ಮದುವೆಗಾಗಿ ಜಾಮೀನು ಕೋರಿದ ಪವಿತ್ರಾ ಗೌಡ – ಡಿ.4ಕ್ಕೆ ಮಹತ್ವದ ವಿಚಾರಣೆ

ಮದುವೆಗಾಗಿ ಜಾಮೀನು ಕೋರಿದ ಪವಿತ್ರಾ ಗೌಡ – ಡಿ.4ಕ್ಕೆ ಮಹತ್ವದ ವಿಚಾರಣೆ

ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡ ಮತ್ತೊಮ್ಮೆ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಹೋದರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಮೂಳೆಗಳ ಬಲ ಹೆಚ್ಚಿಸಲು ಈ ಹಣ್ಣು ಬೆಸ್ಟ್!‌ – ಯಾವ ಹೊತ್ತಲ್ಲಿ ತಿಂದ್ರೆ ಆರೋಗ್ಯಕ್ಕೆ ಪ್ರಯೋಜನ?

ಪದೇ ಪದೇ ಜಾಮೀನಿಗೆ ಪ್ರಯತ್ನ ಪಡುತ್ತಿರುವ ಪವಿತ್ರಾ ಗೌಡ ಈಗ ಮಧ್ಯಂತರ ಜಾಮೀನಿಗೆ ಮತ್ತೊಮ್ಮೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪವಿತ್ರಾ ಗೌಡ ಸಹೋದರನ ಮದುವೆ ಡಿಸೆಂಬರ್ 12 ಮತ್ತು 13ರಂದು ನಡೆಯಲಿದೆ. ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಬೇಕು, ಅವಕಾಶಕೊಡಿ ಎಂದು ಪವಿತ್ರಾ ಪರ ವಕೀಲರು ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಕೋರಿದ್ದಾರೆ. ಮದುವೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸುವಂತೆಯೂ ಮನವಿ ಮಾಡಿದ್ದಾರೆ. ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು, ಆಕ್ಷೇಪಣೆ ಸಲ್ಲಿಸುವಂತೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ನಿಗದಿಪಡಿಸಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 26ರಂದು ಬೆಂಗಳೂರಿನ 59ನೇ ಸಿಸಿಎಚ್ (ಸೆಷನ್ಸ್) ನ್ಯಾಯಾಲಯವು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ, ಇದೀಗ ಹೈಕೋರ್ಟ್ ಮೂಲಕ ಪವಿತ್ರಾ ಗೌಡ ತಾತ್ಕಾಲಿಕ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ. ಏಪ್ರಿಲ್  ನಲ್ಲಿ ತಮ್ಮ ಮಗಳ ಪರೀಕ್ಷೆ ಇರುವ ಕಾರಣ ನೀಡಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರಾದರೂ, ತಾಂತ್ರಿಕ ಕಾರಣಗಳಿಂದ ಬಳಿಕ ಅದನ್ನು ಹಿಂಪಡೆದಿದ್ದರು.

Sulekha

Leave a Reply

Your email address will not be published. Required fields are marked *