ಹರ್ಷಿತ್ ರಾಣಾ ವಿರುದ್ಧ PAK ದೂರು – IND Vs SL ಸೆಮೀಸ್ ಫೈಟ್
ಪಾಕ್ ಗೆ ಈಗಲೇ ವೈಭವ್ ಭಯ?

ಹರ್ಷಿತ್ ರಾಣಾ ವಿರುದ್ಧ PAK ದೂರು – IND Vs SL ಸೆಮೀಸ್ ಫೈಟ್ಪಾಕ್ ಗೆ ಈಗಲೇ ವೈಭವ್ ಭಯ?

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್​ನ ಅಸಲಿ ಖದರ್ ಈಗ ಸ್ಟಾರ್ಟ್ ಆಗ್ತಿದೆ. ಗ್ರೂಪ್ ಹಂತದ ಪಂದ್ಯಗಳೆಲ್ಲಾ ಮುಗ್ದು ಈಗ ಸೆಮೀಸ್​ಗಾಗಿ ನಾಲ್ಕು ತಂಡಗಳು ಫೈನಲ್ ಆಗಿವೆ.  ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಿರಿಕ್ ತೆಗೆದು ಭಾರತೀಯ ಆಟಗಾರರ ವಿರುದ್ಧ ದೂರು ನೀಡಿದೆ. 2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್​ನ ಸೆಮಿಫೈನಲ್ ಫೈಟ್​ಗೆ ಎ ಗ್ರೂಪ್​ನಿಂದ ಶ್ರೀಲಂಕಾ ಎ ಹಾಗೇ ಬಾಂಗ್ಲಾ ಎ ಸೆಲೆಕ್ಟ್ ಆದ್ರೆ ಬಿ ಗುಂಪಿನಿಂದ ಪಾಕಿಸ್ತಾನ ಎ ಹಾಗೇ ಭಾರತ ಎ ತಂಡಗಳು ಸೆಲೆಕ್ಟ್ ಆಗಿದ್ದಾರೆ. ಸೆಮೀಸ್​ನಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾದ್ರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಲಿದ್ದಾರೆ.

ಇದನ್ನೂ ಓದಿ : 53 ಬಾಲ್.. 28 ಸಿಕ್ಸರ್ಸ್.. 204 ರನ್ಸ್ – ಯುಎಇ ಬೌಲರ್ ಗಳನ್ನ ಚೆಂಡಾಡಿದ ಸೂರ್ಯವಂಶಿ!

ಮೊದಲ ಸೆಮಿಫೈನಲ್ ಪಂದ್ಯ!

ನವೆಂಬರ್ 26, ಭಾರತ Vs ಶ್ರೀಲಂಕಾ

ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭ

ವೆಸ್ಟ್ ಎಂಡ್ ಪಾರ್ಕ್ ಇಂಟರ್‌ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ದೋಹಾ

 

ಎರಡನೇ ಸೆಮಿಫೈನಲ್ ಪಂದ್ಯ

ನವೆಂಬರ್ 27, ಪಾಕಿಸ್ತಾನ Vs ಬಾಂಗ್ಲಾದೇಶ

ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭ

ವೆಸ್ಟ್ ಎಂಡ್ ಪಾರ್ಕ್ ಇಂಟರ್‌ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ದೋಹಾ

