ಆಡದ ಅಭಿ.. ಸಿಡಿಯದ ಸೂರ್ಯವಂಶಿ – ನೇಪಾಳ ವಿರುದ್ಧ ತಡಕಾಡಿದ ಭಾರತದ ಬ್ಯಾಟಿಂಗ್

ಭಾರತ ತಂಡದಲ್ಲಿ ಸ್ಟಾರ್ ಪ್ಲೇಯರ್ಗಳ ದಂಡೇ ಇದೆ. ಬ್ಯಾಟಿಂಗ್ನಲ್ಲಿ ಹೊಡಿಬಡಿ ಅಂತಾ ಬೌಲರ್ಗಳನ್ನ ಚೆಂಡಾಡಿಬಿಡ್ತಾರೆ. ಅದ್ರಲ್ಲೂ ನೇಪಾಳದಂಥ ಶಿಶುಗಳ ಎದುರಲ್ಲಿ ನೆಕ್ಸ್ಟ್ ಲೆವೆಲ್ ಪರ್ಫಾಮೆನ್ ಬರುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದ್ರೆ ಭಾರತ ಮತ್ತು ನೇಪಾಳ ನಡುವಿನ ಮ್ಯಾಚ್ ಸ್ಟಾರ್ಟ್ ಆದ್ಮೇಲೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅನ್ನೋ ಥರ ಬ್ಯಾಟಿಂಗ್ ಕಂಪ್ಲೀಟ್ ಫ್ಲ್ಯಾಪ್. ನೇಪಾಳ ಬೌಲಿಂಗ್ಗೆ ಅಭಿಷೇಕ್ & ವೈಭವ್ ಕೂಡ ಥಂಡಾ ಹೊಡೆದ್ರು.
ಇದನ್ನೂ ಓದಿ : ಸಿರಾಜ್ ಮುಗಿಸಲು ಗಂಭೀರ್ ಪಣ- ಕೊಹ್ಲಿ ಶಿಷ್ಯನೆಂದು ಬೆಂಚ್ ನಲ್ಲೇ ಬರೆ?
ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಗೆದ್ದ ನೇಪಾಳ ತಂಡದ ನಾಯಕ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಈ ಪಂದ್ಯಕ್ಕೆ ಭಾರತದ ಪರ ಪ್ಲೇಯಿಂಗ್ 11ನಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ, ಆಯುಷ್ ಬದೋನಿ, ರಿಂಕು ಸಿಂಗ್ , ಕುಮಾರ್ ಕುಶಾಗ್ರ, ಶಹಬಾಜ್ ಅಹ್ಮದ್, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ಹರ್ಷಿತ್ ರಾಣಾ ಹಾಗೇ ಪ್ರಿನ್ಸ್ ಯಾದವ್ ಅವಕಾಶ ಪಡೆದಿದ್ರು. ಇನ್ನು ಟಾಸ್ ಸೋತು ಫಸ್ಟ್ ಬ್ಯಾಟಿಂಗ್ಗೆ ಬಂದ ಭಾರತದ ಪರ ಅಭಿಷೇಕ್ ಶರ್ಮಾ ಹಾಗೇ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಓಪನ್ ಮಾಡಿದ್ರು. ಆದ್ರೆ ಆರಂಭದಿಂದಲೂ ಬೌಲಿಂಗ್ ನಲ್ಲಿ ಹಿಡಿತ ಸಾಧಿಸಿದ ನೇಪಾಳ ಬೌಲರ್ಸ್ ಭಾರತಕ್ಕೆ ಅಕ್ಷರಶಃ ಕಾಟ ಕೊಟ್ರು.
ಅಭಿ ಆಟ ನಡೆಯಲಿಲ್ಲ.. ಸೂರ್ಯವಂಶಿ ಸಿಡಿಯಲಿಲ್ಲ..!
