ತ್ರಿಪುರಾದಲ್ಲಿ ಮತದಾನಕ್ಕೆ ಕೌಂಟ್ ಡೌನ್ – ಯಾರೂ ಒಳಗೆ ಬರಂಗಿಲ್ಲ.. ಹೊರಗೂ ಹೋಗುವಂತಿಲ್ಲ..!

ತ್ರಿಪುರಾದಲ್ಲಿ ಮತದಾನಕ್ಕೆ ಕೌಂಟ್ ಡೌನ್ – ಯಾರೂ ಒಳಗೆ ಬರಂಗಿಲ್ಲ.. ಹೊರಗೂ ಹೋಗುವಂತಿಲ್ಲ..!

ತ್ರಿಪುರ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಮತದಾನಕ್ಕೆ ಕೌಂಟ್​ಡೌನ್ ಶುರುವಾಗಿದೆ. 60 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 16ರಿಂದ ಮತದಾನ ನಡೆಯಲಿದೆ. ಹೀಗಾಗಿ ಶಾಂತಿಯುತ ಮತದಾನ ಹಾಗೂ ಮುಂಜಾಗ್ರತಾ ಕ್ರಮವಾಗಿ ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿ ಮತ್ತು ಅಂತಾರಾಜ್ಯ ಗಡಿಗಳನ್ನು ಇಂದಿನಿಂದ ಬಂದ್ ಮಾಡಲಾಗಿದೆ.

ಇದನ್ನೂ ಓದಿ : ಒತ್ತುವರಿ ಜಾಗ ತೆರವುಗೊಳಿಸುವಂತೆ ದೇವರಿಗೇ ನೋಟಿಸ್ – ರೈಲ್ವೆ ಇಲಾಖೆ ಎಡವಟ್ಟಿನಿಂದ ಆಗಿದ್ದೇನು..!?

ಚುನಾವಣಾ ಆಯೋಗದ ಸೂಚನೆ ಮೇರೆಗೆ ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿ ಮತ್ತು ಅಸ್ಸಾಂ ಮತ್ತು ಮಿಜೋರಾಂನ ಅಂತರರಾಜ್ಯ ಗಡಿಗಳನ್ನು ಸೋಮವಾರದಿಂದ ಮುಚ್ಚಲಾಗುವುದು ಎಂದು ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಗಿಟ್ಟೆ ಕಿರಣ್‌ಕುಮಾರ್ ದಿನಕರರಾವ್ ತಿಳಿಸಿದ್ದಾರೆ. ಜೊತೆಗೆ ಹೋಟೆಲ್‌ಗಳು, ಹಾಸ್ಟೆಲ್‌ಗಳು ಮತ್ತು ಮದುವೆ ಮಂಟಪಗಳಲ್ಲಿ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಸ್‌ಎಫ್‌ ಯೋಧರಿಗೆ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ ಇಂದಿನಿಂದಲೇ ಹೋಟೆಲ್‌ಗಳು, ಹಾಸ್ಟೆಲ್‌ಗಳು ಮತ್ತು ಮದುವೆ ಮಂಟಪಗಳಲ್ಲಿ ಚುನಾವಣಾಧಿಕಾರಿಗಳ ತಪಾಸಣೆ ನಡೆಸಲಾಗುತ್ತಿದೆ. ಗಡಿಯಲ್ಲಿ ಬಂದ್ ಮಾಡಿರೋದ್ರಿಂದ ಹೊರಗಿನ ಅಡ್ಡ ಮತದಾನಗಳನ್ನ ತಡೆಗಟ್ಟಬಹುದಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಬಹಿರಂಗ ಚುನಾವಣಾ ಪ್ರಚಾರಕ್ಕೆ ಇವತ್ತು ತೆರೆ ಬಿದ್ದಿದ್ದು ಮತಗಟ್ಟೆಗಳ ಬಳಿ ಬಂದೋಬಸ್ತ್ ಕೈಗೊಳ್ಳಲಾಗಿದೆ.  ಅಭ್ಯರ್ಥಿಗಳಿಗೆ ಯಾರಾದ್ರೂ ಬೆದರಿಕೆ ಹಾಕಿದ್ರೆ ಅಂತಹವರು ಮನವಿ ಮಾಡಿದ್ರೆ ಭದ್ರತೆ ಹೆಚ್ಚಿಸೋದಾಗಿ ಚುನಾವಣಾ ಆಯೋಗ ಹೇಳಿದೆ.

suddiyaana