ಬ್ಯಾಟಿಂಗ್ ಲೈನಪ್ ಗಿಲ್ಲ ಸರ್ಜರಿ! – ಬುಮ್ರಾಗೆ ಮತ್ತೆ ರೆಸ್ಟ್ ಕೊಡ್ಬೇಕಾ?
2ನೇ ಟೆಸ್ಟ್ ಗೆ ಹೀಗಿದೆ ಪ್ಲೇಯಿಂಗ್ 11

ಬ್ಯಾಟಿಂಗ್ ಲೈನಪ್ ಗಿಲ್ಲ ಸರ್ಜರಿ! – ಬುಮ್ರಾಗೆ ಮತ್ತೆ ರೆಸ್ಟ್ ಕೊಡ್ಬೇಕಾ?2ನೇ ಟೆಸ್ಟ್ ಗೆ ಹೀಗಿದೆ ಪ್ಲೇಯಿಂಗ್ 11

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆಯಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ನಡೆಯಲಿರೋ ಈ ಪಂದ್ಯ ಡಬ್ಲ್ಯೂಟಿಸಿ ಫೈನಲ್ ರೇಸ್ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತುಂಬಾನೇ ಮುಖ್ಯ. ಅದ್ರಲ್ಲೂ ಭಾರತಕ್ಕಂತೂ ಡು ಆರ್ ಡೈ ಮ್ಯಾಚ್. ಹೀಗಾಗಿ ಗೆಲ್ಲಲೇಬೇಕಿರೋ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಕೆಲ ಬದಲಾವಣೆಗಳನ್ನ ಮಾಡ್ಬೇಕಾಗುತ್ತೆ. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 352 ರನ್‌ಗಳ ಮುನ್ನಡೆ ಸಾಧಿಸಿದ್ದರೂ, ಕೊನೇ ದಿನ ಆಲೌಟ್ ಮಾಡೋಕೆ ಸಾಧ್ಯವಾಗಲಿಲ್ಲ. ಸೋ ಬೌಲಿಂಗ್ ಫೇಲ್ಯೂರ್ ಅನ್ನೋದೇ ಕ್ಲಿಯರ್ ಆಗಿ ಗೊತ್ತಾಗಿತ್ತು. ಹೀಗಾಗಿ ಎರಡನೇ ಪಂದ್ಯಕ್ಕೆ ಬೌಲಿಂಗ್​ನಲ್ಲಿ ಚೇಂಜಸ್ ಅಂತೂ ಬೇಕಾಗುತ್ತೆ. ಆದ್ರೆ ಯಾರನ್ನ ಹೊರಗಿಟ್ಟು ಯಾರಿಗೆ ಚಾನ್ಸ್ ಕೊಡ್ತಾರೆ ಅನ್ನೋದೇ ಈಗ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಇಂಡೋ-ಪಾಕ್ ಪಂದ್ಯಗಳ ಸರಣಿ – 14 ತಿಂಗಳಲ್ಲಿ 14 ರೋಚಕ ಮ್ಯಾಚ್

ಟಾಪ್ 5 ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆ ಮಾಡಲ್ಲ!

