ಎಸ್​ಪಿ ನಾಯಕ ಮತ್ತು ಪುತ್ರನಿಗೆ 2 ವರ್ಷ ಜೈಲು – 15 ವರ್ಷಗಳ ಹಿಂದಿನ ಕೇಸ್ ​ಗೆ ಟ್ವಿಸ್ಟ್..!

ಎಸ್​ಪಿ ನಾಯಕ ಮತ್ತು ಪುತ್ರನಿಗೆ 2 ವರ್ಷ ಜೈಲು – 15 ವರ್ಷಗಳ ಹಿಂದಿನ ಕೇಸ್ ​ಗೆ ಟ್ವಿಸ್ಟ್..!

ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಮತ್ತು ಶಾಸಕನಾಗಿರುವ ಅವರ ಪುತ್ರ ಅಬ್ದುಲ್ಲಾ ಅಜಂ ಅವರಿಗೆ ಉತ್ತರ ಪ್ರದೇಶದ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 15 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ.

ಇದನ್ನೂ ಓದಿ : ರಾಹುಲ್ ಗಾಂಧಿ ವಿಮಾನ ಲ್ಯಾಂಡಿಂಗ್​ ಗೆ ನಿರಾಕರಣೆ – ‘ರಾಗಾ’ ಬಗ್ಗೆ ಬಿಜೆಪಿಗೆ ಭಯ ಶುರುವಾಯ್ತಾ..!?

ಅಜಂಖಾನ್ ಮತ್ತು ಅಬ್ದುಲ್ಲಾ ಅಜಂ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ್ದರೂ ಕೋರ್ಟ್ ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಎಂಪಿ-ಎಂಎಲ್‍ಎ ವಿಶೇಷ ನ್ಯಾಯಾಲಯದ ನ್ಯಾಯಾಧಿಶರಾದ ಸ್ಮಿತಾ ಗೋಸ್ವಾಮಿ ಅವರು ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿ ತಲಾ 3 ಸಾವಿರ ರೂಪಾಯಿ ದಂಡ ವಿಧಿಸಿರೋದಾಗಿ ಜಿಲ್ಲಾ ಸರ್ಕಾರಿ ವಕೀಲ ನಿತಿನ್ ಗುಪ್ತಾ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ ನೋಡೋದಾದ್ರೆ 2007ರ ಡಿಸೆಂಬರ್​ನಲ್ಲಿ ಉತ್ತರಪ್ರದೇಶದ ರಾಂಪುರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಶಿಬಿರಗಳ ಮೇಲೆ ದಾಳಿ ನಡೆದಿತ್ತು. ಈ ದಾಳಿ ಖಂಡಿಸಿ ಅಜಂಖಾನ್ ಮತ್ತು ಇತರ ಏಳು ಮಂದಿ 2008ರ ಜನವರಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದರು. ಈ ಕುರಿತಂತೆ ಛಜಲೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಲಯ ಉಳಿದ ಏಳು ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿ ಅಜಂಖಾನ್ ಮತ್ತು ಆತನ ಪುತ್ರನನ್ನು ಆರೋಪಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದೆ.

suddiyaana