ಸರ್ವಾಧಿಕಾರಿ ಕಿಮ್ ಮಗಳ ಹೆಸರು ಯಾರು ಇಡುವಂತಿಲ್ಲ! – ಏಕೆ ಗೊತ್ತಾ?

ಸರ್ವಾಧಿಕಾರಿ ಕಿಮ್ ಮಗಳ ಹೆಸರು ಯಾರು ಇಡುವಂತಿಲ್ಲ! – ಏಕೆ ಗೊತ್ತಾ?

ಪ್ಯಾಂಗ್ಯಾಂಗ್‌: ಉತ್ತರ ಕೊರಿಯಾದ ಹುಚ್ಚುದೊರೆ ಕಿಮ್ ಜಾಂಗ್ ಉನ್  ನ ಆಡಳಿತದಲ್ಲಿ ಹೆಣ್ಣುಮಕ್ಕಳಿಗಿರುವ ಕಟ್ಟುಪಾಡುಗಳು ಇಡೀ ಜಗತ್ತಿಗೆ ಗೊತ್ತಿದೆ. ಇದೀಗ ಹುಚ್ಚುದೊರೆ ಹೆಣ್ಣು ಮಕ್ಕಳಿಗೆ ಇನ್ನೊಂದು ಹೊಸ ನಿಯಮ ಜಾರಿಗೊಳಿಸಿದ್ದಾರೆ.

ಇನ್ನು ಮುಂದೆ ಉತ್ತರ ಕೊರಿಯಾದಲ್ಲಿರುವವರು ತನ್ನ ಮಗಳ ಹೆಸರನ್ನು ಯಾವ ಹೆಣ್ಣು ಮಕ್ಕಳು ಇಟ್ಟುಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಮಾರ್ಕ್ ಜುಕರ್‌ಬರ್ಗ್ ಗಿದ್ಯಾ ಜೀವ ಬೆದರಿಕೆ? – 82 ಕೋಟಿ ರೂಪಾಯಿ  ಭದ್ರತೆಗೆ ಇಟ್ಟಿದ್ದೇಕೆ?

ಕೆಲದಿನಗಳ ಹಿಂದಷ್ಟೇ ಮಿಲಿಟರಿ ಪರೇಡ್‌ನ‌ಲ್ಲಿ ಕಿಮ್‌ ಮಗಳು ಜು-ಎ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಳು. ಇದರ ನಡುವೆ ದೇಶದ ರಕ್ಷಣಾ ಸಚಿವಾಲಯ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದೇನಂದರೆ ಇನ್ನು ಮುಂದೆ ದೇಶದಲ್ಲಿ ಹುಟ್ಟಲಿರುವ ಯಾವ ಹೆಣ್ಣುಮಕ್ಕಳಿಗೂ ಕಿಮ್‌ ಪುತ್ರಿ ಜು-ಎ ಹೆಸರು ಇಡುವಂತಿಲ್ಲ. ಅಷ್ಟೇ ಅಲ್ಲ,ಈಗಾಗಲೇ ಈ ಹೆಸರಿನಲ್ಲಿ ಯಾರಾದರೂ ಹೆಣ್ಣು ಮಕ್ಕಳು, ಮಹಿಳೆಯರು ಇದ್ದರೆ ಅವರು ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕು. ಹೆಸರು ಬದಲಿಸಿಕೊಳ್ಳಲು 1 ವಾರದ ಗಡುವಷ್ಟೇ ನೀಡುವುದಾಗಿ ಸ್ಥಳೀಯ ಸಂಸ್ಥೆಗಳು ಕೂಡ ಸುತ್ತೋಲೆ ಹೊರಡಿಸಿವೆ ಎಂದು ಸ್ಥಳೀಯರು ಹೇಳಿದ್ದಾರೆ.

suddiyaana