53 ಬಾಲ್.. 28 ಸಿಕ್ಸರ್ಸ್.. 204 ರನ್ಸ್ – ಯುಎಇ ಬೌಲರ್ ಗಳನ್ನ ಚೆಂಡಾಡಿದ ಸೂರ್ಯವಂಶಿ!

53 ಬಾಲ್.. 28 ಸಿಕ್ಸರ್ಸ್.. 204 ರನ್ಸ್ – ಯುಎಇ ಬೌಲರ್ ಗಳನ್ನ ಚೆಂಡಾಡಿದ ಸೂರ್ಯವಂಶಿ!

15 ವರ್ಷ.. ಜಸ್ಟ್ 15 ವರ್ಷ.. ಆದ್ರೆ ಸಿಕ್ಸರ್ ಸಿಡಿಸೋಕೆ ನಿಂತ್ರೆ ಲೆಕ್ಕ ಇಟ್ಕೊಳ್ಳೋರೇ ಶಾಕ್ ಆಗ್ಬೇಕು. ಯುಎಇ ವಿರುದ್ಧದ ಮ್ಯಾಚಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ನೋಡಿ ಇಡೀ ಕ್ರಿಕೆಟ್ ಲೋಕವೇ ಸ್ಟನ್ ಆಗಿದೆ. ದಶಕಗಳ ಕಾಲ ಕ್ರಿಕೆಟ್​ ಆಳಿದವರೂ ಕೂಡ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾತೆ. ವೈಭವ್ ಬ್ಯಾಟಿಂಗ್ ಮಾಡ್ತಿದ್ರೆ ಯಾವ ಬಾಲ್ ಎಲ್ಲಿ ಹೋಗುತ್ತೆ ಯಾವ ದಿಕ್ಕಲ್ಲಿ ಹೋಗಿ ಲ್ಯಾಂಡ್ ಆಗುತ್ತೆ, ಯಾವ ಮರಗಳ ಸಂದಿಯಲ್ಲಿ ಮರೆಯಾಗುತ್ತೆ ಅನ್ನೋದೇ ಗೊತ್ತಾಗ್ತಾ ಇರ್ಲಿಲ್ಲ. ವಂಡರ್ ಬಾಯ್, ಬಾಸ್ ಬೇಬಿ, ಪ್ರಚಂಡ ಪುಟಾಣಿ, ಬೇರೆ ಪ್ಲಾನೆಟ್ ಬೇಬಿ ಅಂತಾ ಯಾಕೆ ಕರೀತಾರೆ ಅನ್ನೋದಕ್ಕೆ ಉತ್ತರ ಸಿಕ್ಕಿರುತ್ತೆ. ಅದೆಷ್ಟ್ ಬಾಲ್ ಕಳೆದುಹೋಯ್ತೋ ಅಂಪೈರ್​ಗೇ ಗೊತ್ತು.

ಇದನ್ನೂ ಓದಿ : ಗೆಲ್ಲೋ ಮ್ಯಾಚ್ ಡ್ರಾ – 720 ರನ್ಸ್ ಹೊಡೆದ್ರೂ ಎಡವಿದ್ದೆಲ್ಲಿ?

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್​ನಲ್ಲಿ ನೇಪಾಳ ವಿರುದ್ಧ ಗೆದ್ದು ಪಾಕ್ ವಿರುದ್ಧ ಸೋತು ಯುಎಇ ವಿರುದ್ಧ ಕಣಕ್ಕಿಳಿದಿದ್ದ ಭಾರತ ಭರ್ಜರಿ ಗೆಲುವು ಸಾಧಿಸಿದೆ. ವೈಭವ್ ಸೂರ್ಯವಂಶಿ ಇಡೀ ಮ್ಯಾಚ್​ನಲ್ಲಿ ಒನ್ ಮ್ಯಾನ್ ಶಫ ಪ್ರದರ್ಶಿಸಿದ್ರು. ಯುಎಇ ತಂಡದ ಫೀಲ್ಡರ್​ಗಳಿಗೆ ಕೆಲ್ಸನೇ ಇರ್ಲಿಲ್ಲ. ಎವೆರಿ ಬಾಲ್ ಕೂಡ ಬೌಂಡರಿ ಇಂದ ಆಚೆನೇ ಬೀಳ್ತಿದ್ರೆ ಆನ್ ಫೀಲ್ಡ್ ಅಂಪೈರ್​ ಅಂತೂ ಸಿಕ್ಸ್ ಅಂತಾ ಎರಡೂ ಕೈ ಮೇಲೆತ್ತೋದ್ರಲ್ಲೇ ಬ್ಯುಸಿ ಆಗೋಗಿದ್ರು. ಹಿಂಗೇ ಬ್ಯಾಟಿಂಗ್ ಮಾಡ್ಬೇಕು ಅಂತಾ ಡ್ರೀಮ್ ಇರುತ್ತಲ್ಲ ಹಂಗೇ ಇತ್ತು ವೈಭವ್ ಆರ್ಭಟ. ಇಡೀ ಪಂದ್ಯ ಕಂಪ್ಲೀಟ್ ಹೈಲೇಟ್ಸ್ ಅಷ್ಟೇ.