ಹೀಗೆ  ಸೆಮೀಸ್​ನಲ್ಲಿ ಗೆದ್ದವ್ರು ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ತಾರೆ. ನವೆಂಬರ್ 29 ಅಂದ್ರೆ ಭಾನುವಾರ ಇದೇ ಸ್ಟೇಡಿಯಮ್​ನಲ್ಲಿ ಮಧ್ಯಾಹ್ನ 3:30ಕ್ಕೆ ಫೈನಲ್ ಪಂದ್ಯ ಆರಂಭವಾಗಲಿದೆ. ಸದ್ಯದ ಟ್ರೆಂಡ್ ನೋಡ್ತಾ ಇದ್ರೆ ಮೊದಲ ಸೆಮೀಸ್​ನಲ್ಲಿ ಭಾರತ ಹಾಗೇ ಎರಡನೇ ಸೆಮೀಸ್​ನಲ್ಲಿ ಪಾಕಿಸ್ತಾನ ವಿನ್ ಆಗೋ ಚಾನ್ಸಸ್ ಜಾಸ್ತಿ ಇದೆ. ಌಂಡ್ ಇಂಡೋ-ಪಾಕ್ ನಡುವೆಯೇ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಫೈನಲ್ ಪಂದ್ಯ ನಡೆಯುತ್ತೆ ಅಂತಾ ಪ್ರೆಡಿಕ್ಟ್ ಮಾಡಲಾಗ್ತಿದೆ. ಆದ್ರೆ ಸೆಮೀಸ್ ಕ್ಲ್ಯಾಶ್ ಶುರುವಾಗೋ ಹೊತ್ತಲ್ಲೇ ಪಾಕಿಸ್ತಾನ ಹೊಸ ಕಿರಿಕ್ ತೆಗೆದು ಭಾರತೀಯ ಆಟಗಾರರ ವಿರುದ್ಧ ದೂರು ದಾಖಲಿಸಿದೆ.

ರಾಣಾ ಸೇರಿದಂತೆ ಭಾರತೀಯ ಆಟಗಾರರ ವಿರುದ್ಧ ಪಾಕ್ ದೂರು!

ಭಾರತ-ಪಾಕ್ ನಡುವಿನ ಪಂದ್ಯಗಳು ಅಂದಾಗ ಈಗ ಕಿರಿಕ್​ಗಳು ಕಾಮನ್ ಅನ್ನೋ ಥರ ಆಗಿದೆ. ಮೊನ್ನೆ ಗ್ರೂಪ್ ಹಂತದ ಮ್ಯಾಚಲ್ಲೂ ಇಂಡೋ-ಪಾಕ್ ಪ್ಲೇಯರ್ಸ್ ನಡುವೆ ಆನ್ ಫೀಲ್ಡ್ ಫೈಟಿಂಗ್ ಆಗಿತ್ತು. ಇದೀಗ ಈ ಜಗಳ ಮತ್ತೊಂದು ಹಂತಕ್ಕೆ ತಲುಪಿದ್ದು, ಭಾರತ ಎ ತಂಡದ ವೇಗಿ ಹರ್ಷಿತ್ ರಾಣಾ ಸೇರಿದಂತೆ ಕೆಲವು ಆಟಗಾರರ ವಿರುದ್ಧ ಪಾಕಿಸ್ತಾನ ಎ ತಂಡ ದೂರು ನೀಡಿದೆ.  ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಹರ್ಷಿತ್ ರಾಣಾ ಪದೇಪದೆ ಎದುರಾಳಿ ಆಟಗಾರರನ್ನು ಕೆಣಕುವ ಮೂಲಕ ಸ್ಲೆಡ್ಜಿಂಗ್ ನಡೆಸಿದ್ದರು. ಇದಕ್ಕೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಕೂಡ ಅಗ್ರೆಸ್ಸಿವ್ ಆಗೇ ರಿಯಾಕ್ಟ್ ಮಾಡಿದ್ರು. ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಭಾರತ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗಲೂ ಇನ್ನೂ ಪೀಕ್​ಗೆ ಹೋಗಿತ್ತು. ಹರ್ಷಿತ್ ರಾಣಾ ಔಟಾದ ಬಳಿಕ ಪಾಕಿಸ್ತಾನದ ಹಲವು ಆಟಗಾರರು ಟಾಂಟ್ ಕೊಡೋ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದು ಎರಡೂ ಕಡೆಯ ಆಟಗಾರರು ಮುಖಾಮುಖಿ ಆಗ್ತಿದ್ದಂತೆ ಆನ್ ಫೀಲ್ಡ್ ಅಂಪೈರ್ಸ್ ಮಧ್ಯ ಪ್ರವೇಶಿಸಿ ಆಟಗಾರರನ್ನ ತಡೆದಿದ್ರು. ಆದ್ರೀಗ ಪಾಕಿಸ್ತಾನ ಎ ತಂಡದ ಆಡಳಿತ ಮಂಡಳಿ ಮ್ಯಾಚ್ ರೆಫರಿಯನ್ನು ಸಂಪರ್ಕಿಸಿ  ಹರ್ಷಿತ್ ರಾಣಾ ವಿರುದ್ಧ ಮ್ಯಾಚ್ ರೆಫರಿ ನಯೀಮ್-ಉರ್-ರಶೀದ್ ಅವರಿಗೆ ದೂರು ನೀಡಿದೆ. ಹರ್ಷಿತ್ ರಾಣಾ ಮಾತ್ರವಲ್ಲದೆ, ಇತರ ಕೆಲವು ಆಟಗಾರರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಈ ವಿವಾದದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಌಂಡ್ ಆಟಗಾರರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿರುವ ಬಗ್ಗೆಯೂ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಈ ಹುಚ್ಚಾಟಗಳಿಗೆಲ್ಲಾ ಬ್ರೇಕ್ ಹಾಕಿ ಅಂಥಾ ಹರ್ಭಜನ್ ಸಿಂಗ್ ರೊಚ್ಚಿಗೆದ್ದಿದ್ದಾರೆ.

