ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್!‌ – PAKಗೆ ವೈಭವ್ ವಯಸ್ಸಿನದ್ದೇ ಡೌಟ್
ಮುಂಬೈಗೆ HITಮ್ಯಾನ್ ಕ್ಯಾಪ್ಟನ್?

ಸೂರ್ಯವಂಶಿ ಬ್ಯಾಟ್‌ನಲ್ಲಿ AI ಚಿಪ್!‌ – PAKಗೆ ವೈಭವ್ ವಯಸ್ಸಿನದ್ದೇ ಡೌಟ್ಮುಂಬೈಗೆ HITಮ್ಯಾನ್ ಕ್ಯಾಪ್ಟನ್?

ಬಾಸ್ ಬೇಬಿ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ರನ್ ಮಳೆ ಸುರಿಸಿದಾಗ ಕ್ರಿಕೆಟ್ ಲೋಕವೇ ಬೆರಗಾಗಿತ್ತು. ನಂತರ ಮಗನ ಕ್ರಿಕೆಟ್‌ಗಾಗಿ ತಂದೆ ತ್ಯಾಗ ಮಾಡಿದ್ದಕ್ಕೆ ಕೆಲವರು ಗ್ರೇಟ್ ಎಂದರೆ ಇನ್ನು ಕೆಲವರು ಇದೆಲ್ಲಾ ಬರೀ ಹೈಪ್‌ಗಾಗಿ ಎಂದು ವ್ಯಂಗ್ಯವಾಡಿದ್ದರು. ಅದೆಲ್ಲದರ ನಡುವೆ ತನ್ನ ಹೆತ್ತವರ ತ್ಯಾಗಕ್ಕೆ, ತಂದೆಯ ಕನಸಿಗೆ ವೈಭವ್ ಒಂದು ಬೆಲೆ ಕೊಟ್ಟಿದ್ದಾರೆ. ತನ್ನ ಕ್ರಿಕೆಟ್ ಕೋಚಿಂಗ್‌ಗಾಗಿ ಜಮೀನು ಮಾರಿದ ತಂದೆಗೆ ಈಗ ವಿಶ್ವಗೌರವ ತಂದುಕೊಟ್ಟಿದ್ದಾರೆ ಸೂರ್ಯವಂಶಿ.

ಇದನ್ನೂ ಓದಿ : ODI ರಕ್ಷಕ ಸೂರ್ಯವಂಶಿ – ಬಾಸ್ ಬೇಬಿ ಮೆಚ್ಚಿದ NZ ಕೋಚ್

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಐಪಿಎಲ್ ಹರಾಜಿನಲ್ಲಿ 40 ಕೋಟಿ ಪಡೆಯುವ ಸಾಧ್ಯತೆಯಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಆರ್ ಆರ್ ತಂಡದ ಭಾಗವಾಗಿರುವ ವೈಭವ್, ಹರಾಜು ಅಥವಾ ರಿಟೆನ್ಷನ್ ಪ್ರಕ್ರಿಯೆಯಲ್ಲಿ ₹40 ಕೋಟಿ ಪಡೆಯುವ ಸಾಧ್ಯತೆಯಿದ್ದು, ಜೊತೆಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕ ಯಾರು ಎಂಬ ಪ್ರಶ್ನೆಗೆ ಮುಂಬೈ ಪ್ರಾಂಚೈಸಿ ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಮುಂಬೈ ಪ್ರಾಂಚೈಸಿ ಒಂದು ನಿಗೂಢ ಪೋಸ್ಟ್ ಹಂಚಿಕೊಂಡಿದೆ. ಈ ಅನಿಮೇಟೆಡ್ ಪೋಸ್ಟ್‌ನಲ್ಲಿ ತಂಡದ ಕ್ಯಾಪ್ ಹಿಡಿದಿರುವ ಕೈ ಕಾಣಿಸಿಕೊಂಡಿದೆ. ಈ ವಿಶಿಷ್ಟ ಪೋಸ್ಟ್ ನೋಡಿದ ಅಭಿಮಾನಿಗಳು ಈ ಕೈ ರೋಹಿತ್ ಶರ್ಮಾ ಅವರದ್ದೇ ಎಂದು ಹೇಳಿ ಕಾಮೆಂಟ್ಸ್ ಹಾಕ್ತಿದ್ದಾರೆ.

