ಹೆನ್ರಿ ಕೆಣಕಿದ ಜೈಸ್ವಾಲ್ ಶೇಪ್ ಔಟ್ – ವೈಟ್ ವಾಶ್ ಗಾಯಕ್ಕೆ 175*ರ ಬರೆ!
NZಗೆ ನರಕ ತೋರಿಸ್ತಾರಾ ಕನ್ನಡಿಗರು?

ಹೆನ್ರಿ ಕೆಣಕಿದ ಜೈಸ್ವಾಲ್ ಶೇಪ್ ಔಟ್ – ವೈಟ್ ವಾಶ್ ಗಾಯಕ್ಕೆ 175*ರ ಬರೆ!NZಗೆ ನರಕ ತೋರಿಸ್ತಾರಾ ಕನ್ನಡಿಗರು?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಕಂಪ್ಲೀಟ್ ಆಗಿದೆ. ಫಸ್ಟ್ ಡೇ ಫಸ್ಟ್ ಇನ್ನಿಂಗ್ಸ್​ ಆರಂಭದಲ್ಲಿ ಬೇಗ ವಿಕೆಟ್ಸ್ ಕಳ್ಕೊಂಡ್ರೂ ನಂತ್ರದಲ್ಲಿ ಚೇತರಿಸಿಕೊಂಡಿದ್ದ ಕಿವೀಸ್ ಭಾರತದ ಬೌಲರ್​ಗಳನ್ನ ಕಾಡಿದ್ರು. ಇದೀಗ ಎರಡನೇ ದಿನದಾಟದಲ್ಲಿ ಆಲೌಟ್ ಆಗಿದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಒಳ್ಳೆ ಓಪನಿಂಗ್ ಕೂಡ ಸಿಕ್ಕಿದೆ. ಆದ್ರೆ ಈ ಮ್ಯಾಚಲ್ಲಿ ಜೈಸ್ವಾಲ್ ಮಾಡಿದ ಎಡವಟ್ಟಿನಿಂದ ಭಾರತಕ್ಕೆ ಮುಖಭಂಗವಾಗಿದೆ.

ಇದನ್ನೂ ಓದಿ : ಗಿಲ್ ಕೈಯಲ್ಲಿ ಸಿರಾಜ್ ಟೆಸ್ಟ್ ಭವಿಷ್ಯ ಸೆಹ್ವಾಗ್ 2.0 ಆಗಲ್ವಂತೆ ಆರ್ಯವೀರ್!

ಗುರುವಾರ ಮೊದಲ ದಿನದಾಟದಲ್ಲಿ 243ಕ್ಕೆ 5 ವಿಕೆಟ್ ಕಳ್ಕೊಂಡಿದ್ದ ಕಿವೀಸ್ ಪರ 113 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ಹಾಗೇ 94 ರನ್ ಗಳಿಸಿ ಅಜೇಯರಾಗಿದ್ದ ಗ್ಲೆನ್ ಫಿಲಿಪ್ಸ್ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ರು. ಇಬ್ಬರ ನಡುವೆ 216 ರನ್​ಗಳ ಜೊತೆಯಾಟ ಬಂದಿದ್ದು ಗ್ಲೆನ್ ಫಿಲಿಪ್ಸ್ 118 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಹೆನ್ರಿ ನಿಕೋಲ್ಸ್ 175 ರನ್​ಗಳನ್ನ ಕಲೆ ಹಾಕಿ ಅಜೇಯರಾಗಿ ಉಳಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಕಿವೀಸ್ ಪಡೆ ಫಸ್ಟ್ ಇನ್ನಿಂಗ್ಸ್​ನಲ್ಲಿ ಫಿಲಿಪ್ಸ್ ಮತ್ತು ನಿಕೋಲ್ಸ್​ರಿಂದಲೇ ಭಾರತವನ್ನ ಕಾಡಿದೆ.

ಇಬ್ಬರಿಂದ 293 ರನ್ಸ್.. 9 ಜನರಿಂದ 55 ರನ್ಸ್.. ಎಕ್ಸ್​ಟ್ರಾ 20 ರನ್ಸ್!

ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 368 ರನ್ ಗಳಿಸಿ ಆಲೌಟ್ ಆಯ್ತು. ಆದ್ರೆ ಬಿಗ್ ಸ್ಕೋರ್​ಗೆ ಕಾರಣನೇ ನಿಕೋಲ್ಸ್ ಮತ್ತು ಫಿಲಿಪ್ಸ್.. ನಿಕೋಲ್ಸ್ 175 ರನ್ಸ್, ಫಿಲಿಪ್ಸ್ 118 ರನ್ಸ್.. ಸೋ ಇವ್ರಿಬ್ರೇ ಸೇರಿ ಒಟ್ಟಾರೆ 293 ರನ್​ಗಳನ್ನ ಕಲೆ ಹಾಕಿದ್ದಾರೆ. ಆದ್ರೆ ಇನ್ನುಳಿದ 9 ಆಟಗಾರರೆಲ್ಲಾ ಒಟ್ಟಾರೆಯಾಗಿ ಕಲ ಹಾಕಿದ್ದೇ ಕೇವಲ 55 ರನ್​ಗಳನ್ನ ಮಾತ್ರ. ಅದೂ ಕೂಡ ಸಿಂಗಲ್ ಡಿಜಿಟ್ ದಾಟಿದ್ದು ರಚಿನ್ ರವೀಂದ್ರ, ನಾಥನ್ ಸ್ಮಿತ್ ಹಾಗೇ ಕೈಲ್ ಜೇಮಿಸನ್.. ಉಳಿದ 6 ಪ್ಲೇಯರ್ಸ್ ಸಿಂಗಲ್ ಡಿಜಿಟ್​​ಗೆ ವಿಕೆಟ್ ಒಪ್ಪಿಸಿದ್ರು. ಇನ್ನು 20 ರನ್ಸ್ ಎಕ್ಸ್​ಟ್ರಾ ಬಂದಿರುವಂಥದ್ದು. ಸೋ ಅಲ್ಲಿಗೆ ಭಾರತಕ್ಕೆ ನಿಕೋಲ್ಡ್ ಮತ್ತು ಫಿಲಿಪ್ಸ್ ಆಟವೇ ದುಬಾರಿಯಾಗಿದ್ದು.. ಇನ್ನು ಭಾರತದ ಪರ ಬೌಲಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಬ್ರಹ್ಮಾಸ್ತ್ರವಾದ್ರು. ಕಿವೀಸ್ ಪಡೆಗೆ ಆರಂಭದಲ್ಲೇ ಆಘಾತ ನೀಡಿದ್ದ ಬುಮ್ರಾ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ಗಳನ್ನ ಬೇಟೆಯಾಡಿದ್ರು. ಆಕಾಶ್ ದೀಪ್ 3 ವಿಕೆಟ್ಸ್ ತೆಗೆದ್ರೆ ಅನ್ಶುಲ್ ಕಾಂಬೋಜ್ 2, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಬೇಟೆಯಾಡಿದ್ರು. ವಾಷಿಂಗ್ಟನ್ ಸುಂದರ್​ಗೆ ಯಾವುದೇ ವಿಕೆಟ್ ಸಿಗಲಿಲ್ಲ. ಹೀಗೆ ಬೌಲಿಂಗ್​ನಲ್ಲಿ ಭಾರತ ಸ್ವಲ್ಪ ಯಾಮಾರಿದ್ರೂ ಬ್ಯಾಟಿಂಗ್​ನಲ್ಲಿ ಒಳ್ಳೆಯ ಸ್ಟಾರ್ಟ್ ಸಿಕ್ಕಿದೆ.

ಜೈಸ್ವಾಲ್ ಒಳ್ಳೆ ಆರಂಭ.. ಕ್ರೀಸ್ ನಲ್ಲಿ ಕನ್ನಡಿಗರ ಗತ್ತು!