ಇಂಡೋ-ಪಾಕ್ ಆಟಗಾರರ ಸಮರಕ್ಕೆ ಬೀಳುತ್ತಾ ಬ್ರೇಕ್?

ಮೊನ್ನೆ ಮ್ಯಾಚಲ್ಲಿ ಎರಡೂ ಕಡೆಯ ಆಟಗಾರರ ವರ್ತನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಕಿಡಿ ಕಾರಿದ್ದಾರೆ. ಆಟಗಾರರ ನಡವಳಿಕೆ ಸರಿಯಾಗಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಅಷ್ಟೇ ಅಲ್ಲ ಮುಂದಿನ ಪೀಳಿಗೆಗೆ ಇದು ಮಾರಕ. ಕೂಡಲೇ ಐಸಿಸಿ ಮತ್ತು ಆಯಾ ಮಂಡಳಿಗಳು ಮಧ್ಯಪ್ರವೇಶಿಸಿ ಪಂದ್ಯದ ವೇಳೆ ಸುಖಾಸುಮ್ಮನೆ ಕಿರಿಕ್ ಮಾಡಬಾರದು. ಪಂದ್ಯಗಳನ್ನ ಗೆದ್ದ ಮೇಲೆ  ಪಾಕಿಸ್ತಾನ ಮತ್ತು ಭಾರತೀಯ ಆಟಗಾರರ ಸೆಲೆಬ್ರೇಷನ್​ಗೆ ರಿಸ್ಟ್ರಿಕ್ಷನ್ಸ್ ಹಾಕಬೇಕು ಅಂದಿದ್ದಾರೆ. ಹಾಗೇ ಹಲವು ವಿಚಾರಗಳನ್ನೂ ಪ್ರಸ್ತಾಪಿಸಿದ್ದಾರೆ.

ಪಂದ್ಯವಲ್ಲ.. ಪ್ರತಿಷ್ಠೆ!