ಒಂದೇ ಒಂದು ಎಸೆತ ಎದುರಿಸದೆ ಬ್ಯಾಟರ್ ಔಟ್ ಆಗಿರುವ ಘಟನೆ ಮಹಿಳಾ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ನಡೆದಿದೆ. ಮೆಲ್ಬೋರ್ನ್ ರೆನೆಗೇಡ್ಸ್ ಮಹಿಳಾ ತಂಡ ಹಾಗೂ ಬ್ರಿಸ್ಬೇನ್ ಹೀಟ್ ಮಹಿಳಾ ತಂಡಗಳ ನಡುವಿನ ಪಂದ್ಯದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ವೆಸ್ಟ್ ಇಂಡೀಸ್‌ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಬ್ಯಾಟಿಂಗ್‌ಗೆ ಬಂದಿದ್ದರು. ಕ್ರೀಸ್ ತಲುಪುವಲ್ಲಿ ಅವರು ಸ್ವಲ್ಪ ತಡ ಮಾಡಿದರು. 75 ಸೆಕೆಂಡ್‌ಗಳ ಸಮಯ ಮುಗಿದರೂ ಡಾಟಿನ್, ತಮ್ಮ ಬ್ಯಾಟಿಂಗ್ ಗೇರ್ ಹಾಗೂ ಗ್ಲೌಸ್‌ಗಳನ್ನು ಸರಿಪಡಿಸಿಕೊಳ್ಳೋದ್ರಲ್ಲೇ ಮಗ್ನರಾಗಿದ್ದರು. ಆಗ ಅಂಪೈರ್‌ ಟೈಮ್‌ಡ್ ಔಟ್ ನೀಡಿ ಪೆವಿಲಿಯನ್‌ಗೆ ಕಳಿಸಿದ್ರು.

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಆರ್‌ಸಿಬಿ, ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್‌ ಹೇಳಿದ್ದಾರೆ. ಬೆಥೆಲ್ ಒಬ್ಬ ಅದ್ಭುತ ಪ್ರತಿಭೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಅವರಿಗಿದೆ. ಹೀಗಿರುವಾಗ ಆರ್‌ಸಿಬಿ ಅವರನ್ನು ಕೈಬಿಟ್ಟಿದ್ದು ಸರಿಯಾದ ನಿರ್ಧಾರವಲ್ಲ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ಐಪಿಎಲ್ 2027 ಮಿನಿ ಹರಾಜಿಗೆ ಬರೋಬ್ಬರಿ 1,220 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು BCCI ಅಧಿಕೃತವಾಗಿ ಪ್ರಕಟಿಸಿದೆ. ಈ ಪೈಕಿ 939 ಭಾರತೀಯ ಆಟಗಾರರು ಮತ್ತು 281 ವಿದೇಶಿ ಆಟಗಾರರು ಹರಾಜು ಕಣದಲ್ಲಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡುವುದು ಖಚಿತವಾಗಿದೆ. ಹರಾಜಿನಲ್ಲಿ 25 ವಿದೇಶಿ ಆಟಗಾರರ ಸ್ಥಾನಗಳೂ ಸೇರಿದಂತೆ ಒಟ್ಟು 66 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಎಲ್ಲಾ 10 ತಂಡಗಳು ಹರಾಜು ಪ್ರಕ್ರಿಯೆ ನಡೆಸಲಿವೆ.

