ಶನಿಮಹಾತ್ಮ ದೇಗುಲಕ್ಕೆ ಮಾಂಸದ ಹಾರ ತಂದು ಕೊಟ್ಟ ದುಷ್ಟರು – ಮಾಲೆ ಹಾಕುವ ಮುನ್ನವೇ ನಡೆಯಿತು ಚಕಿತ!

ಶನಿಮಹಾತ್ಮ ದೇಗುಲಕ್ಕೆ ಮಾಂಸದ ಹಾರ ತಂದು ಕೊಟ್ಟ ದುಷ್ಟರು – ಮಾಲೆ ಹಾಕುವ ಮುನ್ನವೇ ನಡೆಯಿತು ಚಕಿತ!

ದೇವರು ಅಂದ್ರೆ ಜನ ಸಾಮಾನ್ಯವಾಗಿ ಭಯ, ಭಕ್ತಿಯಿಂದ ನಡೆದುಕೊಳ್ತಾರೆ. ಕೆಲವರು ದೇವರನ್ನ ನಂಬದೇ ಇದ್ರೂ ಅದನ್ನ ದೂಷಿಸೋಕೆ ಹೋಗಲ್ಲ. ಆದ್ರೆ ಇಲ್ಲಿ ಪಾಪಿಗಳು ದೇಗುಲಕ್ಕೆ ಬಂದು ದೇವರಿಗೆ ಮಾಂಸದ ಹಾರವನ್ನ ಕೊಟ್ಟು ಹೋಗಿದ್ದಾರೆ. ಪ್ಲಾಸ್ಟಿಕ್ ಪೇಪರ್ ಒಳಗೊಂಡ ಹಾರದಲ್ಲಿ ಮಾಂಸದ ತುಂಡು ಇಟ್ಟು ದೇಗುಲದ ಸಿಬ್ಬಂದಿಗೆ ನೀಡಿದ್ದಾರೆ.

ಇದನ್ನೂ ಓದಿ :  ಕ್ಲಾಸ್ ರೂಮ್ ​ನಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲದೆ ಸಿಟ್ಟಾದ ಪ್ರೊಫೆಸರ್ – ಕಾಲೇಜಿನಲ್ಲಿ ಅಸಲಿಗೆ ಆಗಿದ್ದೇನು..!?

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ. ದೇವಾಲಯಕ್ಕೆ ಬಂದ ಕಿಡಿಗೇಡಿಗಳು, ದೇವರಿಗೆ ಹಾರ ಹಾಕಿ ಎಂದು ಪ್ಲಾಸ್ಟಿಕ್ ಪೇಪರ್ ಒಳಗೊಂಡ ಹಾರದಲ್ಲಿ ಮಾಂಸದ ತುಂಡು ಇಟ್ಟು ಸಿಬ್ಬಂದಿಗೆ ನೀಡಿದ್ದಾರೆ, ಇಬ್ಬರು ಅಪರಿಚಿತ ಯುವಕರಿಂದ ಕೃತ್ಯ ನಡೆದಿದೆ. ಕಿಡಿಗೇಡಿಗಳ ವಿರುದ್ಧ ದೊಡ್ಡಬೆಳವಂಗಲ‌ ಪೊಲೀಸ್ ಠಾಣೆಗೆ ದೇವಾಲಯದ ಸಿಬ್ಬಂದಿ ದೂರು ನೀಡಿದ್ದಾರೆ.

ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನಕ್ಕೆ ಇಬ್ಬರು ಯುವಕರು ಬಂದಿದ್ದಾರೆ. ದೇವರಿಗೆ ಹಾಕಿ ಎಂದು ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಗಡೆ ಮಾಂಸವಿಟ್ಟು ದೇವಸ್ಥಾನದ ಸಿಬ್ಬಂದಿಗೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕವರ್ ತೆಗೆದುಕೊಂಡ ಸಿಬ್ಬಂದಿ ದೇವರಿಗೆ ಹಾರ ಹಾಕಲೆಂದು ಗರ್ಭಗುಡಿಯೊಳಗೆ ಹೋಗುವಾಗ ಮಾಂಸದ ತುಂಡು ಹಾರದಿಂದ​ ಕೆಳಗೆ ಬಿದ್ದಿದೆ. ಕೂಡಲೇ ದೇವಸ್ಥಾನದ ಸಿಬ್ಬಂದಿ ಕವರ್​ ಹೊರಗೆ ಎಸೆದಿದ್ದಾರೆ. ಇನ್ನು ಈ ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳು ದೇವಸ್ಥಾನಕ್ಕೆ ಬಂದು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೇವಾಲಯದ ಸಿಬ್ಬಂದಿ ದೊಡ್ಡಬೆಳವಂಗಲ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಪೇಪರ್ ಒಳಗೊಂಡ ಹಾರಗಳನ್ನು ನಿಷೇಧಿಸಿದೆ.

suddiyaana