ಅಯ್ಯಯ್ಯೋ ಹೊರಗೆ ಬರೋಕೆ ಆಗ್ತಿಲ್ಲ – ಬಾಗಿಲಲ್ಲಿ ಸಿಲುಕಿ ಗಜರಾಜನ ಒದ್ದಾಟ
ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತನ್ನ ಅತಿಯಾಸೆಯಿಂದಾಗಿ ಮನುಷ್ಯರು ಪರಿಸರ ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಇದರಿಂದಾಗಿ ಕಾಡು ಪ್ರಾಣಿಗಳು ಆಹಾರಕ್ಕಾಗಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ವನ್ಯಜೀವಿಗಳು ಕೃಷಿ ಭೂಮಿ ನಾಶ, ಜನರ ಮೇಲೆ ದಾಳಿ ಮಾಡುತ್ತಿವೆ ಅಂತಾ ದಿನನಿತ್ಯ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡುತ್ತೇವೆ. ಅಲ್ಲದೇ ಕಾಡು ಪ್ರಾಣಿಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ಕಟ್ಟಡದೊಳಗೆ ನುಗ್ಗಿ ಪೇಚಿಗೆ ಸಿಲುಕಿದೆ.
ಇದನ್ನೂ ಓದಿ: ನಾಯಿ ಮರಿಗೆ ಕೋತಿಯೇ ತಾಯಿ! – ಹೇಗಿದೆ ಗೊತ್ತಾ ಅಪರೂಪದ ವಾತ್ಸಲ್ಯ?
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಆಗಾಗ ಪ್ರಾಣಿಗಳ ಬದುಕಿಗೆ ಸಂಬಂಧಿಸಿದ ಆಸಕ್ತಿಕರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆನೆಯೊಂದರ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆನೆಯೊಂದು ಕಟ್ಟಡದೊಳಗೆ ಹೋಗಿದೆ. ಬಳಿಕ ಬಾಗಿಲಿನಲ್ಲಿ ಸಿಕ್ಕಿಕೊಂಡು ಹೊರಬರಲಾರದೇ ಒದ್ದಾಡುತ್ತಿದೆ. ಕೆಲಹೊತ್ತುಗಳ ಕಾಲ ಹಿಂದೆ ಮುಂದೆ ಬಂದು, ಹೇಗೇಗೋ ಒದ್ದಾಡಿ ಗಜರಾಜ ಸಣ್ಣ ಬಾಗಿಲಿನಿಂದ ಕಡೆಗೂ ಹೊರಬಂದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಗಜರಾಜನ ಒದ್ದಾಟವನ್ನು ಕಂಡ ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಅವನ ಇಷ್ಟದ ತಿಂಡಿಯೇ ಇಲ್ಲಿಗೆ ಕರೆತಂದಿರಬೇಕು. ಆವನ ಇಷ್ಟದ ತಿಂಡಿ ಯಾವುದು ಅಂತಾ ತಿಳಿಯಲು ನಿಜವಾಗಿಯೂ ಉತ್ಸುಕನಾಗಿದ್ದೇನೆ ಅಂತಾ ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು ಗಜರಾಜ ಸರ್ವಶಿಕ್ಷಣ ಅಭಿಯಾನ ಮತ್ತು ಮಧ್ಯಾಹ್ನದ ಬಿಸಿಯೂಟವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಅಂತ ಪ್ರತಿಕ್ರಿಯಿಸಿದ್ದಾರೆ.
Such obstacles are no barriers when it comes to their favourite stuff…
Gentle giant wriggling out after a tasty snack.They have more smell receptors than any mammal – including dogs – and can sniff out food that is even several miles away.
Via @Saket_Badola pic.twitter.com/fTCy5K90gV— Susanta Nanda IFS (@susantananda3) September 12, 2022