ಹೀರೋಯಿನ್ ಆಗಲು ಹೆತ್ತಮ್ಮನಿಂದಲೇ ಹನ್ಸಿಕಾಗೆ ಹಾರ್ಮೋನ್ ಇಂಜೆಕ್ಷನ್ ?

ಹೀರೋಯಿನ್ ಆಗಲು ಹೆತ್ತಮ್ಮನಿಂದಲೇ ಹನ್ಸಿಕಾಗೆ ಹಾರ್ಮೋನ್ ಇಂಜೆಕ್ಷನ್ ?

ಗುಬ್ಬಚ್ಚಿಗೂಡಿನಲ್ಲಿ ಕದ್ದುಮುಚ್ಚಿ ಅಂತಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಹಾಡಿ ಕುಣಿದ ಹನ್ಸಿಕಾ ಮೋಟ್ವಾನಿ ಕನ್ನಡಿಗರಿಗೂ ಇಷ್ಟವಾಗಿರುವ ನಟಿ. ಹನ್ಸಿಕಾ ಚಿತ್ರರಂಗದಲ್ಲಿ ಬಾಲಕಲಾವಿದೆಯಾಗಿ ದಿಢೀರ್ ಅಂತಾ ಕೇವಲ ನಾಲ್ಕೇ ವರ್ಷದಲ್ಲಿ ಹೀರೋಯಿನ್ ಆಗೋ ಮಟ್ಟಕ್ಕೆ ಬೆಳೆದಿರೋದು ಹಾರ್ಮೋನ್ ಇಂಜೆಕ್ಷನ್‌ನಿಂದ ಅನ್ನೋ ಆರೋಪ ಇತ್ತೀಚಿನ ದಿನಗಳಲ್ಲಿ ಕೇಳಿಬಂದಿದೆ. ಇಂಥಾ ಒಂದು ಆರೋಪ ಮಾಡಿರೋದು ಹನ್ಸಿಕಾ ಹೆತ್ತ ತಂದೆಯೇ ಅನ್ನೋದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ:  ಸೊಸೈಟಿಗೆ ನುಗ್ಗಿ ಅಕ್ಕಿ ತಿಂದ ‘ಕಾಡಿನ ಕಳ್ಳ’! – ಸಿಸಿಟಿವಿ ದೃಶ್ಯ ನೋಡಿ ಅಧಿಕಾರಿಗಳೇ ಶಾಕ್!

2000ದ ಇಸವಿ ವೇಳೆಗೆಲ್ಲಾ ಹನ್ಸಿಕಾ ಬಾಲ ಕಲಾವಿದೆಯಾಗಿದ್ದರು. ಕೇವಲ ನಾಲ್ಕೇ ವರ್ಷದಲ್ಲಿ ಹೀರೋಯಿನ್ ಆಗಿ ಚಿತ್ರರಂಗಕ್ಕೆ ರೀ ಎಂಟ್ರಿಯಾಗಿದ್ದರು.  ಹೃತಿಕ್ ರೋಶನ್ ಅಭಿನಯದ ಕೋಯಿ ಮಿಲ್‌ ಗಯಾ ಚಿತ್ರದಲ್ಲಿ ಹನ್ಸಿಕಾ ಮೋಟ್ವಾನಿ ಟೀನಾ ಪಾತ್ರದಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ್ದರು. ಜೊತೆಗೆ ದೂರದರ್ಶನ ಮತ್ತು ಕೆಲ ಸಿನಿಮಾಗಳಲ್ಲೂ ಬಾಲಕಲಾವಿದೆಯಾಗಿ ಅಭಿನಯಿಸಿದ್ದರು.

ಹನ್ಸಿಕಾ ಮೋಟ್ವಾನಿ ತಾಯಿ ಮೋನಾ ಮೋಟ್ವಾನಿ ವೈದ್ಯೆಯಾಗಿದ್ದರು. ಚರ್ಮರೋಗ ತಜ್ಞೆಯಾಗಿದ್ದ ಮೋನಾ ರಿವಾ ಅರೋರಾ ತನ್ನ ಮಗಳು ಚಿತ್ರರಂಗದಲ್ಲಿ ಬಲುಬೇಗ ಬೆಳೆಯಲು ಹಾರ್ಮೋನ್ ಇಂಜೆಕ್ಷನ್ ನೀಡಿದ್ದಾರೆ ಅನ್ನೋದು ತಂದೆ ಪ್ರದೀಪ್ ಮೋಟ್ವಾನಿ ಆರೋಪ.  ಚಿತ್ರರಂಗದಲ್ಲಿ ಬೇಗನೆ ಬೆಳೆಯಲು ಈ ರೀತಿ ಮಾಡಿದ್ದಾರೆ ಎಂದು ಪ್ರದೀಪ್ ಮೋಟ್ವಾನಿ ದೂರಿದ್ದಾರೆ.