ಕಿವೀಸ್ ಆಲೌಟ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೇ ಕೆಎಲ್ ರಾಹುಲ್ ಇನ್ನಿಂಗ್ಸ್ ಶುರು ಮಾಡಿದ್ರು. ಌಂಡ್ ಇಬ್ಬರ ಪಾರ್ಟ್ನರ್​ಶಿಪ್ ಕೂಡ ಚೆನ್ನಾಗೂ ವರ್ಕ್ ಆಯ್ತು. ಆದ್ರೆ 85 ರನ್ಸ್ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ ಮ್ಯಾಟ್ ಹೆನ್ರಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು. ಮತ್ತೊಂದೆಡೆ ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ 52 ರನ್ ಗಳಿಸಿ ಸದ್ಯ ಕ್ರೀಸ್​ನಲ್ಲಿದ್ದಾರೆ. ಹಾಗೇ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ 16 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸೋ ಈಗ ಎರಡೂ ಬದಿಯಲ್ಲೂ ಕನ್ನಡಿಗರೇ ಬ್ಯಾಟಿಂಗ್ ಕಂಟಿನ್ಯೂ ಮಾಡಲಿದ್ದು ಇಬ್ಬರೂ ಕೂಡ ಅದ್ಭುತ ಫಾರ್ಮ್​ನಲ್ಲಿ ಇರೋದ್ರಿಂದ ಇವ್ರಿಬ್ಬರ ಪಾರ್ಟ್ನರ್​ಶಿಪ್ ವರ್ಕ್ ಆದ್ರೆ ನ್ಯೂಜಿಲೆಂಡ್​ಗೆ ನರಕ ತೋರಿಸಬಹುದು. ಸೋ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್​ ಚೆನ್ನಾಗೇ ವರ್ಕ್ ಆದ್ರೂ ಕೂಡ ಸ್ಲೆಡ್ ಮಾಡೋಕೆ ಹೋದ ಜೈಸ್ವಾಲ್ ಗೆ ಬ್ಯಾಕ್ ಫೈರ್ ಆಗಿದೆ.

ಹೆನ್ರಿ ನಿಕೋಲ್ಸ್ ಕೆಣಕಿದ ಜೈಸ್ವಾಲ್ ಗೆ ಕ್ಲೀನ್ ಸ್ವೀಪ್ ಕೌಂಟರ್!

ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಭಾರತೀಯರನ್ನ ಅಕ್ಷರಶಃ ಕಾಡಿದ್ದಂದ್ರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡ್ತಿದ್ದ ಹೆನ್ರಿ ನಿಕೋಲ್ಸ್.. 70ಕ್ಕೆ 5 ವಿಕೆಟ್ ಕಳ್ಕೊಂಡಿದ್ದ ಕಿವೀಸ್ ಪರ ನಿಕೋಲ್ಸ್ ಮತ್ತು ಫಿಲಿಪ್ಸ್ ಕ್ರೀಸ್ ಕಚ್ಚಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡ್ತಿದ್ರು. ಅದ್ರಲ್ಲೂ ನಿಕೋಲ್ಸ್ ಸಾಕಷ್ಟು ಡಿಫೆನ್ಸಿವ್ ಮತ್ತು ನಿಧಾನಗತಿಯಲ್ಲಿ ಆಡ್ತಿದ್ರು. ಈ ವೇಳೆ ನಿಕೋಲ್ಸ್ ರನ್ನ ಡಿಸ್ಟರ್ಬ್ ಮಾಡೋಕೆ ಜೈಸ್ವಾಲ್ ಮುಂದಾಗಿದ್ರು. ಲಾಸ್ಟ್ ಟೈಂ ಶ್ರೀಲಂಕಾದಲ್ಲೂ ಇದೇ ರೀತಿ ಕೆಣಕಿ ವಿಕೆಟ್ ತೆಗೆದಿದ್ರು. ಸೋ ಇಲ್ಲೂ ವರ್ಕ್ ಆಗ್ಬೋದು ಅಂತಾ ನಿಕೋಲ್ಸ್ ಹತ್ತಿರದಲ್ಲೇ ಫೀಲ್ಡಿಂಗ್ ಮಾಡ್ತಿದ್ದ ಜೈಸ್ವಾಲ್ ಅವರ ಕಾನ್ಸಂಟ್ರೇಷನ್ ಹಾಳು ಮಾಡೋಕೆ ಮುಂದಾಗಿದ್ರು. ಈ ವೇಳೆ ಇಬ್ಬರ ನಡುವೆ ವಾಗ್ವಾದವೂ ನಡೆದಿದೆ.

