ಗೂಗಲ್ ಕಚೇರಿಗೆ ಬಾಂಬ್ ಇಟ್ಟಿರೋದಾಗಿ ಫೋನ್ ಕಾಲ್ – ಖಾಕಿ ಬಲೆಗೆ ಬಿದ್ದ ಪಾಪಿ ಹೇಳಿದ್ದೇನು..!?

ಗೂಗಲ್ ಕಚೇರಿಗೆ ಬಾಂಬ್ ಇಟ್ಟಿರೋದಾಗಿ ಫೋನ್ ಕಾಲ್ – ಖಾಕಿ ಬಲೆಗೆ ಬಿದ್ದ ಪಾಪಿ ಹೇಳಿದ್ದೇನು..!?

ವಿಮಾನ ನಿಲ್ದಾಣಗಳಿಗೆ, ಶಾಲೆಗಳಿಗೆ ಅಷ್ಟೇ ಯಾಕೆ ಸರ್ಕಾರಿ ಕಚೇರಿಗಳಿಗೆ ಬಾಂಬ್ ಇಟ್ಟಿರೋದಾಗಿ ಕೆಲವೊಮ್ಮೆ ಫೇಕ್ ಕಾಲ್​ಗಳು ಬರುತ್ತವೆ. ಆದ್ರೆ ಈ ಸಲ ಟೆಕ್ ದೈಸ್ಯ ಸಂಸ್ಥೆ ಗೂಗಲ್ ಕಚೇರಿಗೇ ಬಾಂಬ್ ಇಟ್ಟಿರೋದಾಗಿ ಕರೆ ಮಾಡಲಾಗಿದೆ.

ಹೌದು. ಟೆಕ್ ದೈತ್ಯ ಸಂಸ್ಥೆ ಗೂಗಲ್​ನ ಪುಣೆ ಕಚೇರಿಗೆ ಬಾಂಬ್ ಇಟ್ಟಿರೋದಾಗಿ ಮುಂಬೈ ಕಚೇರಿಗೆ ದುಷ್ಕರ್ಮಿಯೊಬ್ಬ ಕರೆ ಮಾಡಿದ್ದ. ಬೆದರಿಕೆ ಕರೆ ಬಂದ ಬೆನ್ನಲ್ಲೇ ಪುಣೆಯ ಕಚೇರಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಪುಣೆ ಪೊಲೀಸರು ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ ಸ್ಥಳಕ್ಕೆ ಬಂದು ಹುಡುಕಾಟ ನಡೆಸಿದ್ರು. ಆದ್ರೆ ತಪಾಸಣೆ ವೇಳೆ ಇದು ಫೇಕ್ ಕಾಲ್ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ : ತ್ರಿಪುರಾದಲ್ಲಿ ಮತದಾನಕ್ಕೆ ಕೌಂಟ್ ಡೌನ್ – ಯಾರೂ ಒಳಗೆ ಬರಂಗಿಲ್ಲ.. ಹೊರಗೂ ಹೋಗುವಂತಿಲ್ಲ..!

ಟೆಕ್ನಿಕಲ್ ಎವಿಡೆನ್ಸ್ ಮೂಲಕ ಕೆಲವೇ ಕ್ಷಣಗಳಲ್ಲಿ ಆರೋಪಿಯನ್ನ ಪುಣೆ ಪೊಲೀಸರು ಹೈದರಾಬಾದ್​ನಲ್ಲಿ ಬಂಧಿಸಿದ್ದಾರೆ. ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಕುಡಿದ ಮತ್ತಿನಲ್ಲಿ ಹೀಗೆ ಮಾಡಿರೋದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಗೂಗಲ್ ಕಚೇರಿಗೆ ಭಾನುವಾರ ಸಂಜೆ 7.54 ಕ್ಕೆ ಕರೆ ಬಂದಿದ್ದು, ಪುಣೆಯ ಮುಂಡ್ವಾ ಪ್ರದೇಶದ ಬಹುಮಹಡಿ ವಾಣಿಜ್ಯ ಕಟ್ಟಡದ 11 ನೇ ಮಹಡಿಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಸಲಾಗಿತ್ತು.

ಕಂಪನಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 505 (1) (ಬಿ) ಮತ್ತು 506 ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

suddiyaana