ಮಿನಿ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ 10 ಫ್ರಾಂಚೈಸಿಗಳ ಪೈಕಿ ಲಕ್ನೋ ಸೂಪರ್ ಜೈಂಟ್ಸ್  ಅತಿ ಹೆಚ್ಚು ದುಡ್ಡಿನೊಂದಿಗೆ ಎಂಟ್ರಿಕೊಡಲಿದೆ. ಲಕ್ನೋ ತಂಡ  ₹47.45 ಕೋಟಿ ಹಣದೊಂದಿಗೆ ಹರಾಜಿಗೆ ಪ್ರವೇಶಿಸಲಿದೆ. ನಂತರದ ಸ್ಥಾನಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 41.65 ಕೋಟಿ,  ಮತ್ತು ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ಳಿ ₹39.50 ಕೋಟಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ವೈಭವ್ ಸೂರ್ಯವಂಶಿ ಸಿಡಿಸಿದ ಸ್ಫೋಟಕ ದ್ವಿಶತಕದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ವೇಗಿ ತನ್ವೀರ್ ಅಹ್ಮದ್, ವೈಭವ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ವೈಭವ್‌ಗೆ 15 ವರ್ಷ ವಯಸ್ಸು ಅನ್ನೋದನ್ನ ನಾನು ನಂಬಲ್ಲ. ಆತನಿಗೆ ಕನಿಷ್ಠ 20-21 ವರ್ಷ ವಯಸ್ಸಾಗಿದೆ. ಎಷ್ಟೇ ಪ್ರತಿಭಾವಂತನಾಗಿದ್ರೂ 15 ವರ್ಷದ ಹುಡುಗನಿಗೆ ಒಂದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳನ್ನು ಬಾರಿಸಲು ಸಾಧ್ಯವಿಲ್ಲ. ಆತನ ವಯಸ್ಸಿನ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ.

UAE ವಿರುದ್ಧ ದ್ವಿಶತಕ ಸಿಡಿಸಿದ ಬೆನ್ನಲ್ಲೇ, ವೈಭವ್ ಸೂರ್ಯವಂಶಿ ಮುಂದೊಂದು ದಿನ ODI ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಲಿದ್ದಾರೆ ಎಂದು ಅವರ ಬಾಲ್ಯದ ಕೋಚ್ ಮನೀಶ್ ಓಜಾ ಭವಿಷ್ಯ ನುಡಿದಿದ್ದಾರೆ. 2 ವರ್ಷಗಳ ಹಿಂದೆಯೇ ವೈಭವ್ ದ್ವಿಶತಕ ಬಾರಿಸುತ್ತಾನೆಂದು ಊಹಿಸಿದ್ದೆವು. ಮುಂದೊಂದು ದಿನ 300 ರನ್‌ಗಳನ್ನ ಬಾರಿಸುವ ಸಾಮರ್ಥ್ಯ ಆತನಿಗಿದೆ. ವೈಭವ್ ದಾಖಲೆಗಳನ್ನು ಮುರಿಯಲು ಸ್ವತಃ ಕ್ರಿಸ್ ಗೇಲ್ ಮತ್ತೆ ಮೈದಾನಕ್ಕೆ ಇಳಿಯಬೇಕಾಗಬಹುದು ಎಂದು ಓಜಾ ಹೇಳಿದ್ದಾರೆ.

2026ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿದ ವೈಭವ್ ಸೂರ್ಯವಂಶಿ ಆಟಕ್ಕೆ ಐಸ್‌ಲ್ಯಾಂಡ್ ಕ್ರಿಕೆಟ್ ಹಾಸ್ಯಮಯವಾಗಿ ಮೆಚ್ಚುಗೆ ವ್ಯಕ್ತಪಡಿಸಿದೆ. ಮಂಗಳವಾರ ಜೆನ್ಸನ್ ಹುವಾಂಗ್ ಎನ್ವಿಡಿಯಾ ಸಿಇಒ ಆಗಿ ಮರಳಿರುವುದು ಮತ್ತು ಬುಧವಾರ ವೈಭವ್ ಬ್ಯಾಟ್‌ನಲ್ಲಿರುವ AI ಚಿಪ್‌ಗಳು ಮತ್ತೆ ಕೆಲಸ ಮಾಡಲು ಶುರುಮಾಡಿರುವುದು ಕಾಕತಾಳೀಯವಲ್ಲ ಎಂದು Xನಲ್ಲಿ ಪೋಸ್ಟ್ ಮಾಡಿದೆ.

Shantha Kumari

Leave a Reply

Your email address will not be published. Required fields are marked *