ವಾಟ್ಸಾಪ್ ನಲ್ಲಿ ಕ್ರಾಂತಿಕಾರಕ ಬದಲಾವಣೆ! – ಯಾವ ಫೀಚರ್ ಗಳಲ್ಲಿ ಏನು ಬದಲಾವಣೆ?

ವಾಟ್ಸಾಪ್ ನಲ್ಲಿ ಕ್ರಾಂತಿಕಾರಕ ಬದಲಾವಣೆ! – ಯಾವ ಫೀಚರ್ ಗಳಲ್ಲಿ ಏನು ಬದಲಾವಣೆ?

ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಹೊಸ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತಾ ಬಂದಿದೆ.  ಇದೀಗ ವಾಟ್ಸಾಪ್​​ ಮತ್ತೊಂದು ವಿಶೇಷ ಅಪ್‌ಡೇಟ್ ತರುವ ಮೂಲಕ ಬಳಕೆದಾರರ ಗಮನಸೆಳೆದಿದೆ. ವಾಟ್ಸಾಪ್​​ ನಲ್ಲಿ ಇದುವರೆಗೆ ಏಕಕಾಲಕ್ಕೆ 30 ಫೋಟೋ ಮತ್ತು ವಿಡಿಯೋಗಳನ್ನಷ್ಟೇ ಸೆಂಡ್​ ಮಾಡಬಹುದಿತ್ತು. ಆದ್ರೀಗ ವಾಟ್ಸಾಪ್​​ನಲ್ಲಿ ಕ್ರಾಂತಿಕಾರಕ ಬದಲಾವಣೆಯೊಂದನ್ನು ಮಾಡಲಾಗಿದೆ.

ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಡ್ರೋನ್ ಬಳಕೆ

ವಾಟ್ಸಾಪ್​​​ನಲ್ಲಿ ಇನ್ಮುಂದೆ ಒಂದೇ ಬಾರಿಗೆ 100 ಫೋಟೋ ಮತ್ತು ವಿಡಿಯೋಗಳನ್ನು ಸೆಂಡ್ ಮಾಡಬಹುದು. ಅಲ್ಲದೇ ಇದುವರೆಗೆ ಕೇವಲ, ಫೋಟೋ ಮತ್ತು ವಿಡಿಯೋಗೆ ಮಾತ್ರ ಕ್ಯಾಪ್ಷನ್ ಹಾಕೋ ಆಪ್ಷನ್ ಇತ್ತು. ಇದೀಗ ಡಾಕ್ಯೂಮೆಂಟ್ಸ್​​ಗಳನ್ನು ಸೆಂಡ್ ಮಾಡುವಾಗ ಕ್ಯಾಪ್ಷನ್ ಕೂಡ ಹಾಕಬಹುದು.

ವಾಟ್ಸಾಪ್ ಗ್ರೂಪ್​​ನಲ್ಲಿ ಡಿಸ್ಕ್ರಿಪ್ಷನ್ ಬರೆಯೋ ವೇಳೆ ಇದುವರೆಗೆ ಅಕ್ಷರಗಳ ಲಿಮಿಟ್ ಇತ್ತು. 25 ಅಕ್ಷರಗಳನ್ನಷ್ಟೇ ಬರೆಯಬಹುದಿತ್ತು. ಇದನ್ನ 512 ಅಕ್ಷರಗಳಿಗೆ ಏರಿಕೆ ಮಾಡಲಾಗಿದೆ. ಇವೆಲ್ಲವೂ ನಿಮ್ಮ ಬಳಕೆಗೆ ಬೇಕು ಅನ್ನೋದಾದ್ರೆ ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ತಮ್ಮ ವಾಟ್ಸಾಪ್​​​ನ್ನ ಅಪ್​ಡೇಟ್ ಮಾಡಿಕೊಳ್ಳಬೇಕು.

suddiyaana