HITಮ್ಯಾನ್​ ಗೆ ಮತ್ತೆ MI ಪಟ್ಟ – 5 ಟ್ರೋಫಿ.. 45ರ ಜೆರ್ಸಿ ಅದೃಷ್ಟನಾ?
ಮುಂಬೈ ಗತವೈಭವ ಮರುಕಳಿಸುತ್ತಾ?

HITಮ್ಯಾನ್​ ಗೆ ಮತ್ತೆ MI ಪಟ್ಟ – 5 ಟ್ರೋಫಿ.. 45ರ ಜೆರ್ಸಿ ಅದೃಷ್ಟನಾ?ಮುಂಬೈ ಗತವೈಭವ ಮರುಕಳಿಸುತ್ತಾ?

ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಮಂಕಾಗಿದ್ದ ಮುಂಬೈ ಇಂಡಿಯನ್ಸ್​ 20ನೇ ಆವೃತ್ತಿಗೆ ತನ್ನ ಅಸಲಿ ಖದರ್ ತೋರಿಸೋಕೆ ಹೊರಟಿದೆ. 5 ಬಾರಿಯ ಟ್ರೋಫಿ ವಿನ್ನರ್ ಮುಂಬೈ ಮತ್ತೆ ತನ್ನ ಚಾಂಪಿಯನ್ ನಾಯಕನಿಗೇ  ಪಟ್ಟ ಕಟ್ಟಿದೆ. ಹಿಟ್​ಮ್ಯಾನ್ ರೋಹಿತ್ ಶರ್ಮಾ ಈಗ ಅಫಿಶಿಯಲ್ ಆಗಿಯೇ ಮತ್ತೊಮ್ಮೆ ಎಂಐ ತಂಡದ ಕ್ಯಾಪ್ಟನ್ ಆಗಿದ್ದಾರೆ.

ಇದನ್ನೂ ಓದಿ  : ಮೊನ್ನೆ 204.. ಇಂದು 40 ರನ್ಸ್! – ಸೂರ್ಯವಂಶಿಗೆ ಲಂಕನ್ನರ ಬ್ರೇಕ್

2024ರಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿ ಶಾಕ್ ಕೊಟ್ಟಿದ್ದ ಅಂಬಾನಿ ಬ್ರಿಗೇಡ್ ಆನಂತ್ರದ ಮೂರೂ ಆವೃತ್ತಿಗಳಲ್ಲೂ ತಾನೇ ಶಾಕ್ ಆಗಿತ್ತು. 2024ರಲ್ಲಿ 9ನೇ ಸ್ಥಾನ, 2025ರಲ್ಲಿ ಪ್ಲೇಆಫ್ಸ್, 2026ರಲ್ಲಿ 9ನೇ ಸ್ಥಾನ.. ಡ್ರೆಸ್ಸಿಂಗ್ ರೂಮ್​ನಲ್ಲೂ ನಿಲ್ಲದ ಗಾಸಿಪ್ಸ್, ಆನ್ ಫೀಲ್ಡ್​ನಲ್ಲೂ ಆಟಗಾರರ ನಡುವೆಯೇ ಟಾಕ್​ವಾರ್. ಹೀಗೆ ಸಾಲು ಸಾಲು ಡ್ರಾಮಾಗಳಿಂದ ಬೇಸತ್ತಿದ್ದ ಫ್ರಾಂಚೈಸಿ ಕೊನೆಗೂ ಹಳೇ ಗಂಡನ ಪಾದವೇ ಗತಿ ಅನ್ನೋ ಗಾದೆ ಮಾತಿನಂತೆ ಮತ್ತೊಮ್ಮೆ ಹಿಟ್​ಮ್ಯಾನ್​ಗೆ ಶರಣಾಗಿದ್ದಾರೆ. ನವೆಂಬರ್ 26ರಂದು ಕೈಯಲ್ಲಿ ಕ್ಯಾಪ್ ಹಿಡಿದಿರೋ ಫೋಟೋ ಹಾಕಿ ಹೊಸ ನಾಯಕನ ಹಿಂಟ್ ಕೊಟ್ಟಿದ್ದ ಫ್ರಾಂಚೈಸಿ 24 ಗಂಟೆಯಲ್ಲಿ ಹೊಸ ನಾಯಕನ ಘೋಷಣೆ ಮಾಡೋದಾಗಿ ಹೇಳಿತ್ತು. ಅದ್ರಂತೆ ನವೆಂಬರ್ 27ರಂದು ಮುಂಬೈ ತನ್ನ ಹೊಸ ನಾಯಕನನ್ನ ಘೋಷಿಸಿದ್ದು ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ತಂಡ ಕಣಕ್ಕಿಳಿಯಲಿದೆ. 45ರ ನಂಬರ್ ಜೆರ್ಸಿ ಹಾಗೇ 5 ಬಾರಿ ಕಪ್ ಗೆಲ್ಲಿಸಿಕೊಟ್ಟ ನಾಯಕನ ಜೊತೆ 20ನೇ ಆವೃತ್ತಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯೋಕೆ ಹೊರಟಿದೆ.

 ರೋಹಿತ್‌ ಗೆ ಮತ್ತೆ ಪಟ್ಟ ಯಾಕೆ?