ಭಾರತದ ಪರ ಈಗಾಗ್ಲೇ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ತಮ್ಮ ಟ್ರೇಡ್ ಮಾರ್ಕ್ ಸೆಟ್ ಮಾಡಿದ್ದಾರೆ. ಇಬ್ರೂ ಕೂಡ ಹೊಡಿಬಡಿ ಆಟಕ್ಕೆ ಹೆಸರಾಗಿದ್ದು ನೇಪಾಳ ವಿರುದ್ಧವೂ ಅಂಥದ್ದೇ ಇನ್ನಿಂಗ್ಸ್ ಬರಬಹುದು ಅನ್ನೋ ನಿರೀಕ್ಷೆ ಇತ್ತು. ಆದ್ರೆ ಅಭಿಷೇಕ್ ಶರ್ಮಾ ಕೇವಲ 9 ರನ್ ಗಳಿಸಿ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. 13 ಎಸೆತಗಳನ್ನು ಎದುರಿಸಿದ ಅಭಿಷೇಕ್, ಒಂದು ಸಿಕ್ಸರ್ ಸಿಡಿಸಿ ಬಿಗ್ ಇನ್ನಿಂಗ್ಸ್ ಭರವಸೆ ಮೂಡಿಸಿದ್ರೂ ಅದನ್ನ ಕನ್ವರ್ಟ್ ಮಾಡೋಕೆ ಆಗ್ಲಿಲ್ಲ. ನಂದನ್ ಯಾದವ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಆ ನಂತ್ರ ನಂಬರ್ 3ನಲ್ಲಿ ಬಂದ ಆಯುಷ್ ಬದೋನಿ ಕೂಡ 2 ರನ್ಗಳಿಗೆ ಸುಸ್ತಾದ್ರು. ಬದೋನಿ 7 ಎಸೆತಗಳನ್ನು ಎದುರಿಸಿ 2 ರನ್ಗಳಿಗೆ ಸ್ಟಂಪ್ ಔಟ್ ಆದರು. ಈ ಮೂಲಕ ಭಾರತ 36 ರನ್ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಮೂರನೇ ವಿಕೆಟ್ಗೆ ಜೊತೆಯಾದ ನಾಯಕ ತಿಲಕ್ ವರ್ಮಾ ಮತ್ತು ವೈಭವ್ ಮೇಲೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಬಿದ್ದಿತು. ಆದರೆ ವೈಭವ್ ಕೂಡ 26 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆದರು. 32 ಎಸೆತಗಳನ್ನು ಎದುರಿಸಿದ ವೈಭವ್, 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಬಿಗ್ ಹಿಟ್ಗೆ ಟ್ರೈ ಮಾಡಿ ವಿಕೆಟ್ ಒಪ್ಪಿಸಿದ್ರು. ಇನ್ನು ತಿಲಕ್ ವರ್ಮಾ ಕೂಡ 1 ರನ್ಗೆ ಔಟ್ ಆಗ್ಬೇಕಿತ್ತು. ಆದ್ರೆ ಕ್ಯಾಚ್ ಡ್ರಾಪ್ನಿಂದ ಜೀವದಾನ ಪಡೆದು ಆ ನಂತ್ರ ಸ್ಲೋವಾಗೇ ಇನ್ನಿಂಗ್ಸ್ ಕಟ್ಟಿ ವಿಕೆಟ್ ಬೀಳದಂತೆ ನೋಡಿಕೊಂಡ್ರು. ಇನ್ನು 4ನೇ ವಿಕೆಟ್ಗೆ ಜೊತೆಯಾದ ಕುಮಾರ್ ಕುಶಾಗ್ರ ಹಾಗೇ ತಿಲಕ್ ವರ್ಮಾ ಭಾರತ ತಂಡಕ್ಕೆ ಚೇತರಿಕೆ ನೀಡಿದ್ರು.
ಹೊಡಿಬಡಿ ಮನಸ್ಥಿತಿಯೇ ಮುಳುವು!
ಭಾರತ ಎ ತಂಡದಲ್ಲಿರುವ ಬಹುತೇಕರು ಟಿ20 ಸ್ಪೆಷಲಿಸ್ಟ್ ಪ್ಲೇಯರ್ಸ್
ಹೊಡಿಬಡಿ ಮೈಂಡ್ ಸೆಟ್ ಬಿಟ್ಟು ತಾಳ್ಮೆಯಿಂದ ಆಡುವುದೇ ಸವಾಲು
ಅಭಿಷೇಕ್ & ವೈಭವ್ ಕೂಡ ಡಿಫೆನ್ಸ್ ಗೇಮ್ ಪ್ರೆಶರ್ ನಿಂದ ಔಟ್
ಪವರ್ ಪ್ಲೇ ಅಂದ್ರೆ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 42 ರನ್ಸ್
ತಂಡದ ಮೊತ್ತ 100 ರನ್ ದಾಟಲು ಬರೋಬ್ಬರಿ 25 ಓವರ್ಸ್ ಬೇಕಾಯ್ತು
ಹೀಗೆ ಆರಂಭದಲ್ಲಿ ಬೇಗ ವಿಕೆಟ್ಸ್ ಕಳ್ಕೊಂಡಿದ್ರಿಂದ ನಂತ್ರ ತುಂಬಾನೇ ಸ್ಲೋವಾಗಿ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರು. ತಿಲಕ್ ಅಂತೂ ಅರ್ಧಶತಕ ಕಂಪ್ಲೀಟ್ ಮಾಡೋಕೆ 77 ಎಸೆತಗಳನ್ನ ಫೇಸ್ ಮಾಡಿದ್ರು, ಅಂದ್ರೆ ಅಲ್ಲೇ ಗೊತ್ತಾಗುತ್ತೆ ಸಿಚುಯೇಷನ್ ಹೇಗಿತ್ತು ಅನ್ನೋದು. ಕುಮಾರ್ ಕುಶಾಗ್ರ ಹಾಗೇ ತಿಲಕ್ ವರ್ಮಾರ ಜೊತೆಯಾಟದಿಂದಲೇ ಭಾರತಕ್ಕೆ ಸ್ವಲ್ಪ ರಿಲೀಫ್ ಸಿಕ್ತು. 30 ಓವರ್ಗಳ ಬಳಿಕ ಸ್ವಲ್ಪ ಬ್ಯಾಟ್ ಬಿಚ್ಚೋಕೆ ಸ್ಟಾರ್ಟ್ ಮಾಡಿದ್ರು.

ನೋಡಿರಿ