2003 ನೇ ಇಸವಿಯಲ್ಲಿ ಮಕ್ಕಳ ಮೆಚ್ಚಿನ ಚಲನಚಿತ್ರ ಕೋಯಿ ಮಿಲ್ ಗಯಾದಲ್ಲಿ, ಹನ್ಸಿಕಾ ಮೋಟ್ವಾನಿ ಹೃತಿಕ್ ರೋಹನ್ ಅವರ ನೆಚ್ಚಿನ ಹುಡುಗಿಯಾಗಿ ಅಭಿನಯಿಸಿದ್ರು. ಅದೇ ಮಗು, 2007 ರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಒಂದು ರೀತಿಯ ಅಚ್ಚರಿಯ ವಿಚಾರವೇ ಅಂತಿದ್ದಾರೆ ತಂದೆ ಪ್ರದೀಪ್ ಮೋಟ್ವಾನಿ. ಹಿಮೇಶ್ ರೇಶಮಿಯಾ ಅವರ ಚೊಚ್ಚಲ ಚಿತ್ರವಾದ ಆಪ್ ಕಾ ಸುರೂರ್ ನಲ್ಲಿ ಹನ್ಸಿಕಾ ಮೋಟ್ವಾನಿ ಹೀರೋಯಿನ್ ಆಗಿ ಬಡ್ತಿಹೊಂದಿದ್ದು ನೋಡಿ ಅನೇಕ ಮಂದಿ ಆಶ್ಚರ್ಯಚಕಿತರಾಗಿದ್ದರು ಅನ್ನೋ ಮಾತು ಕೂಡಾ ಒಂದು ಸಮಯದಲ್ಲಿ ಕೇಳಿಬಂದಿತ್ತು. ಇದೀಗ ತಂದೆ ಪ್ರದೀಪ್ ಮೋಟ್ವಾನಿ ಆರೋಪದಿಂದ ಹನ್ಸಿಕಾ ಬೆಳವಣಿಗೆಯ ವಿಚಾರ ವಿವಾದಕ್ಕೀಡು ಮಾಡಿದೆ. ಜೊತೆಗೆ ಹಣಕ್ಕಾಗಿಯೇ ತಾಯಿ ಈ ರೀತಿ ಮಾಡಿದ್ದಾಳೆ ಅನ್ನೋ ಆರೋಪ ಕೂಡಾ ಮಾಡಿದ್ದಾರೆ.

ಆದರೆ ಈ ಬಗ್ಗೆ ಹನ್ಸಿಕಾ ಅಥವಾ ಅವರ ತಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಹನ್ಸಿಕಾ ಬಾಲನಟಿಯಾಗಿ ಬಾಲಿವುಡ್‌ನಲ್ಲಿ ಮೆರೆದರೂ ನಾಯಕಿಯಾಗಿ ಅಷ್ಟೇನೋ ಜನಪ್ರಿಯರಾಗಿರಲಿಲ್ಲ. ಆದರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದರು. ಹಾರ್ಮೋನ್ ಇಂಜೆಕ್ಷನ್‌ನಿಂದಾಗಿಯೇ ಅವರ ತೂಕ ಹೆಚ್ಚಾಗಿತ್ತು. ಹೀಗಾಗಿ ಬಾಲಿವುಡ್‌ನಲ್ಲಿ ಬೇಡಿಕೆ ಕಡಿಮೆಯಾಗತೊಡಗಿತ್ತು ಅನ್ನೋ ಮಾತು ಕೂಡಾ ಕೇಳಿಬಂದಿತ್ತು. ಬಾಲಿವುಡ್‌ನಿಂದ ಆಫರ್ ಕಡಿಮೆಯಾಗ್ತಿದ್ದಂತೆ ದಕ್ಷಿಣ ಭಾರತದ ಚಿತ್ರರಂಗದತ್ತ ಮುಖ ಮಾಡಿದ ಹನ್ಸಿಕಾ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ತೆಲುಗಿನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದರು.

ಹನ್ಸಿಕಾ ಪೋಷಕರು ವಿಚ್ಛೇದನ ಪಡೆದಿದ್ದರು. ಹನ್ಸಿಕಾರನ್ನ ಬಾಲ್ಯದಿಂದಲೂ ಪೋಷಿಸಿ ಬೆಳೆಸಿದ್ದು ತಾಯಿ ಮೋನಾ ಮೋಟ್ವಾನಿ. ಹನ್ಸಿಕಾ ತಂದೆ ವಿದೇಶದಲ್ಲಿದ್ದಾರೆ. ಹನ್ಸಿಕಾ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಅವರು  ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಚಿಕಿತ್ಸೆ ಪಡೆಯಲು ತಮ್ಮ ಕೈಲಾದ ಸಹಾಯ ನೀಡುತ್ತಿದ್ದಾರೆ.

suddiyaana