ಮುಂಬೈ ಇಂಡಿಯನ್ಸ್‌ ಗೆ 5 ಐಪಿಎಲ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಅನುಭವ

ತಂಡದ ಆಟಗಾರರ ಸಾಮರ್ಥ್ಯ ಮತ್ತು ಸಂಯೋಜನೆಯ ಬಗ್ಗೆ ಸಾಕಷ್ಟು ಅನುಭವ

ವಿಶ್ವಕಪ್ ಸೇರಿದಂತೆ ಒತ್ತಡದ ಪಂದ್ಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ

ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಅನುಭವ ಮತ್ತು ಆಟಗಾರರ ಜೊತೆ ಫ್ರೆಂಡ್ಲಿ ಟಾಕ್

ಕಳೆದ ಕೆಲವು ಆವೃತ್ತಿಗಳಲ್ಲಿ ತಂಡದ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿರದಿರುವುದು

ಹೀಗೆ ರೋಹಿತ್​ಗೆ ಕ್ಯಾಪ್ಟನ್ಸಿ ನೀಡಿರೋದ್ರ ಹಿಂದೆ ಸಾಕಷ್ಟು ರೀಸನ್ಸ್ ಇದೆ. ಹಾಗಂತ ಇಲ್ಲಿ ರೋಹಿತ್‌ಗೆ ನಾಯಕತ್ವ ಸಿಗುವುದೇ ದೊಡ್ಡ ವಿಷಯವಲ್ಲ. ಅದನ್ನು ಯಶಸ್ವಿಯಾಗಿ ನಿಭಾಯಿಸುವುದೇ ನಿಜವಾದ ಸವಾಲು. ಮುಂಬೈ ಕೊನೆಯ ಬಾರಿ 2020ರಲ್ಲಿ ಚಾಂಪಿಯನ್ ಆಗಿತ್ತು. 2027ರಲ್ಲಿ ಆರನೇ ಟ್ರೋಫಿ ಗೆಲ್ಲಿಸಬೇಕೆಂಬ ಒತ್ತಡ ರೋಹಿತ್ ಮೇಲಿದೆ. ಌಂಡ್ ಇಲ್ಲಿ ಫ್ರಾಂಚೈಸಿ ಬದಲಾವಣೆ ಮಾಡ್ತಿರೋದೂ ಕೂಡ ಇದೇ ಕಾರಣಕ್ಕೆ. 2027ರಲ್ಲಿ ರೋಹಿತ್ 40ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಫಿಟ್ನೆಸ್, ಬ್ಯಾಟಿಂಗ್ ಫಾರ್ಮ್ ಮತ್ತು ನಾಯಕತ್ವದ ಜವಾಬ್ದಾರಿಯನ್ನು ಒಟ್ಟಿಗೆ ನಿಭಾಯಿಸಬೇಕಿದೆ. ಮೋಸ್ಟ್ ಇಂಪಾರ್ಟೆಂಟ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ರೋಹಿತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದರು. ನಾಯಕನಾದರೆ ಪ್ಲೇಯಿಂಗ್ XIನಲ್ಲಿ ಆರಂಭದಿಂದಲೇ ಇರಬೇಕಾಗುತ್ತದೆ. ಇದು ಅವ್ರ ರೋಲ್​ನಲ್ಲಿ ಆಗುವಂಥ ಮೇಜರ್ ಬದಲಾವಣೆ. ಅದೂ ಅಲ್ದೇ ರೋಹಿತ್‌ಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ದಂಡೇ ಇದೆ. ಸೋ ಮತ್ತೊಮ್ಮೆ ಅವ್ರ ನಿರೀಕ್ಷೆಯನ್ನ ನಿಜ ಮಾಡ್ಬೇಕಿದೆ.  ಅಷ್ಟೇ ಅಲ್ಲದೆ ಕೋಚಿಂಗ್ ವಿಭಾಗದಲ್ಲೂ ಸಾಕಷ್ಟು ಚೇಂಜಸ್ ಆಗಿವೆ. ಕೀರನ್ ಪೊಲಾರ್ಡ್ ಹೆಡ್ ಕೋಚ್ ಆದ್ರೆ ರಾಬಿನ್ ಉತ್ತಮ್ಮ ಬ್ಯಾಟಿಂಗ್ ಕೋಚ್, ಮಿಚೆಲ್ ಮೆಕ್ಲೆನಗನ್ ಬೌಲಿಂಗ್ ಕೋಚ್, ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ಹೀಗಾಗಿ ಇವ್ರೆಲ್ಲರ ಜೊತೆ ಒಂದು ಅಂಡರ್​ಸ್ಟಾಂಡಿಂಗ್​ನಲ್ಲಿ ತಂಡವನ್ನ ಲೀಡ್ ಮಾಡ್ಬೇಕಿದೆ. ಅಷ್ಟೇ ಅಲ್ಲದೆ 2027ರ ಏಕದಿನ ವಿಶ್ವಕಪ್ ನಲ್ಲೂ ಆಡ್ಬೇಕು ಅಂತಿರೋ ರೋಹಿತ್ ಐಪಿಎಲ್ ಕ್ಯಾಪ್ಟನ್ಸಿಯ ಒತ್ತಡವನ್ನೂ ನಿಭಾಯಿಸಿಕೊಂಡೇ ಆನ್​​ಫೀಲ್ಡ್​ನಲ್ಲಿ ಪರ್ಫಾಮ್ ಮಾಡೋದು ಅವ್ರ ಮುಂದಿನ ಅತಿದೊಡ್ಡ ಟಾಸ್ಕ್.

Shantha Kumari

Leave a Reply

Your email address will not be published. Required fields are marked *