ಭಾರತ-ಪಾಕ್ ಪಂದ್ಯಗಳಂದ್ರೆ ಸೋಲು ಗೆಲುವಷ್ಟೇ ಅಲ್ಲದೆ ಪ್ರತಿಷ್ಠೆ

ಪಂದ್ಯಗಳ ವೇಳೆ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ವಿಚಾರಗಳ ವ್ಯಂಗ್ಯ

ಆಟಗಾರರು ಪಂದ್ಯಕ್ಕಿಂತ ಜಾಸ್ತಿ ವೈಯಕ್ತಿಯ ಟೀಕೆ, ಆಚರಣೆ ಜಾಸ್ತಿ

ಈಗಾಗ್ಲೇ ನೋ ಶೇಕ್ ಹ್ಯಾಂಡ್ ನಿಂದ ಕ್ರೀಢಾಸ್ಫೂರ್ತಿ ಕಡಿಮೆ

ಮುಂದಿನ ದಿನಗಳಲ್ಲಿ ಆಟಕ್ಕಿಂತ ಜಾಸ್ತಿ ಆಟಗಾರರ ವೈಯಕ್ತಿಯ ಟಾರ್ಗೆಟ್

ಹೀಗೆ ಸಾಕಷ್ಟು ವಿಚಾರಗಳಲ್ಲಿ ಎರಡೂ ತಂಡಗಳ ವರ್ತನೆಗೆ ಬ್ರೇಕ್ ಹಾಕಬೇಕು ಅನ್ನೋದು ಭಜ್ಜಿ ಒತ್ತಾಯವಾಗಿದೆ. ಆದ್ರೆ ಈ ಟೂರ್ನಮೆಂಟ್​ನನ್ಲಲೇ ಈ ಎರಡೂ ತಂಡಗಳು ಮತ್ತೊಮ್ಮೆ ಮುಖಾಮುಖಿ ಆಗೋ ಚಾನ್ಸಸ್ ಇದ್ದು ಈ ಪಂದ್ಯ ಇನ್ನೂ ನೆಕ್ಸ್​ಟ್ ಲೆವೆಲ್​ನಲ್ಲಿರುತ್ತೆ. ಅದಕ್ಕಿಂತ ಜಾಸ್ತಿ ಪಾಕಿಸ್ತಾನಕ್ಕೆ ಈಗಲೇ ವೈಭವ್ ಸೂರ್ಯವಂಶಿ ಭಯ ಶುರುವಾದಂತಿದೆ.  ಯಾಕಂದ್ರೆ ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ಹಾಗೇ ಇದೆ. ಈವನ್ ಪಾಕಿಸ್ತಾನಿಯರು ಕೂಡ ಈ ಬಗ್ಗೆ ಪೋಸ್ಟ್​​ಗಳನ್ನ ಹಾಕಿದ್ದಾರೆ. ಪಾಕ್ ತಂಡದ ಅಭಿಮಾನಿಯೊಬ್ಬ ಯುಎಇ ವಿರುದ್ಧ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ನೋಡಿ ಟೆನ್ಷನ್ ಆಗ್ಬಿಟ್ಟಿದ್ದಾರೆ. 28 ಸಿಕ್ಸರ್ಸ್.. ಅಬ್ಬಬ್ಬಾ ಪಾಕಿಸ್ತಾನ ವಿರುದ್ಧವೂ ಹೀಗೇ ಆಡಿದ್ರೆ ನಾವು ನಮ್ಮ ಮನೆಗೆ ಹೋಗೋದು ಹೆಂಗೆ.. ಸೋ ದಯವಿಟ್ಟು ನಮ್ಮನ್ನ ಸೆಮಿಫೈನಲ್​ನಲ್ಲೇ ಸೋಲಿಸಿ ಮನೆಗೆ ಕಳಿಸಿಬಿಡಿ. ಫೈನಲ್​ನಲ್ಲಿ ಸೋತ್ರೆ ಅವಮಾನ ಸಹಿಸಿಕೊಳ್ಳೋಕೆ ಆಗಲ್ಲ ಅಂತಾ ರೀಲ್ಸ್ ಮಾಡಿದ್ದು ಫುಲ್ ವೈರಲ್ ಆಗಿದೆ.  ಒಟ್ನಲ್ಲಿ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಇನ್ನೇನು ಕ್ಲೈಮ್ಯಾಕ್ಸ್ ಹತ್ತಿರದಲ್ಲಿದೆ. ಹಾಗೇನಾದ್ರೂ ಭಾರತ-ಪಾಕ್ ಫೈನಲ್​ನಲ್ಲಿ ಮುಖಾಮುಖಿ ಆದ್ರೂ ಅಂದ್ರೆ ನೆಕ್ಸ್​ಟ್ ಲೆವೆಲ್ ಫೈಟ್ ಅಂತೂ ಪಕ್ಕಾ. ಈಗಾಗ್ಲೇ ಗ್ರೂಪ್ ಸ್ಟೇಜಲ್ಲಿ ಸೋತಿರೋ ಭಾರತ ಫೈನಲ್​ನಲ್ಲಿ ಗೆದ್ದು ಹಿಂದಿನ ಸೋಲಿಗೆ ಅವ್ರ ಹುಚ್ಚಾಟಕ್ಕೆ ಬಡ್ಡಿ ಸಮೇತ ವಾಪಸ್ ಕೊಡ್ಬೇಕಿದೆ.

Shantha Kumari

Leave a Reply

Your email address will not be published. Required fields are marked *