ಈ ಗ್ರಾಮದಲ್ಲಿ 32 ಎಕರೆ ಜಮೀನಿಗೆ ಮಂಗಗಳೇ ಮಾಲೀಕರು! – ಗ್ರಾಮಸ್ಥರೂ ಒಪ್ಪಿಕೊಂಡಿದ್ದೇಕೆ?

ಈ ಗ್ರಾಮದಲ್ಲಿ 32 ಎಕರೆ ಜಮೀನಿಗೆ ಮಂಗಗಳೇ ಮಾಲೀಕರು! – ಗ್ರಾಮಸ್ಥರೂ ಒಪ್ಪಿಕೊಂಡಿದ್ದೇಕೆ?

ಮಂಗಗಳೆಂದರೆ ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಕೋತಿಗಳು ಎಲ್ಲಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತೋ ಅಂತಾ ರೈತರು ಚಿಂತೆ ಮಾಡುತ್ತಾರೆ. ಹಾಗಾಗಿ ಕಪಿ ಸೈನದಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಕೋತಿಗಳೇ ಜಮೀನಿನ ಒಡೆಯರಂತೆ!

ಹೌದು, ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೋತಿಗಳು ತಮ್ಮ ಹೆಸರಿಗೆ ಸುಮಾರು 32 ಎಕರೆ ಭೂಮಿಯನ್ನು ನೋಂದಾಯಿಸಿಕೊಂಡಿವೆಯಂತೆ. ಉಪಳ ಗ್ರಾಮ ಪಂಚಾಯತ್​ ಬಳಿ ಪತ್ತೆಯಾದ ಭೂ ದಾಖಲೆಗಳನ್ನು ಪರೀಕ್ಷಿಸಿದಾಗ ಸುಮಾರು 32 ಎಕರೆ ಜಮೀನು ಗ್ರಾಮದಲ್ಲಿ ವಾಸಿಸುತ್ತಿರುವ ಕೋತಿಗಳ ಹೆಸರಿನಲ್ಲಿದೆ ಎಂಬುದನ್ನು ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಪ್ರಾಣಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯದ ಕಾರಣ ಅವುಗಳನ್ನು ಉಳಿಸುವ ಸಲುವಾಗಿ ಈ ರೀತಿ ಮಾಡಿರಬಹುದು ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: ಸೂರ್ಯನ ದೊಡ್ಡ ಭಾಗ ಒಡೆದು ಸೃಷ್ಟಿಯಾಯ್ತು ಸುಳಿ – ಭಾಸ್ಕರನ ಕೋಪಕ್ಕೆ ವಿಜ್ಞಾನಲೋಕವೇ ದಿಗ್ಭ್ರಮೆ..!

ಈ ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಕೋತಿಗಳಿಗೆ ಬಹಳ ಗೌರವ ನೀಡುತ್ತಾರೆ. ಈ ನಿವೇಶನದಲ್ಲಿ ಪಾಳು ಬಿದ್ದ ಮನೆಯೂ ಇದೆಯಂತೆ. ಈ ಮನೆಯಲ್ಲಿ ಯಾರು ವಾಸಿಸುತ್ತಿದ್ದರು. ಈ ಮನೆಯವರೇ ಕೋತಿಗಳ ಹೆಸರಿಗೆ ಜಮೀನು ಬರೆದಿರಬಹುದಾ ಅನ್ನೋ ಮಾಹಿತಿ ಕೂಡ ಇಲ್ಲವಂತೆ.

ಹಿಂದೆ ಗ್ರಾಮದಲ್ಲಿ ಮದುವೆ ನಡೆದಾಗಲೆಲ್ಲಾ ಮಂಗಗಳಿಗೆ ಮೊದಲು ಉಡುಗೊರೆ ನೀಡಿ ನಂತರವೇ ಸಮಾರಂಭ ಆರಂಭವಾಗುತ್ತಿತ್ತಂತೆ. ಈಗ ಕೆಲವರು ಮಾತ್ರ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಮಂಗಗಳು ತಮ್ಮ ಮನೆಬಾಗಿಲಿನಲ್ಲಿ ಕಾಣಿಸಿಕೊಂಡಾಗ ಗ್ರಾಮಸ್ಥರು ಸಹ ಅವುಗಳಿಗೆ ಆಹಾರವನ್ನು ನೀಡುತ್ತಾರಂತೆ. ಹಾಗಾಗಿ ಈ ಕೋತಿಗಳಿಗೆ ವಿಶೇಷ ಸ್ಥಾನಮಾನ ನೀಡಲು, ಅವುಗಳ ಸಂತತಿ ಉಳಿಸಲು 32 ಎಕರೆ ಜಮೀನು ಬರೆದಿರಬಹುದು ಅಂತ ಹೇಳಲಾಗುತ್ತಿದೆ. ಇದೀಗ ಅರಣ್ಯ ಇಲಾಖೆ ಈ ಜಮೀನಿನಲ್ಲಿ ನೆಡುತೋಪು ಕಾಮಗಾರಿ ನಡೆಸುತ್ತಿದೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

ಈ ಬಗ್ಗೆ ಗ್ರಾಮದ ಸರಪಂಚ್ ಬಪ್ಪಾ ಪಡವಾಲ್ ಮಾತನಾಡಿ, ‘ದಾಖಲೆಗಳಲ್ಲಿ ಒಟ್ಟು 32 ಎಕರೆ ಜಮೀನು ಮಂಗಳಿಗೆ ಸೇರಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಈ ಪ್ರಾಣಿಗಳಿಗೆ ಯಾರು ಮತ್ತು ಯಾವಾಗ ಈ ವ್ಯವಸ್ಥೆ ಮಾಡಿದ್ದಾರೆಂಬುದು ತಿಳಿದಿಲ್ಲ. ಈ ಹಿಂದೆ ಗ್ರಾಮದಲ್ಲಿ ನಡೆಯುವ ಎಲ್ಲ ಆಚರಣೆಗಳಲ್ಲಿ ಮಂಗಗಳು ಸೇರುತ್ತಿದ್ದವಂತೆ. ಹಾಗಾಗಿ ಈಗಲೂ ಈ ಗ್ರಾಮದಲ್ಲಿ ಸುಮಾರು 100 ಮಂಗಗಳು ವಾಸವಾಗಿವೆ. ಪ್ರಾಣಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯದ ಕಾರಣ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಊರಿನ ಗ್ರಾಮಸ್ಥರು ಇಲ್ಲಿನ ಮಂಗಗಳಿಗೆ ವಿಶೇಷ ಗೌರವ ನೀಡುತ್ತಾರೆ’ ಎಂದು ತಿಳಿಸಿದ್ದಾರೆ.

suddiyaana