ಫೈನಲ್ ಗೂ ಮೊದಲೇ ಬೀಗಿದ PAK – ಭಾರತದ ಸೋಲಿಗೆ ನಖ್ವಿಯಿಂದ ಗಿಫ್ಟ್
ರೈಸಿಂಗ್ ಸ್ಟಾರ್ಸ್ ಆಗ್ತಾರಾ ಲಂಕಾ?

ಫೈನಲ್ ಗೂ ಮೊದಲೇ ಬೀಗಿದ PAK – ಭಾರತದ ಸೋಲಿಗೆ ನಖ್ವಿಯಿಂದ ಗಿಫ್ಟ್ರೈಸಿಂಗ್ ಸ್ಟಾರ್ಸ್ ಆಗ್ತಾರಾ ಲಂಕಾ?

2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಈಗ ಕ್ಲೈಮ್ಯಾಕ್ಸ್​ಗೆ ಬಂದಿದೆ. ಭಾನುವಾರ ಪಾಕಿಸ್ತಾನ ಎ ಮತ್ತು ಶ್ರೀಲಂಕಾ ಎ ತಂಡಗಳು ಚಾಂಪಿಯನ್ಸ್ ಪಟ್ಟಕ್ಕಾಗಿ ಕಣಕ್ಕಿಳಿಯಲಿದ್ದಾರೆ. ಭಾರತದ ವಿರುದ್ಧ ಸೆಮೀಸ್ ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿರೋ ಶ್ರೀಲಂಕಾ.. ಬಾಂಗ್ಲಾದೇಶದ ವಿರುದ್ಧ ವಿನ್ ಆಗಿ ಫೈನಲ್​ಗೆ ಅರ್ಹತೆ ಪಡೆದಿರೋ ಪಾಕಿಸ್ತಾನ.. ಪ್ರಸ್ತುತ ಟೂರ್ನಮೆಂಟ್​ನಲ್ಲಿ ಅಜೇಯವಾಗಿ ಫೈನಲ್​ಗೆ ಬಂದಿರೋ ಈ ಎರಡೂ ತಂಡಗಳ ನಡುವೆ ಪ್ರಶಸ್ತಿ ಸುತ್ತಿನಲ್ಲಿ ಟಫ್ ಫೈಟ್ ಅಂತೂ ಇರುತ್ತೆ. ಪಾಕಿಸ್ತಾನ ತಂಡದ ನಾಯಕ ಅಬ್ದುಲ್ ಸಮದ್ ಮತ್ತು ಶ್ರೀಲಂಕಾ ತಂಡದ ನಾಯಕ ಪವನ್ ರತ್ನನಾಯಕೆ ಇಬ್ರೂ ಕೂಡ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಇಲ್ಲಿ ಲಂಕಾಗಿಂತ ಜಾಸ್ತಿ ಪಾಕಿಸ್ತಾನ ಟ್ರೋಫಿ ಗೆಲ್ಲೋ ಓವರ್ ಕಾನ್ಫಿಡೆನ್ಸ್​ನಲ್ಲಿದ್ದಾರೆ.  ಭಾರತ ಸೆಮೀಸ್​ನಲ್ಲೇ ಎಲಿಮಿನೇಟ್ ಆಗಿದ್ದಕ್ಕೆ  ಸಂಭ್ರಮಿಸಿದ್ದಾರೆ. ಗ್ರೂಪ್ ಹಂತದಲ್ಲಿ ಭಾರತದ ಎದುರು ಗೆದ್ದಾಗ್ಲೇ ಪಾಕ್ ಪ್ಲೇಯರ್ಸ್ ಓವರ್ ಆಗಿ ಸೆಲೆಬ್ರೇಟ್ ಮಾಡಿದ್ರು.

ಇದನ್ನೂ ಓದಿ : HITಮ್ಯಾನ್​ ಗೆ ಮತ್ತೆ MI ಪಟ್ಟ – 5 ಟ್ರೋಫಿ.. 45ರ ಜೆರ್ಸಿ ಅದೃಷ್ಟನಾ?

ಭಾರತ ಪಾಕಿಸ್ತಾನ ಪಂದ್ಯಗಳು ಅಂತಾ ಬಂದಾಗ ಮೋಸ್ಟ್ ಆಫ್ ದಿ ಟೈಮ್ ಭಾರತನೇ ಗೆಲ್ಲೋದು. ಆದ್ರೆ ಈಸಲ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್​ನ ಗ್ರೂಪ್ ಹಂತದ ಮ್ಯಾಚಲ್ಲಿ ಪಾಕಿಸ್ತಾನ ವಿನ್ ಆಗಿತ್ತು. ಭಾರತ ‘ಎ’ ತಂಡವನ್ನು 48 ರನ್‌ಗಳಿಂದ ಸೋಲಿಸಿದ್ರು. ಭಾರತದ ಬ್ಯಾಟಿಂಗ್ ವೇಳೆ ವಿಕೆಟ್ ಬಿದ್ದಾಗ ಅದ್ರಲ್ಲೂ ವಿಶೇಷವಾಗಿ ಹರ್ಷಿತ್ ರಾಣಾ ಮತ್ತು ತಿಲಕ್ ವರ್ಮಾ ಔಟಾದಾಗ ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ಆಕ್ರಮಣಕಾರಿ ಸಂಜ್ಞೆಗಳನ್ನು ಮಾಡುತ್ತಾ ಸಂಭ್ರಮಿಸಿದರು. ಗೆಲುವು ಖಚಿತವಾದ ತಕ್ಷಣ ಆಟಗಾರರು ಮೈದಾನಕ್ಕೆ ಓಡಿಬಂದು ಪರಸ್ಪರ ಅಪ್ಪಿಕೊಂಡು ಕುಣಿದಾಡಿದರೆ, ಕ್ರೀಡಾಂಗಣದಲ್ಲಿದ್ದ ಪಾಕಿಸ್ತಾನಿ ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು. ಪಾಕಿಸ್ತಾನದ ಆಟಗಾರನೊಬ್ಬ ಕಾಗದದ ನೋಟುಗಳನ್ನು ಗಾಳಿಯಲ್ಲಿ ಬೀಸುತ್ತಾ ಸಂಭ್ರಮಿಸಿದ್ದು ಮತ್ತು ಭಾರತೀಯ ಆಟಗಾರರತ್ತ ಆಕ್ರಮಣಕಾರಿ ಸನ್ನೆಗಳನ್ನು ಮಾಡಿದ್ದು ದೊಡ್ಡ ವಿವಾದವೇ ಆಗಿತ್ತು. ಹೀಗೆ ಆಟಗಾರರ ಬಿಲ್ಡಪ್ ಒಂದು ಕಡೆಯಾದ್ರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾರತದ ಸೋಲಿಗೆ ಬಂಪರ್ ಬಹುಮಾನ ಘೋಷಿಸಿದ್ದಾರೆ ಎನ್ನಲಾಗಿದೆ.

