ಭಾರತದ ಸಾರಿಗೆ ವಿಮಾನದಲ್ಲಿ ಚೀತಾ ಪಯಣ – ದಕ್ಷಿಣ ಆಫ್ರಿಕಾದಿಂದ ಬರಲಿವೆ ಹೊಸ ಅತಿಥಿಗಳು

ಭಾರತದ ಸಾರಿಗೆ ವಿಮಾನದಲ್ಲಿ ಚೀತಾ ಪಯಣ – ದಕ್ಷಿಣ ಆಫ್ರಿಕಾದಿಂದ ಬರಲಿವೆ ಹೊಸ ಅತಿಥಿಗಳು

ದಕ್ಷಿಣ ಆಫ್ರೀಕಾದಿಂದ 12 ಚೀತಾಗಳನ್ನು ಕರೆತರಲು ಭಾರತದಿಂದ ವಿಮಾನ ಹೊರಟಿದೆ. ಭಾರತದ ಐಎಎಫ್‌ನ ಸಿ-17 ಸಾರಿಗೆ ವಿಮಾನವು ಆಫ್ರಿಕಾದಿಂದ ಚೀತಾಗಳನ್ನು ಶನಿವಾರ ಕರೆತರಲಿದೆ. ಮುಂದಿನ ದಿನಗಳಲ್ಲಿ ಇನ್ನೂ 14-16 ಚಿರತೆಗಳನ್ನು ಭಾರತಕ್ಕೆ ತರುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ಎಂಟು ಚಿರತೆಗಳನ್ನು ನಮೀಬಿಯಾದಿಂದ ವಿಮಾನದ ಮೂಲಕ ಭಾರತಕ್ಕೆ ತರಲಾಗಿತ್ತು.

ಇದನ್ನೂ ಓದಿ:  ಪ್ರವಾಸಕ್ಕೆ ಕರೆದೊಯ್ದು ಪ್ರೇಯಸಿಯನ್ನೇ ಕೊಂದ ಪಾಪಿ – ಬಗೆದಷ್ಟೂ ಬಯಲಾಗ್ತಿದೆ ಕೊಲೆ ರಹಸ್ಯ..!

ವನ್ಯಜೀವಿ ರಕ್ಷಣೆ ಮತ್ತು ಸುಸ್ಥಿರತೆಗಾಗಿ ಸರ್ಕಾರವು ಸಮಗ್ರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಭವಿಷ್ಯದ ಪೀಳಿಗೆಗೆ ಪ್ರಕೃತಿಯನ್ನು ರಕ್ಷಿಸುವ ಪ್ರಾಮುಖ್ಯತೆಗೆ ಹೆಚ್ಚು ಒತ್ತು ನೀಡುವ ಕಾರಣಕ್ಕೆ ಈ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಚೀತಾ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಚಿರತೆಗಳನ್ನು ದಕ್ಷಿಣ ಆಫ್ರಿಕಾದಿಂದ ತರಲಾಗುವುದು.

suddiyaana