ಟರ್ಕಿ ಭೂಕಂಪದಲ್ಲಿ ಭಾರತೀಯ ಬಲಿ – 166 ಗಂಟೆಗಳ ಬಳಿಕ ಬದುಕಿ ಬಂದ ಮತ್ತೊಬ್ಬನ ಕಥೆ ಎಂಥಾದ್ದು..!?
ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಸಾವನ್ನಪ್ಪಿದವರ ಸಂಖ್ಯೆ 34 ಸಾವಿರಕ್ಕೆ ಏರಿಕೆಯಾಗಿದೆ. ಹುಡುಕಿದಷ್ಟೂ ಅವಶೇಷಗಳ ಅಡಿ ಜನರ ಶವಗಳು ಪತ್ತೆಯಾಗುತ್ತಲೇ ಇದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಮೃತರ ಸಾಮೂಹಿಕ ಅಂತ್ಯಸಂಸ್ಕಾರ ಕೂಡ ನಡೀತಿದೆ. ಈ ನಡುವೆ ಭೂಕಂಪ ಪೀಡಿತ ಟರ್ಕಿಯಲ್ಲಿ ನಾಪತ್ತೆಯಾಗಿದ್ದ ಉತ್ತರಾಖಂಡ್ ಮೂಲದ ವಿಜಯ್ ಕುಮಾರ್ ಮೃತದೇಹ ಅವಶೇಷದ ಅಡಿ ಪತ್ತೆಯಾಗಿದೆ.
ಇದನ್ನೂ ಓದಿ : ಗೂಗಲ್ ಕಚೇರಿಗೆ ಬಾಂಬ್ ಇಟ್ಟಿರೋದಾಗಿ ಫೋನ್ ಕಾಲ್ – ಖಾಕಿ ಬಲೆಗೆ ಬಿದ್ದ ಪಾಪಿ ಹೇಳಿದ್ದೇನು..!?
ಹೀಗಾಗಿ ಭೂಕಂಪಕ್ಕೆ ಓರ್ವ ಭಾರತೀಯ ಬಲಿಯಾಗಿದ್ದಾರೆ. ಮತ್ತೊಂದೆಡೆ ಸಂಕಷ್ಟದಲ್ಲಿರುವ ಟರ್ಕಿ ಜನರಿಗೆ ಭಾರತದ ಸಹಾಯ ಮುಂದುವರಿದಿದೆ. ಟರ್ಕಿಯಲ್ಲಿ ತೀವ್ರ ಚಳಿ ಕೂಡ ಇದ್ದು, ಸೂರು ಕಳೆದುಕೊಂಡ ಅದೆಷ್ಟೋ ಮಂದಿ ಬೀದಿಯಲ್ಲೇ ಒದ್ದಾಡ್ತಿದ್ದಾರೆ. ಹೀಗಾಗಿ ಭಾರತ ಟೆಂಟ್ಗಳನ್ನ ಮತ್ತು ಬ್ಲಾಂಕೆಟ್ಗಳನ್ನ ಟರ್ಕಿಗೆ ಕಳುಹಿಸಿಕೊಟ್ಟಿದೆ. ದೆಹಲಿಯಿಂದ ಸಾಗಿಸಲಾಗಿದ್ದ ಸುಮಾರು 23 ಟನ್ ಪರಿಹಾರ ಸಾಮಗ್ರಿಗಳು ಟರ್ಕಿ ತಲುಪಿವೆ. ಇನ್ನು ಟರ್ಕಿ ಸರ್ಕಾರ ಕೂಡ ಭಾರತಕ್ಕೆ ಧನ್ಯವಾದ ಸಲ್ಲಿಸಿದೆ.
ಭೀಕರ ಭೂಕಂಪದಿಂದ ಮಸಣವಾಗಿರೋ ಟರ್ಕಿ ನೆಲದಲ್ಲಿ ಈಗಲೂ ಅಚ್ಚರಿಗಳು ನಡೆಯುತ್ತಿವೆ. ವಾರದ ಬಳಿಕವೂ ಪವಾಡದ ರೀತಿಯಲ್ಲಿ ಜನ ಸಾವನ್ನ ಗೆದ್ದು ಬರ್ತಿದ್ದಾರೆ. ರಕ್ಷಣಾ ಪಡೆ ಸಿಬ್ಬಂದಿ ಭೂಕಂಪ ಸಂಭವಿಸಿದ ಬರೋಬ್ಬರಿ 160 ಗಂಟೆಗಳ ನಂತರ ಅವಶೇಷಗಳಡಿಯಿಂದ ವ್ಯಕ್ತಿಯನ್ನ ಜೀವಂತವಾಗಿ ರಕ್ಷಿಸಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿ ಬದುಕಿದ್ದ ಅನ್ನೋದು ಗೊತ್ತಾದ್ರೂ ಕೂಡ ಆತನನ್ನ ಹೊರತರುವುದು ಸುಲಭದ ಮಾತಾಗಿರಲಿಲ್ಲ. ಆದ್ರೂ ಛಲ ಬಿಡದ ರಕ್ಷಣಾಪಡೆ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಫೆಬ್ರವರಿ 5 ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಈವರೆಗೂ 35 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
Mustafa Sarıgül, a 35-year-old epilepsy patient under the rubble in #Hatay, was rescued at the 149th hour.#TurkeyQuake #Turkey pic.twitter.com/BeOuQ4siBc
— Demiroren News Agency English (@dhaenglish) February 12, 2023