ಲಂಕಾ ಬಲೆಗೆ ಬಿದ್ದ ಭಾರತ – T-20I ಸ್ಟಾರ್ಸ್ ಇದ್ರೂ ಸೋತಿದ್ದೇಕೆ?
8 ಬೌಲರ್ಸ್ ಬೆಂಡೆತ್ತಿದ ಸಿಂಹಳೀಯರು!

ಬಲಿಷ್ಠ ಟೀಂ ಅನ್ನೋ ಟ್ಯಾಗ್ಲೈನ್.. ಟಿ-20ಐ ಸ್ಟಾರ್ ಗಳೇ ತುಂಬಿದ್ದ ಸ್ಟ್ರಾಂಗ್ ಸ್ಕ್ಯಾಡ್.. ಆದ್ರೆ ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಮ್ಯಾಚಲ್ಲಿ ಪಲ್ಟಿ ಹೊಡೆದಿದ್ದಾರೆ. ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್ನಿಂದ ಭಾರತ ಹೊರಬಿದ್ದಿದೆ. ಎಸಿಸಿ ಮೆನ್ಸ್ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಶ್ರೀಲಂಕಾ ಎ ತಂಡ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದೆ. ಲಂಕಾ ಬಲೆಗೆ ಬಿದ್ದ ಭಾರತ ಟೂರ್ನಮೆಂಟ್ಗೆ ಗುಡ್ ಬೈ ಹೇಳಿದೆ. 50 ಓವರ್ಗಳ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಂಕಾ 41.3 ಓವರ್ಗಳಲ್ಲಿ 318 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ಎ ತಂಡವು ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಫೈನಲ್ಗೆ ಲಗ್ಗೆಯಿಟ್ಟಿದೆ. 317 ರನ್ಗಳ ಬೃಹತ್ ಮೊತ್ತ, ಆರಂಭದಲ್ಲಿ ವೈಭವ್ ಅಬ್ಬರ, ಅಭಿಷೇಕ್-ತಿಲಕ್ ಅರ್ಧಶತಕದ ಆಟ. ಆದರೂ ಭಾರತಕ್ಕೆ ಫೈನಲ್ ಭಾಗ್ಯ ಸಿಗಲಿಲ್ಲ. ಬ್ಯಾಟಿಂಗ್ನಲ್ಲಿ ಮಧ್ಯಮ ಓವರ್ಗಳ ಎಡವಟ್ಟು, ಬೌಲಿಂಗ್ನಲ್ಲಿ ನಿಯಂತ್ರಣದ ಕೊರತೆ, ಫೀಲ್ಡಿಂಗ್ನಲ್ಲಿ ಕೈತಪ್ಪಿದ ಅವಕಾಶಗಳು. ಹೀಗೆ ಮೂರು ವಿಭಾಗಗಳಲ್ಲಿನ ವೈಫಲ್ಯ ಭಾರತ ಎ ತಂಡದ ಏಷ್ಯಾಕಪ್ ಕನಸಿಗೆ ತೆರೆ ಎಳೆದಿದೆ.
ಇದನ್ನೂ ಓದಿ : IPL ಹರಾಜಿನಲ್ಲಿ ಸೆಹ್ವಾಗ್ ಪುತ್ರ – ದ್ರಾವಿಡ್ ಮಗ ರೇಸ್ ನಿಂದ ಔಟ್
ಎಡವಿದ್ದೆಲ್ಲಿ ಭಾರತ?
ಟಾಸ್ ಗೆದ್ರೂ ಬ್ಯಾಟಿಂಗ್ ಆಯ್ಕೆ.. ಇಬ್ಬನಿ ಬಿದ್ದು ಬೌಲಿಂಗ್ ಕಷ್ಟ
ಮೊದಲ ಇನ್ನಿಂಗ್ಸ್ ನಲ್ಲಿ 317 ರನ್ಸ್ ಕಲೆ.. ಇನ್ನೂ ರನ್ಸ್ ಬೇಕಿತ್ತು
8 ಬೌಲರ್ ಗಳನ್ನು ಬಳಸಿದರೂ ಯಾರೊಬ್ಬರಿಂದಲೂ ಬ್ರೇಕ್ ಸಿಗಲಿಲ್ಲ
ಲಸಿತ್ ಕ್ರೂಸ್ ಪುಲ್ಲೆ (116) ಮತ್ತು ಸಿನೆತ್ ಜಯವರ್ಧನೆ (105) ರನ್ಸ್
ಕೇವಲ 21.3 ಓವರ್ಗಳಲ್ಲಿ 174 ರನ್ಗಳ ಜೊತೆಯಾಟವಾಡಿ ಬುನಾದಿ
ಸ್ಪೆಷಲಿಸ್ಟ್ ಸ್ಪಿನ್ನರ್ ಗಳ ಕೊರತೆ ಮತ್ತು ನಿರ್ಧಾರಗಳಲ್ಲಿ ಎಡವಿದ ತಿಲಕ್
ಡಿಆರ್ ಎಸ್ ತಂತ್ರಜ್ಞಾನ ಇಲ್ಲದಿರುವುದು, ಅಂಪೈರ್ ತೀರ್ಪು ಕೂಡ ಹಿನ್ನಡೆ
ಒಟ್ನಲ್ಲಿ ಭಾರತ ತಂಡದಲ್ಲಿ ತಿಲಕ್ ವರ್ಮಾ, ವೈಭವ್, ಅಭಿಷೇಕ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ರಿಂಕು ಸಿಂಗ್ ಹೀಗೆ ಟಿ-20ಐ ಸ್ಟಾರ್ ಗಳೇ ತುಂಬಿದ್ರೂ ಫೈನಲ್ ಗೆ ತಲುಪೋಕಂತೂ ಆಗಲಿಲ್ಲ. ಪಾಕಿಸ್ತಾನ ವಿರುದ್ಧ 314 ರನ್ಗಳ ಟಾರ್ಗೆಟ್ ರೀಚ್ ಆಗೋಕೆ ಆಗ್ಲಿಲ್ಲ.. ಅಂದ್ರೆ ಬ್ಯಾಟಿಂಗ್ ಫಾಲ್ಟ್. ಈಗ ಲಂಕಾ ವಿರುದ್ಧ 318 ರನ್ಸ್ ಡಿಫೆಂಡ್ ಮಾಡಿಕೊಳ್ಳೋಕೆ ಆಗ್ದೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ನೋಡಿರಿ