ವೆಲ್ಲಿಂಗ್ಟನ್​ನಲ್ಲಿ ಭಾರತ 720 ರನ್ಸ್ ಗಳಿಸಿ ಫಸ್ಟ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸೋಕೆ ಕಾರಣನೇ ಟಾಪ್ 5 ಬ್ಯಾಟರ್ ಗಳ ಅದ್ಭುತ ಬ್ಯಾಟಿಂಗ್ ಪ್ರದರ್ಶನ. ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದು ಯಶಸ್ವಿ ಜೈಸ್ವಾಲ್ 85 ರನ್ ಗಳಿಸಿ ಔಟಾದ್ರೆ ಕೆ.ಎಲ್. ರಾಹುಲ್ 136 ರನ್ ಸಿಡಿಸಿ  ಉತ್ತಮ ಆರಂಭ ನೀಡಿದ್ರು. ಮೂರನೇ ಕ್ರಮಾಂಕದಲ್ಲಿ ಆಡಿದ ದೇವದತ್ ಪಡಿಕ್ಕಲ್ 80 ರನ್​ಗಳಿಗೆ ಔಟಾದ್ರೆ ನಂಬರ್ 4ನಲ್ಲಿ ನಾಯಕ ಶುಭ್​ಮನ್ ಗಿಲ್ 98 ರನ್ ಗಳಿಸಿ ಜಸ್ಟ್ 2 ರನ್​ಗಳಿಂದ ಶತಕ ವಂಚಿತರಾದ್ರು. ಇನ್ನು ನಂಬರ್ 5ನಲ್ಲಿ ರಿಷಬ್ ಪಂತ್ 128 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ರು. ಹೀಗಾಗಿ ಬ್ಯಾಟಿಂಗ್ ಆರ್ಡರ್ ಬೊಂಬಾಟ್ ಆಗಿ ಇರೋದ್ರಿಂದ 2ನೇ ಪಂದ್ಯಕ್ಕೂ ಕೂಡ ಇದೇ ಬ್ಯಾಟರ್​ಗಳನ್ನೇ ಕಣಕ್ಕಿಳಿಸ್ತಾರೆ. ಌಂಡ್ ಯಾವುದೇ ಚೇಂಜಸ್ ಇರಲ್ಲ. ಆದ್ರೆ ಆಲೌಂಡರ್ ಮತ್ತು ಬೌಲಿಂಗ್ ಯುನಿಟ್​ನಲ್ಲಿ ತಲಾ ಒಂದೊಂದು ಬದಲಾವಣೆ ಮಾಡೋ ಸಾಧ್ಯತೆಗಳಿವೆ.

ಸುಂದರ್ ಬದಲಿಗೆ ಜಡೇಜಾ.. ಬುಮ್ರಾಗೆ ಮತ್ತೆ ರೆಸ್ಟ್ ಬೇಕಾ?

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬುಮ್ರಾ ಬರೋಬ್ಬರಿ 49 ಓವರ್ ಬೌಲಿಂಗ್ ಮಾಡಿ 5 ವಿಕೆಟ್ ಪಡೆದಿದ್ದರು. ಈಗ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಕೇವಲ ಮೂರು ದಿನಗಳ ಅಂತರವಿರುವುದರಿಂದ ಅವರ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಪ್ರಮುಖವಾಗಿದೆ. ಸೋ ಬುಮ್ರಾಗೆ ರೆಸ್ಟ್ ಕೊಡ್ತಾರಾ ಅನ್ನೋ ಚರ್ಚೆಗಳು ನಡೀತಿದೆ. ಆದ್ರೆ ಈ ಪಂದ್ಯವನ್ನ ಗೆಲ್ಲಲೇಬೇಕು ಅಂದ್ರೆ ಜಸ್ಪ್ರೀತ್ ಬುಮ್ರಾ ಆಡೋದು ತುಂಬಾನೇ ಮುಖ್ಯವಾಗುತ್ತೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಬುಮ್ರಾ ಎರಡನೇ ಟೆಸ್ಟ್‌ನಲ್ಲೂ ಆಡುವ ನಿರೀಕ್ಷೆಯಿದೆ ಎಂದಿದ್ದಾರೆ. ಹೀಗಿದ್ರೂ ಆಲೌಂಡರ್ ವಾಷಿಂಗ್ಟನ್ ಸುಂದರ್ ಬದಲಿಗೆ ರವೀಂದ್ರ ಜಡೇಜಾ ಹಾಗೇ ಅನ್ಶುಲ್ ಕಾಂಬೋಜ್ ಬದಲಿಗೆ ಸಿರಾಜ್​ರನ್ನ ಆಡಿಸಿ ಎನ್ನಲಾಗ್ತಿದೆ.

 ಹೀಗಿದೆ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ದೇವದತ್ ಪಡಿಕ್ಕಲ್

ಶುಭ್ ಮನ್ ಗಿಲ್

ರಿಷಭ್ ಪಂತ್

ಧ್ರುವ್ ಜುರೇಲ್

ರವೀಂದ್ರ ಜಡೇಜಾ

ಆಕಾಶ್ ದೀಪ್

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

Shantha Kumari

Leave a Reply

Your email address will not be published. Required fields are marked *