ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ‘ಚುಪ್ಪು’ ಆಯ್ಕೆ – ಅವಿರೋಧವಾಗಿ ಅಧಿಕಾರಕ್ಕೇರಿದ ನಿವೃತ್ತ ನ್ಯಾಯಮೂರ್ತಿ

ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ‘ಚುಪ್ಪು’ ಆಯ್ಕೆ – ಅವಿರೋಧವಾಗಿ ಅಧಿಕಾರಕ್ಕೇರಿದ ನಿವೃತ್ತ ನ್ಯಾಯಮೂರ್ತಿ

ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಮೊಹಮ್ಮದ್ ಶಹಾಬುದ್ದೀನ್ ಚುಪ್ಪು ಆಯ್ಕೆಯಾಗಿದ್ದಾರೆ. 74 ವರ್ಷದ ಶಹಾಬುದ್ದೀನ್ ಚುಪ್ಪು ಅವರು ಬಾಂಗ್ಲಾದೇಶದ 22 ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗಿನ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಹಮೀದ್ ಅವರ ಅಧಿಕಾರಾವಧಿ ಏಪ್ರಿಲ್ 24ರಂದು ಅಂತ್ಯಗೊಳ್ಳಲಿದೆ.

ಇದನ್ನೂ ಓದಿ:  ತ್ರಿಪುರಾದಲ್ಲಿ ಮತದಾನಕ್ಕೆ ಕೌಂಟ್ ಡೌನ್ – ಯಾರೂ ಒಳಗೆ ಬರಂಗಿಲ್ಲ.. ಹೊರಗೂ ಹೋಗುವಂತಿಲ್ಲ..!

ಭಾನುವಾರ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಯ ನಂತರ ಚುಪ್ಪು ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರು ಸೋಮವಾರ ಗೆಜೆಟ್ ಕೂಡ ಹೊರಡಿಸಿದ್ದಾರೆ. ಸಂಸತ್ತಿನಲ್ಲಿ ಬಹುಮತ ಹೊಂದಿರುವ ಆಡಳಿತಾರೂಢ ಅವಾಮಿ ಲೀಗ್ ಪಕ್ಷವು , ಚುಪ್ಪು ಅವರನ್ನು ದೇಶದ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಿತ್ತು. 350 ಸದಸ್ಯ ಬಲದ ಸಂಸತ್ತಿನಲ್ಲಿ ಅವಾಮಿ ಲೀಡ್ 305 ಸದಸ್ಯರನ್ನು ಹೊಂದಿದೆ. ಚುಪ್ಪು ಅವರ ನಾಮನಿರ್ದೇಶನ ಪತ್ರವನ್ನು ಚುನಾವಣಾ ಆಯೋಗಕ್ಕೆ ಅವಾಮಿ ಲೀಗ್ ಸಲ್ಲಿಸಿತ್ತು.

suddiyaana