ಭಾರತದ ಎದುರು ಶತಕ ಸಿಡಿಸಿ ಮಿಂಚಿದ ಹರ್ ಪ್ರೀತ್ ಸಿಂಗ್!

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಯುಎಇ ತಂಡದ ನಾಯಕ ಬಾಸಿಲ್ ಹಮೀದ್ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಬಹುಶಃ ಭಾರತದ ಬೌಲಿಂಗ್ ಮುಂದೆ 30 ಓವರ್ ಒಳಗೇ ಆಲೌಟ್ ಆಗ್ಬೋದು ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದ್ರೆ ಯುಎಇ ಬ್ಯಾಟರ್​ಗಳು ಭಾರತದ ಬೌಲರ್​ಗಳನ್ನ ಲಾಸ್ಟ್ ಓವರ್ ಲಾಸ್ಟ್ ಬಾಲ್​ವರೆಗೂ ಕಾಡಿದ್ರು. ಯುಎಇ ಪರ ಹರ್‌ಪ್ರೀತ್ ಸಿಂಗ್ ಭಾಟಿಯಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ರು. ಭಾರತ ಎ ತಂಡದ ಬೌಲರ್‌ಗಳ ವಿರುದ್ಧ ಕ್ರೀಸ್ ಕಚ್ಚಿ ನಿಂತು ಭಾಟಿಯಾ 120 ಎಸೆತಗಳಲ್ಲಿ ಶತಕ ಪೂರೈಸಿದರು. ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಕಂಪ್ಲೀಟ್ ಮಾಡಿದ್ದು ತಲುಪಿದ್ದು ವಿಶೇಷವಾಗಿತ್ತು. 144 ಎಸೆತಗಳಲ್ಲಿ 130 ರನ್ಸ್ ಕಲೆ ಹಾಕಿದ್ದು ತಂಡದ ಪರ ಟಾಪ್ ಸ್ಕೋರರ್ ಆದ್ರು. ಉಳಿದಂತೆ ನಾಯಕ ಬಾಸಿಲ್ ಹಮೀದ್ 36 ರನ್ಸ್ ಸಿಡಿಸಿದ್ದು ಒಟ್ಟಾರೆ 50 ಓವರ್​ಗಳವರೆಗೂ ಬ್ಯಾಟಿಂಗ್ ಮಾಡಿ 8 ವಿಕೆಟ್ ನಷ್ಟಕ್ಕೆ 249 ರನ್​ಗಳನ್ನ ಕಲೆ ಹಾಕಿ ಭಾರತಕ್ಕೆ 250 ರನ್​ಗಳ ಟಾರ್ಗೆಟ್ ನೀಡಿದ್ರು. ಪಾಕಿಸ್ತಾನ ವಿರುದ್ಧ ತಿಣುಕಾಡಿದ್ದ ಭಾರತ ಈ ಮ್ಯಾಚಲ್ಲೂ ಸ್ಲೋವಾಗೇ ಆಡಿ ಗೆಲ್ತಾರೆ ಅನ್ಕೊಂಡ್ರೆ ವೈಭವ್ ಸೂರ್ಯವಂಶಿ ಸಿಂಗಲ್ಲಾಗಿ ನಿಂತು ಮ್ಯಾಚ್ ಫಿನಿಶ್ ಮಾಡಿದ್ರು.

ಸೂರ್ಯವಂಶಿ ಸುನಾಮಿ!

ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ

ಮೊದಲ ಓವರ್ ನಲ್ಲೇ ಹ್ಯಾಟ್ರಿಕ್ ಸಿಕ್ಸರ್ಸ್ ಮೂಲಕ ಧಮಾಕ ಸ್ಟಾರ್ಟ್

16 ಎಸೆತಗಳಲ್ಲೇ ಅರ್ಧಶತಕ ಬಾರಿಸಿ ಮಿಂಚಿದ ವೈಭವ್ ಸೂರ್ಯವಂಶಿ

ವೈಭವ್ ಅಬ್ಬರಕ್ಕೆ 5 ಓವರ್ ಗಳಲ್ಲೇ 100 ರನ್ಸ್, ಇದ್ರಲ್ಲಿ ವೈಭವ್ 82 ರನ್ಸ್

28 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ

40 ಬಾಲಲ್ಲಿ 150 ರನ್ಸ್ ಕಂಪ್ಲೀಟ್ ಮಾಡಿದ ವೈಭವ್ ಸೂರ್ಯವಂಶಿ

ವೈಭವ್ ಅಬ್ಬರದಿಂದ 10 ಓವರ್ ಗಳಲ್ಲೇ 183 ರನ್ಸ್ ಕಲೆ ಹಾಕಿದ್ದ ಭಾರತ

11 ಓವರ್ ಗಳಲ್ಲಿ 200 ರನ್ಸ್ ಕಂಪ್ಲೀಟ್, ವೈಭವ್ ದೇ 164 ರನ್ಸ್

52 ಎಸೆತಗಳಲ್ಲಿ 204 ರನ್ಸ್ ಮೂಲಕ ಡಬಲ್ ಸೆಂಚುರಿ ಬಾರಿಸಿದ ವೈಭವ್

ಸಿಕ್ಸ್ ಮೂಲಕ ಮ್ಯಾಚ್ ಫಿನಿಶ್ ಮಾಡಲು ಮುಂದಾಗಿ ವೈಭವ್ ವಿಕೆಟ್

53 ಎಸೆತಗಳಲ್ಲಿ 28 ಸಿಕ್ಸ್, 7 ಬೌಂಡರಿ ಮೂಲಕ 204 ರನ್ ಗಳಿಸಿ ಔಟ್

ಸಿಕ್ಸರ್ ಗಳಲ್ಲಿ 168 ರನ್ಸ್, ಬೌಂಡರಿಗಳಲ್ಲಿ 28 ರನ್ಸ್, 8 ರನ್ಸ್ ಮಾತ್ರ ಸಿಂಗಲ್ಸ್

14.2 ಓವರ್ ಗಳಲ್ಲಿ 254 ರನ್ಸ್ ಮೂಲಕ ಪಂದ್ಯವನ್ನು ಗೆದ್ದ ಭಾರತ

ಹೀಗೆ ವೈಭವ್ ಸೂರ್ಯವಂಶಿಯವ್ರ ಕಂಪ್ಲೀಟ್ ಒನ್ ಮ್ಯಾನ್ ಶೋ ಮೂಲಕ ಭಾರತ ಸುಲಭವಾಗಿ ಮ್ಯಾಚ್ ವಿನ್ ಆಯ್ತು. 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 14 ಓವರ್‌ಗಳಲ್ಲೇ ಗುರಿ ತಲುಪಿದೆ. ಈ ಪಂದ್ಯದ ಮೂಲಕ ಭಾರತ ತಂಡ ಹಾಗೇ ವೈಭವ್ ಹಲವು ವಿಶ್ವದಾಖಲೆಗಳನ್ನ ಬರೆದಿದೆ.

ದಾಖಲೆಗಳ ಸುರಿಮಳೆ!

28 ಎಸೆತಗಳಲ್ಲಿ ಶತಕ ಬಾರಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ

40 ಎಸೆತಗಳಲ್ಲಿ 150 ರನ್, ಲಿಸ್ಟ್ ಎ ಕ್ರಿಕೆಟ್‌ ನಲ್ಲಿ ವೇಗದ ದಾಖಲೆ

52 ಎಸೆತಗಳಲ್ಲಿ ದ್ವಿಶತಕ, ಅತ್ಯಂತ ವೇಗದ ದ್ವಿಶತಕದ ದಾಖಲೆ

28 ಸಿಕ್ಸರ್ ಮೂಲಕ ಲಿಸ್ಟ್ ಎ ಕ್ರಿಕೆಟ್‌ ನಲ್ಲಿ ಬ್ಯಾಟರ್ ಒಬ್ಬರ ಹೆಚ್ಚು ಸಿಕ್ಸರ್ಸ್

5 ಓವರ್‌ ಗಳಲ್ಲಿ 100 ರನ್ಸ್, ಲಿಸ್ಟ್ ಎ ಕ್ರಿಕೆಟ್‌ ನ ವೇಗದ ತಂಡದ ಶತಕ

50 ಓವ ರ್‌ಗಳ ಪಂದ್ಯದಲ್ಲಿ ಕೇವಲ 14.2 ಓವರ್‌ ಗಳಲ್ಲಿ ಗುರಿ ತಲುಪಿದ್ದು ದಾಖಲೆ

ಒಟ್ನಲ್ಲಿ 50 ಓವರ್​ಗಳ ಪಂದ್ಯ ಟಿ-20ಐ ಪಂದ್ಯವನ್ನೂ ಮೀರಿಸೋ ರೇಂಜ್​ಗೆ ಭಾರತ ವಿನ್ ಆಗಿದೆ. 250 ರನ್​ಗಳ ಟಾರ್ಗೆಟ್​ನಲ್ಲಿ ಸೂರ್ಯವಂಶಿ ಒಬ್ರೇ 204 ರನ್ಸ್ ಬಾರಿಸಿದ್ದಾರೆ. ಉಳಿದ 50 ರನ್​ಗಳನ್ನ ನಾಲ್ವರು ಬ್ಯಾಟರ್ಸ್ ಕಲೆ ಹಾಕಿದ್ದಾರೆ. ಸೂರ್ಯವಂಶಿ ಸಿಡಿದ್ರೆ ದಾಖಲೆಗಳು ಧೂಳೀಪಟವಾಗ್ತಾವೇ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.

Shantha Kumari

Leave a Reply

Your email address will not be published. Required fields are marked *