ಮಗನ ಮುಂದೆಯೇ ಹಾರ್ದಿಕ್ ಪಾಂಡ್ಯ ಮರುಮದುವೆ – ‘ಸೆಕೆಂಡ್ ಇನ್ನಿಂಗ್ಸ್’ ಸೀಕ್ರೆಟ್ ಏನು..!?
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತೆ ಮದುವೆಯಾಗುತ್ತಿದ್ದಾರೆ. ಅರೇ ಹಾರ್ದಿಕ್ ಪಾಂಡ್ಯ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ರಲ್ಲ. ಈಗ ಮತ್ತೆ ಹಸೆಮಣೆ ಏರುತ್ತಿದ್ದಾರಾ ಅಂತಾ ಕನ್ಫ್ಯೂಸ್ ಆಗ್ಬೇಡಿ. ಅಸಲಿ ವಿಚಾರ ಮುಂದಿದೆ ಓದಿ.
ಇದನ್ನೂ ಓದಿ :ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಕಲರವ – ಏರೋ ಇಂಡಿಯಾ-2023 ಗೆ ಚಾಲನೆ ನೀಡಿದ ಮೋದಿ
ಹೌದು. ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಜೊತೆ ಹಾರ್ದಿಕ್ ಪಾಂಡ್ಯ ಒಟ್ಟಿಗೆ ಜೀವನ ನಡೆಸಲು ಆರಂಭಿಸಿ ಈಗಾಗಲೇ ವರ್ಷಗಳೇ ಕಳೆದಿವೆ. ಗಂಡು ಮಗುವಿಗೆ ತಂದೆಯಾಗಿರುವ ಪಾಂಡ್ಯ ಮದುಮಗನಾಗುತ್ತಿದ್ದಾರೆ ಎಂಬ ವಿಚಾರ ಅಚ್ಚರಿ ಮೂಡಿಸಬಹುದು. ಆದ್ರೆ ಹಾರ್ದಿಕ್, ನತಾಶಾ ಜೊತೆಯೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಜೊತೆ ಒಟ್ಟಿಗೆ ಜೀವನ ನಡೆಸಲು ಆರಂಭಿಸಿ ಈಗಾಗಲೇ ವರ್ಷಗಳೇ ಕಳೆದಿವೆ. ಇದೀಗ ಈ ಜೋಡಿ ಫೆಬ್ರವರಿ 14 ಅನ್ನು ವಿಶೇಷವಾಗಿಸಲು ಮರುಮದುವೆಯಾಗಲು ತೀರ್ಮಾನಿಸಿದ್ದಾರೆ.
ಮೂಲಗಳ ಪ್ರಕಾರ ಈ ಮದುವೆಯು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದ್ದು, ಅದರ ಸಿದ್ಧತೆಗಳು ಕಳೆದ ನವೆಂಬರ್ನಲ್ಲಿಯೇ ಪ್ರಾರಂಭವಾಗಿವೆ ಎನ್ನಲಾಗಿದೆ.
ಹಾರ್ದಿಕ್ ಹಾಗೂ ನತಾಶಾ ಮದುವೆ ಎರಡು ರೀತಿಯಲ್ಲಿ ನಡೆಯುತ್ತಿದ್ದು, ಮೊದಲು ಈ ಇಬ್ಬರು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಬಳಿಕ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಕಾರ ಮದುವೆಯಾಗಲಿದ್ದಾರೆ. ಏಕೆಂದರೆ ಪಾಂಡ್ಯ ಗೆಳತಿ ನತಾಶಾ ಸರ್ಬಿಯಾದವರಾಗಿದ್ದು, ಅಲ್ಲಿನ ಸಂಪ್ರದಾಯದ ಪ್ರಕಾರವೂ ಮದುವೆ ನಡೆಯಲಿದೆ.
ಇಂದಿನಿಂದ ಮದುವೆ ಕಾರ್ಯಕ್ರಮಗಳು ಆರಂಭವಾಗಲಿವೆ. ಫೆಬ್ರವರಿ 13 ಸೋಮವಾರದಿಂದ ಪ್ರಾರಂಭವಾಗಿ ಫೆಬ್ರವರಿ 16 ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.
ಹಾರ್ದಿಕ್ ಮತ್ತು ನತಾಶಾ ಮೂರು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2020ರ ಮೇ 31ರಂದು ಅವರು ವಿವಾಹ ಕೂಡ ಆಗಿದ್ದರು. ಈ ದಂಪತಿಯ ಮಗುವಿಗೆ ಜುಲೈಗೆ ಮೂರು ವರ್ಷ ತುಂಬುತ್ತಿದೆ. ಆದರೆ, ಇದೀಗ ಅವರಿಗೆ ಅದ್ಧೂರಿಯಾಗಿ ಮದುವೆ ಆಗಬೇಕು ಅನಿಸಿದೆಯಂತೆ. ಹಾಗಾಗಿ ಅದೇ ನತಾಶಾ ಜೊತೆ ಫೆ.14ರಂದು ಅವರು ಎಲ್ಲರ ಸಮ್ಮುಖದಲ್ಲಿ ಮತ್ತೊಂದು ಬಾರಿ ಮದುವೆ ಆಗುತ್ತಿದ್ದಾರೆ.
2020ರಲ್ಲಿ ಮದುವೆಯಾದ ಸಂದರ್ಭದಲ್ಲಿ ಕೊವಿಡ್ ಕಾರಣದಿಂದ ಕೇವಲ ಆಪ್ತರಿಗಷ್ಟೇ ಮದುವೆಗೆ ಆಹ್ವಾನಿಸಿದ್ದರು. ಇದೀಗ ಎಲ್ಲರ ಸಮ್ಮುಖದಲ್ಲಿ ಅವರು ಸತಿಪತಿಗಳಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಕ್ರಿಕೆಟ್ ತಂಡದ ಬಹುತೇಕ ಸದಸ್ಯರು ಹಾಗೂ ಈ ದಂಪತಿಯ ಸ್ನೇಹಿತರು ಮತ್ತು ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಹಾರ್ದಿಕ್ ಮದುವೆ ಸಮಾರಂಭವನ್ನು ಇದೊಂದು ವಿಶೇಷ ಕಾರ್ಯಕ್ರಮ ಎಂದೇ ಬಣ್ಣಿಸಲಾಗುತ್ತಿದೆ. ಮದುವೆ ಮತ್ತು ಮಗುವಾಗಿ ಈ ರೀತಿಯಲ್ಲಿ ಮದುವೆ ಆಗುತ್ತಿರುವ ಮೊದಲ ಕ್ರಿಕೆಟಿಗೆ ಎನ್ನುವ ಹೆಗ್ಗಳಿಕೆಯೂ ಇವರದ್ದು.