ಹಿಮದಲ್ಲಿ ಸಿಲುಕಿ ಗರ್ಭಿಣಿ ನರಳಾಟ – ವಾಟ್ಸ್ ಆ್ಯಪ್ ಕಾಲ್ ಮೂಲಕವೇ ಹೆರಿಗೆ ಮಾಡಿಸಿದ ವೈದ್ಯರು!

ಹಿಮದಲ್ಲಿ ಸಿಲುಕಿ ಗರ್ಭಿಣಿ ನರಳಾಟ – ವಾಟ್ಸ್ ಆ್ಯಪ್ ಕಾಲ್ ಮೂಲಕವೇ ಹೆರಿಗೆ ಮಾಡಿಸಿದ ವೈದ್ಯರು!

ಶ್ರೀನಗರ: ಕೊವಿಡ್ ಕಾಲದಲ್ಲಿ ಆನ್ ಲೈನ್ ಕ್ಲಾಸ್, ಆನ್ ಲೈನ್ ಪರೀಕ್ಷೆ ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ಕೊವಿಡ್ ಗೆ ತುತ್ತಾದ ಜನರಿಗೆ ಆನ್ ಲೈನ್ ಮೂಲಕ ಗೈಡ್ ಲೈನ್ಸ್ ಕೊಡುವುದನ್ನು ಕೇಳಿದ್ದೆವು. ಇದೀಗ ವೈದ್ಯರೊಬ್ಬರು ವಾಟ್ಸ್ ಆ್ಯಪ್ ಕಾಲ್ ಮುಖಾಂತರ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

ಹೌದು, ಜಮ್ಮು ಕಾಶ್ಮೀರದಲ್ಲಿ ಕೆಲ ದಿನಗಳಿಂದ ಹಿಮಪಾತ ಹೆಚ್ಚಾಗಿದೆ. ಇದರಿಂದ ಜನರು ವಿಮಾನದಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತಿದೆ. ಇದರಿಂದಾಗಿ ಗರ್ಭಿಣಿಯನ್ನ ಏರ್ ಲಿಫ್ಟ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೊನೆಗೆ ವಾಟ್ಸ್ ಆ್ಯಪ್ ಕಾಲ್ ಮೊರೆಹೋಗಿದ್ದಾರೆ. ವೈದ್ಯರು ಕೂಡ ಆಕೆಯ ಪರಿಸ್ಥಿಯನ್ನು ಮನಗಂಡು ವಾಟ್ಸಾಪ್ ಕರೆ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಲ್ಲಿ ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 2 ತಿಂಗಳ ಮಗುವಿಗೆ ಬರೆ ಎಳೆದ ವೈದ್ಯ! – ಕೆಮ್ಮು ಎಂದಿದ್ದಕ್ಕೆ ಹೀಗಾ ಮಾಡೋದು?

ಅಧಿಕ ಹಿಮಪಾತದಿಂದ ಕುಪ್ವಾರ ಜಿಲ್ಲೆಯ ಕೇರನ್ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದರಿಂದ ರೋಗಿಯನ್ನು ಹೆರಿಗೆ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯಲು ವಿಮಾನದ ಮೂಲಕ ಸ್ಥಳಾಂತರಿಸುವ ಅಗತ್ಯವಿತ್ತು.ಆದರೆ, ಗುರುವಾರ ಮತ್ತು ಶುಕ್ರವಾರ ನಿರಂತರ ಹಿಮಪಾತವಾದ್ದರಿಂದ ವಿಮಾನ ಹಾರಾಟ ಬಂದ್ ಮಾಡಲಾಗಿತ್ತು. ಈ ಹಿನ್ನೆಲೆ ಕೆರಾನ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ವೈದ್ಯಕೀಯ ಸಿಬ್ಬಂದಿಯನ್ನು ಹೆರಿಗೆಯಲ್ಲಿ ಸಹಾಯ ಮಾಡಲು ಪರ್ಯಾಯ ಮಾರ್ಗವನ್ನು ಹುಡುಕುವಂತೆ ಹೇಳಲಾಗಿದೆ. ಬಳಿಕ ಕ್ರಾಲ್ಪೋರಾ ಉಪಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಪರ್ವೈಜ್ ಅವರು ಕೇರನ್‌ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಡಾ. ಅರ್ಷದ್ ಸೋಫಿ ಮತ್ತು ಅವರ ಅರೆವೈದ್ಯಕೀಯ ಸಿಬ್ಬಂದಿಗೆ ಮಗುವನ್ನು ಹೆರಿಗೆ ಮಾಡುವ ಕಾರ್ಯವಿಧಾನದ ಕುರಿತು ವಾಟ್ಸಾಪ್ ಕಾಲ್‌ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಸತತ 6 ಗಂಟೆಗಳ ಪರಿಶ್ರಮದ ಬಳಿಕ  ಆರೋಗ್ಯವಂತ ಹೆಣ್ಣು ಮಗು ಜನಿಸಿದೆ. ಪ್ರಸ್ತುತ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಕ್ರಾಲ್ಪೋರಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಮೀರ್ ಮೊಹಮ್ಮದ್ ಶಫಿ, ‘ಹೆರಿಗೆ ನೋವಿನಿಂದ ಮಹಿಳೆಯೊಬ್ಬರು ಕೆರಾನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅವರು ಹೆರಿಗೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಸಿರು ನಂಜು ದೀರ್ಘಕಾಲದ ಹೆರಿಗೆ, ಎಪಿಸಿಯೊಟೊಮಿಯೊಂದಿಗೆ ಸಂಕೀರ್ಣ ಹೆರಿಗೆಯ ಇತಿಹಾಸ ಹೊಂದಿದ್ದರು’ ಎಂದು ಹೇಳಿದ್ದಾರೆ.

suddiyaana