ಕೆಣಕಿದ ಜೈಸ್ವಾಲ್ ತಬ್ಬಿಬ್ಬು!

ಜೈಸ್ವಾಲ್ : ನೀನು ತುಂಬಾ ನಿಧಾನವಾಗಿ ಆಡುತ್ತಿದ್ದೀಯಾ, ಈಗಾಗಲೇ ನಿಮ್ಮ ಅರ್ಧ ತಂಡ ಪೆವಿಲಿಯನ್ ಸೇರಿದೆ.

ಹೆನ್ರಿ ನಿಕೋಲ್ಸ್: ನೀನು ಸುಮ್ಮನೆ ನಿನ್ನ ಫೀಲ್ಡಿಂಗ್ ಕಡೆಗೆ ಮಾತ್ರ ಗಮನ ಕೊಡು.

ಯಶಸ್ವಿ ಜೈಸ್ವಾಲ್: ನಾನೇನಾದರೂ ಇಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ಭಯವಿಲ್ಲದೆ ಆಡುತ್ತಿದ್ದೆ.

ಹೆನ್ರಿ ನಿಕೋಲ್ಸ್: 2024ರಲ್ಲಿ ನಿಮ್ಮ ತವರಿನಲ್ಲಿ ನೀವೆಲ್ಲಾ ಯಾವ ರೀತಿ ‘ಭಯವಿಲ್ಲದ’ ಕ್ರಿಕೆಟ್ ಆಡಿದಿರಿ ಎಂಬುದನ್ನು ನಾವು ಚೆನ್ನಾಗಿ ನೋಡಿದ್ದೇವೆ.

ಹೀಗೆ ನಿಕೋಲ್ಸ್ ತಿರುಗೇಟು ಕೊಡ್ತಾರೆ. 2024ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಝಿಲೆಂಡ್ ತಂಡವು, ಭಾರತವನ್ನು ತವರಿನಲ್ಲೇ 3-0 ಅಂತರದಲ್ಲಿ ವೈಟ್‌ವಾಶ್ ಮಾಡಿ ಐತಿಹಾಸಿಕ ಸಾಧನೆ ಮಾಡಿತ್ತು. ನಿಕೋಲ್ಸ್ 2024ರ ಸೋಲನ್ನು ಜೈಸ್ವಾಲ್‌ಗೆ ನೆನಪಿಸುವ ಮೂಲಕ, ಭಾರತೀಯ ಆಟಗಾರನಿಗೆ ಕೌಂಟರ್ ಕೊಟ್ಟಿದ್ದಾರೆ.  ಹಾಗೇ ಜೈಸ್ವಾಲ್​ರ ಯಾವ ಮಾತುಗಳಿಗೂ ತಲೆಕೆಡಿಸಿಕೊಳ್ಳದೆ ಕೊನೆಗೆ 175 ರನ್ ಗಳಿಸಿ ಅಜೇಯರಾಗಿ ಉಳಿಯೋ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ತಾಳ್ಮೆಯೇ ಅಸ್ತ್ರ ಅನ್ನೋದನ್ನ ಪ್ರೂವ್ ಮಾಡಿದ್ರು. ಹೀಗಾಗಿ ಈ ಟೆಸ್ಟ್ ಮ್ಯಾಚ್ ರೋಚಕವಾಗ್ತಿದ್ದು ಮೂರನೇ ದಿನದಾಟದಲ್ಲಿ ಕೆಎಲ್ ರಾಹುಲ್ ಮತ್ತು ಪಡಿಕ್ಕಲ್ ಹೇಗೆ ಆಡ್ತಾರೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *