ಕ್ಲಾಸ್ ರೂಮ್ ನಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲದೆ ಸಿಟ್ಟಾದ ಪ್ರೊಫೆಸರ್ – ಕಾಲೇಜಿನಲ್ಲಿ ಅಸಲಿಗೆ ಆಗಿದ್ದೇನು..!?
ಕಾಲೇಜ್ನಲ್ಲಿ ಪ್ರೊಫೆಸರ್ ಕ್ಲಾಸ್ಗೆ ಬಂದಾಗ ಒಬ್ಬ ವಿದ್ಯಾರ್ಥಿಯು ಅಲ್ಲಿ ಇಲ್ಲದಿದ್ದಲ್ಲಿ ಪ್ರೊಫೆಸರ್ ಪರಿಸ್ಥಿತಿ ಏನಾಗಬಹುದು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮಾಸ್ ಬಂಕ್ ಮಾಡಿದ್ರೂ ಒಂದಿಷ್ಟು ವಿದ್ಯಾರ್ಥಿಗಳು ಕ್ಲಾಸ್ ನಲ್ಲಿ ಕಂಡು ಬರೋದು ಸಾಮಾನ್ಯ. ಆದ್ರೆ ಕ್ಲಾಸ್ ಗೆ ಕ್ಲಾಸೇ ಪೂರ್ತಿಯಾಗಿ ಖಾಲಿ ಹೊಡೀತಾ ಇದ್ರೆ ಏನಾಗಬೇಡ. ಇವತ್ತೇನಾದ್ರೂ ರಜೆನಾ ಅಂತಾ ಒಂದು ಸೆಕೆಂಡ್ ಗೊಂದಲ ಉಂಟಾದ್ರೂ ತಕ್ಷಣವೇ ಪ್ರೊಫೆಸರ್ ಪಿತ್ತ ನೆತ್ತಿಗೇರುವ ಬಗ್ಗೆ ಯಾವ ಡೌಟ್ ಕೂಡಾ ಇಲ್ಲ. ಅಮೆರಿಕದ ಒಂದು ಕಾಲೇಜ್ನಲ್ಲಿ ಇಂಥಾದ್ದೇ ಒಂದು ಘಟನೆ ನಡೆದಿದೆ. ಪ್ರೊಫೆಸರ್ ಪಿತ್ತ ನೆತ್ತಿಗೆ ಏರಿದ್ದಂತೂ ಆಗಿದೆ. ಆದರೆ ನಂತರ ಅಲ್ಲಿ ನಡೆದಿದ್ದೇ ಬೇರೆ. ಖಾಲಿ ಕ್ಲಾಸ್ ಹಿಂದಿರುವ ಕಾರಣ ತಿಳ್ಕೊಂಡ್ರೆ ನಗು ಬರೋದಂತೂ ಪಕ್ಕಾ.
ಇದನ್ನೂ ಓದಿ : ನಿಲ್ದಾಣಕ್ಕೆ ನುಗ್ಗಿ ಕೆಎಸ್ಆರ್ಟಿಸಿ ಬಸ್ನೇ ಕದ್ದೊಯ್ದ ಕಳ್ಳರು – ಕಳ್ಳತನದ ಬಳಿಕ ಹೋಗಿದ್ದೆಲ್ಲಿಗೆ..!?
ಅಮೆರಿಕದಲ್ಲಿ ಜೋಸೆಫ್ ಮುಲ್ಲಿನ್ಸ್ ಹೆಸರಿನ ಪ್ರೊಫೆಸರ್ ಬೆಳಿಗ್ಗೆ 8-15 ಕ್ಕೆ ವಿದ್ಯಾರ್ಥಿಗಳನ್ನ ಕ್ಲಾಸ್ ಗೆ ಕರೆದಿದ್ದರು. ಕ್ಲಾಸ್ ನಲ್ಲಿ 40 ವಿದ್ಯಾರ್ಥಿಗಳು ಇರಬೇಕಾಗಿತ್ತು. ಆದರೆ ಅಲ್ಲಿ 40 ಕ್ಕೆ 40 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇದ್ರಿಂದ ಪ್ರೊಫೆಸರ್ಗೆ ಸಿಕ್ಕಾಪಟ್ಟೆ ಬೇಸರ ಆಗಿ ತಕ್ಷಣವೇ ಎಲ್ಲಾ ವಿದ್ಯಾರ್ಥಿಗಳಿಗೂ ಮೇಲ್ ಹಾಕಿದ್ದಾರೆ. ಎರಡು ನಿಮಿಷದ ನಂತರ ವಿದ್ಯಾರ್ಥಿಗಳ ಗುಂಪಿನಿಂದ ರಿಪ್ಲೈ ಬರುತ್ತದೆ. ಆ ರಿಪ್ಲೈ ಹೀಗಿರುತ್ತದೆ ‘ಪ್ರೊಫೆಸರ್, ಬಹುಶಃ ನೀವು ತಪ್ಪಾಗಿ ಬೇರೆ ಕ್ಲಾಸ್ ನಲ್ಲಿ ಕೂತಿದ್ದೀರ ಎಂದು ನಮಗೆ ಅನ್ನಿಸುತ್ತಿದೆ’ ಎಂದು. ಆಗಲೇ ಪ್ರೊಫೆಸರ್ಗೆ ಗೊತ್ತಾಗಿದ್ದು ತಪ್ಪಾಗಿ ಬೇರೆ ಕ್ಲಾಸ್ ಗೇ ಎಂಟ್ರಿ ಕೊಟ್ಟಿದ್ದು ತಾನು ಎಂದು.
ಈ ತಮಾಷೆಯ ಘಟನೆಯನ್ನ ಪ್ರೊಫೆಸರ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇಂಟರ್ನೆಟ್ ನಲ್ಲಿ ಜಾಸ್ತಿ ಸದ್ದು ಮಾಡುತ್ತಾ ಇದೆ. ಬಳಕೆದಾರರು ಈ ಪೋಸ್ಟ್ ಗೆ ರಿಯಾಕ್ಷನ್ ಕೊಡುತ್ತಿದ್ದಾರೆ. ಕೆಲವರು ತಮ್ಮ ತಮ್ಮ ಅನುಭವಗಳನ್ನ ಅಲ್ಲಿ ಶೇರ್ ಮಾಡುತ್ತಾ ಇದ್ದರೆ ಇನ್ನೂ ಕೆಲವು ಬಳಕೆದಾರರು ಹೊಟ್ಟೆ ಹುಣ್ಣಾಗುವಂತೆ ನಗುವ ಇಮೊಜಿಸ್ ಹಾಕ್ತಾ ಇದ್ದಾರೆ.