‘ತಾಕತ್ತಿದ್ದರೆ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ’- ಸದನದಲ್ಲಿ ಸಿದ್ದರಾಮಯ್ಯ ಸವಾಲ್
ಸದನದಲ್ಲಿ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಭಾವನಾತ್ಮಕ ವಿಚಾರವನ್ನು ಬಿಟ್ಟು ಅಭಿವೃದ್ಧಿ ವಿಚಾರದ ಬಗ್ಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ರಾಜ್ಯದಲ್ಲಿ ನೀವು ಅಬ್ಬಕ್ಕ ವರ್ಸಸ್ ಟಿಪ್ಪು ಸುಲ್ತಾನ್ , ಗಾಂಧಿ ವರ್ಸಸ್ ಗೋಡ್ಸೆ, ಗಾಂಧಿ ವರ್ಸಸ್ ಸಾವರ್ಕರ್ ಹೀಗೆ ಭಾವನಾತ್ಮಕ ವಿಚಾರವೇ ನಿಮಗೆ ಮುಖ್ಯ. ಅದನ್ನು ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ಸಾರ್ವಜನಿಕ ಚರ್ಚೆಗೆ ಬನ್ನಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನರ ಹತ್ತಿರ ಹೋಗುವಾಗ ಅಭಿವೃದ್ಧಿ ವಿಚಾರ ಬೇಕಿರುವುದು ಬಿಟ್ಟರೆ, ಭಾವನಾತ್ಮಕ ವಿಚಾರದಿಂದ ಏನೂ ಪ್ರಯೋಜನವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮಿತಿ ಮೀರಿದ ಭಯೋತ್ಪಾದನೆ & ಗೂಂಡಾಗಿರಿ – 8 ರಾಜ್ಯಗಳಲ್ಲಿ 70 ಕಡೆ ಎನ್ಐಎ ರೇಡ್
ಇದಕ್ಕೂ ಮೊದಲು ಮಾತನಾರಂಭಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು ಸದನದಲ್ಲಿ ಇಲ್ಲದಿರುವ ಬಗ್ಗೆ ಸ್ಪೀಕರ್ ಗಮನ ಸೆಳೆದರು. ಬಜೆಟ್ ಮಂಡಿಸಿದ ಮೇಲೆ ಚರ್ಚೆಗೆ ಮುಖ್ಯಮಂತ್ರಿಗಳು ಇರಬೇಕಿತ್ತು. ಜೊತೆಗೆ ಮಂತ್ರಿಗಳು ಕೂಡಾ ಸದನದಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ಪ್ರತಿಪಕ್ಷಗಳ ಸದಸ್ಯರು ಕೂಡಾ ಇದೇ ಮಾತನ್ನು ಪುನರುಚ್ಚರಿಸಿದರು. ಆಗ ಸ್ವೀಕರ್, ವಿಶ್ವೇಶ್ವರ ಹೆಗಡೆ ಕಾಗೇರಿ, ನಾನೂ ಕೂಡಾ ಎಲ್ಲರನ್ನೂ ಬರ ಹೇಳಿದ್ದೀನಿ. ಯಾರೂ ಬಂದಿಲ್ಲ ಅಂದರೆ ಏನು ಮಾಡುವುದು ಎಂದು ಸದನದಲ್ಲಿ ತಿಳಿಸಿದರು.