮಾಝಿ 2020 ರಿಂದ ತಾನು ಹೊರಬಾರದೆ ತನ್ನ ಮಗನನ್ನೂ ಬಿಡದೇ ಮನೆ ಒಳಗೆ ಕೂಡಿ ಹಾಕಿದ್ದಾಳೆ. ಫೆಬ್ರವರಿ 21ರಂದೂ ಕೊನೆಗೂ ಆರೋಗ್ಯ, ಪೊಲೀಸ್ ಮತ್ತು ಮಕ್ಕಳ ಸೇವಾ ಇಲಾಖೆಯ ಅಧಿಕಾರಿಗಳ ತಂಡ ತಾಯಿ ಮಗನನ್ನು ಗೃಹ ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್‌ಗೆ ಈ ಮಹಿಳೆ ಎಷ್ಟು ಹೆದರಿಕೊಂಡಿದ್ರು ಅಂದ್ರೆ, ಸ್ವತಃ ಗಂಡನನ್ನು ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಈಕೆಯ ಗಂಡ ಕೇವಲ ವಿಡೀಯೋ ಕಾಲ್ ನಲ್ಲಿ ಮಾತ್ರ ಮಾತನಾಡುತ್ತಿದ್ದರು. ದಿನಬಳಕೆಗೆ ಬೇಕಾದ ವಸ್ತುಗಳನ್ನು ತಂದು ಮನೆಬಾಗಿಲಿನಲ್ಲಿ ಗಂಡನೇ ಇಟ್ಟು ಬರುತ್ತಿದ್ದರು. 10 ವರ್ಷದ ಮಗನಿಗೆ ಇನ್ನೂ ಕೂಡಾ ಆನ್‌ಲೈನ್‌ನಲ್ಲೇ ಶಿಕ್ಷಣಕೊಡಿಸುತ್ತಿದ್ದರು.

ಇದನ್ನೂ ಓದಿ:  ಕೃಷಿ ಬಗ್ಗೆ ಮಾತಾಡ್ತಿದ್ದ ರೈತನನ್ನ ಅರ್ಧಕ್ಕೇ ತಡೆದ ಸಿಎಂ – ವೇದಿಕೆ ಮೇಲೆಯೇ ತಾಳ್ಮೆ ಕಳೆದುಕೊಂಡಿದ್ದೇಕೆ..?

ಗಂಡ ಸುಜನ್ ಮಾಝಿ ಪ್ರೈವೇಟ್ ಕಂಪನಿ ಒಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2020 ರಲ್ಲಿ ಲಾಕ್ಡೌನ್ ನಿಯಮಗಳು ಸಡಿಲಿಸಿದ ನಂತರವೂ ಸುಜನ್ ತನ್ನ ಪತ್ನಿ ಜೊತೆ ವಾಸವಾಗಲು ಸಾಧ್ಯವಾಗಿರಲಿಲ್ಲ. ಸುಜನ್ ಮಾಝಿ ಅವರು ತಮ್ಮ ಪತ್ನಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹತ್ತಿರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಮೂರು ವರ್ಷಗಳಿಂದ ಅವರು ಮುನ್ಮುನ್ ಮತ್ತು ಪುತ್ರನೊಂದಿಗೆ ವೀಡಿಯೊ ಕರೆ ಮೂಲಕ ಸಂಪರ್ಕದಲ್ಲಿದ್ದರು. ಇನ್ನು ಸ್ವತಃ ಗೃಹಬಂಧನದಲ್ಲಿದ್ದ ಮುನ್ಮುನ್ ಮಾಝಿ, ಅಡುಗೆಗೆ ಗ್ಯಾಸ್ ಉಪಯೋಗಿಸಿದರೆ ಅದನ್ನು ತುಂಬಬೇಕಾಗುತ್ತದೆ ಎಂದು ಇಂಡಕ್ಷನ್ನಲ್ಲಿ ಅಡುಗೆ ಮಾಡುತ್ತಿದ್ದರು. ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕಾಗಿರುವುದರಿಂದ ಅವರು ತಮ್ಮ ಮಗನಿಗೆ ಸ್ಮಾರ್ಟ್ಫೋನ್ ಬಳಸಲು ಅವಕಾಶ ನೀಡಿದ್ದರು.

suddiyaana