ಗ್ರೂಪ್ ಹಂತದಲ್ಲಿ ಭಾರತ ಸೋಲಿಸಿದ್ದಕ್ಕೆ ಬಹುಮಾನ ಘೋಷಣೆ!

ಭಾರತದ ಎದುರಲ್ಲಿ ಪದೇಪದೆ ಸೋತು ಮುಖಭಂಗ ಅನುಭವಿಸ್ತಿದ್ದ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಗೆಲ್ಲೋದೇ ದೊಡ್ಡ ವಿಚಾರ ಆಗಿತ್ತು. ಅದ್ರಲ್ಲೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅಂತೂ ಎರಡೆರಡು ಸಲ ಮಾನ ಕಳ್ಕೊಂಡಿದ್ರು. ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಏಷ್ಯಾಕಪ್ ಗೆದ್ದಾಗ ನಖ್ವಿ ಕೈಯಿಂದ ಟ್ರೋಫಿ ಪಡೆದಿರಲಿಲ್ಲ. ಆ ನಂತ್ರ ಹರ್ಮನ್ ಪ್ರೀತ್ ಕೌರ್ ಕ್ಯಾಪ್ಟನ್ಸಿಯಲ್ಲಿ ವುಮೆನ್ಸ್ ತಂಡ ಏಷ್ಯಾಕಪ್ ಗೆದ್ದಾಗಲೂ ನಖ್ವಿಕೈಯಿಂದ ಟ್ರೋಫಿ ನಿರಾಕರಿಸಿದ್ರು. ಆದ್ರೀಗ ರೈಸಿಂಗ್ ಸ್ಟಾರ್ಸ್ ಆಟಗಾರರು ಭಾರತದ ವಿರುದ್ಧ ಗೆದ್ದಿರೋದಕ್ಕೆ ಪಿಸಿಬಿ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಫುಲ್ ಖುಷಿಯಾಗಿದ್ದಾರೆ. ತಂಡದ ಪ್ರದರ್ಶನವನ್ನು ಶ್ಲಾಘಿಸಿ, ನಗದು ಬಹುಮಾನ ಮತ್ತು ಬೋನಸ್‌ಗಳನ್ನು ಘೋಷಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡ್ತಿದೆ. ಒಟ್ನಲ್ಲಿ ಪಾಕಿಸ್ತಾನ ಹಾಲಿ ಚಾಂಪಿಯನ್ ಆಗಿ ಟೂರ್ನಮೆಂಟ್​ನಲ್ಲಿ ಕಣಕ್ಕಿಳಿದಿತ್ತು. ಈಗ ಮತ್ತೆ ಫೈನಲ್ ಪ್ರವೇಶಿಸಿದ್ದು ಟ್ರೋಫಿ ಗೆಲ್ಲೋಕೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಆದ್ರೆ ಪಾಕಿಸ್ತಾನಕ್ಕೆ ಈ ಸಲ ಟ್ರೋಫಿ ಗೆಲುವಿಗಿಂತ ಜಾಸ್ತಿ ಭಾರತದ ವಿರುದ್ಧ ಗೆದ್ವಿ ಅನ್ನೋದೇ ಪರಮಾನಂದ ಆಗಿರುತ್ತೆ. ಮತ್ತೊಂದೆಡೆ ಭಾರತ ಸೆಮೀಸ್​ನಲ್ಲಿ ಸೋತು ಫೈನಲ್​ನಲ್ಲಿ ಸೇಡು ತೀರಿಸಿಕೊಳ್ಳೋ ಅವಕಾಶವನ್ನೂ ಕಳ್ಕೊಂಡಿದೆ. ಈಗ ಪಾಕಿಸ್ತಾನ ಮತ್ತು ಲಂಕಾ ನಡುವೆ ಫೈನಲ್ ಫೈಟ್ ನಡೆಯಲಿದ್ದು ಶ್ರೀಲಂಕಾದ ಬ್ಯಾಟಿಂಗ್ ಫಾರ್ಮ್ ಮತ್ತು ಪಾಕಿಸ್ತಾನದ ಬೌಲಿಂಗ್ ಶಕ್ತಿ ನಡುವಿನ ಕದನದಲ್ಲಿ ಟ್ರೋಫಿ ಯಾರಿಗೆ ಅನ್ನೋ ಕುತೂಹಲ ಮೂಡಿದೆ.

Shantha Kumari

Leave a Reply

Your email address will not be published. Required fields are marked *