RRಗೆ ಜೈಸ್ವಾಲ್ ಗುಡ್ ಬೈ? – ರಿಟೇನ್ ಆಗಿದ್ರೂ ಟ್ರೇಡ್ ಡೀಲ್
ಪರಾಗ್ ಕ್ಯಾಪ್ಟನ್ಸಿ ಬಿರುಕು ತಂದಿದ್ಯಾ?

2027ರ ಐಪಿಎಲ್ ಮಿನಿ ಆಕ್ಷನ್ಗೆ ಆಟಗಾರರ ರಿಲೀಸ್ ಮತ್ತು ರಿಟೇನ್ ಲಿಸ್ಟ್ ಅನೌನ್ಸ್ ಆಗಿ ಫ್ರಾಂಚೈಸಿಗಳ ಆಟಗಾರರ ಖರೀದಿ ಲೆಕ್ಕಾಚಾರದಲ್ಲಿದ್ರೆ ರಾಜಸ್ಥಾನ ರಾಯಲ್ಸ್ನಲ್ಲಿ ಮಾತ್ರ ಮೇಜರ್ ಸರ್ಜರಿ ಸುದ್ದಿ ಹಬ್ಬಿದೆ. ಅದೂ ಕೂಡ ತಂಡದ ಸ್ಟಾರ್ ಪ್ಲೇಯರ್ ಯಶಸ್ವಿ ಜೈಸ್ವಾಲ್ ಆರ್ಆರ್ನಿಂದ ಹೊರಬರ್ತಾರೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿದೆ.
ಇದನ್ನೂ ಓದಿ : RCB ಕೈ ಬಿಟ್ಟಿದ್ದಕ್ಕೆ ಬೆಥಲ್ ಬೇಜಾರು – BIG ಡೀಲ್, ಶಾರುಖ್ KKR ಸೇಲ್
20ನೇ ಆವೃತ್ತಿ ಐಪಿಎಲ್ಗೂ ಮುನ್ನ ರಾಜಸ್ಥಾನದ ತಂಡದ ಓಪನರ್ ಯಶಸ್ವಿ ಜೈಸ್ವಾಲ್ ಅವರ ಪ್ರಸೆನ್ಸ್ ಪ್ರಶ್ನಾರ್ಥಕವಾಗಿದೆ. ರಿಟೆನ್ಷನ್ ಪಟ್ಟಿಯಲ್ಲಿ ಜೈಸ್ವಾಲ್ ಹೆಸರು ಉಳಿಸಿಕೊಂಡಿದ್ದರೂ ಅವರನ್ನು ಬೇರೆ ತಂಡಕ್ಕೆ ಟ್ರೇಡ್ ಮಾಡಲು ರಾಜಸ್ಥಾನ್ ರಾಯಲ್ಸ್ ಮಾತುಕತೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಸದ್ಯಕ್ಕೆ ಆರ್ಆರ್ನ ಒಪ್ಪಂದದ ಪ್ರಕಾರ ತಂಡದಲ್ಲಿಯೇ ಇರುತ್ತಾರೆ. ಆದ್ರೆ ಫ್ರಾಂಚೈಸಿಗಳು ಡಿಸೆಂಬರ್ 9ರ ಡೆಡ್ಲೈನ್ ಒಳಗೆ ಆಟಗಾರರ ಒಪ್ಪಿಗೆ ಮತ್ತು ಬಿಸಿಸಿಐ ಅನುಮೋದನೆ ಪಡೆದು ಟ್ರೇಡ್ ವಿಂಡೋ ಮಾಡಿಕೊಳ್ಳಬಹುದು. ಅಂದ್ರೆ ಆಟಗಾರರ ವಿನಿಮಯ ಅಥವಾ ಕ್ಯಾಶ್ ಡೀಲ್ ಮಾಡಿಕೊಳ್ಳೋಕೆ ಅವಕಾಶ ಇದೆ. ಹೀಗಾಗಿ ಆರ್ಆರ್ನಿಂದ ಜೈಸ್ವಾಲ್ ಹೊರಬರೋ ಎಲ್ಲಾ ಚಾನ್ಸಸ್ ಇದೆ.
ಕ್ಯಾಪ್ಟನ್ಸಿ ವಿಚಾರದಲ್ಲಿ ಸಿಟ್ಟು.. ರಾಜಸ್ಥಾನ ಬಿಡಲು ಜೈಸ್ವಾಲ್ ನಿರ್ಧಾರ!
ಅಷ್ಟಕ್ಕೂ ಯಶಸ್ವಿ ಜೈಸ್ವಾಲ್ ತಂಡದಿಂದ ಹೊರಬರೋದ್ರ ಹಿಂದೆ ಫ್ರಾಂಚೈಸಿಗಿಂತ ಜಾಸ್ತಿ ಜೈಸ್ವಾಲ್ಗೇ ಜಾಸ್ತಿ ಇಂಟ್ರೆಸ್ಟ್ ಇದ್ದಂಗಿದೆ. ಜೈಸ್ವಾಲ್ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ರು. ಆದ್ರೆ ಸಂಜು ಸ್ಯಾಮ್ಸನ್ ಹೊರ ಬಂದ್ಮೇಲೆ ರಿಯಾನ್ ಪರಾಗ್ ಕ್ಯಾಪ್ಟನ್ ಆಗಿದ್ದಾರೆ. ಹಾಗೇ ಈ ವರ್ಷವೂ ಪರಾಗ್ ಕ್ಯಾಪ್ಟನ್ಸಿಯಲ್ಲಿ ಯಾವುದೇ ಬದಲಾವಣೆ ಇರಲ್ಲ ಅಂತಾ ಮಾಲೀಕರು ಹೇಳಿರೋದ್ರಿಂದ ಪಿಂಕ್ ಆರ್ಮಿಯಿಂದ ಹೊರ ಬರೋ ನಿರ್ಧಾರ ಮಾಡಿದ್ದಾರೆ. ಈಗಾಗ್ಲೇ ರಿಲಿಸ್ ಮತ್ತು ರಿಟೇನ್ ಲಿಸ್ಟ್ ಅನೌನ್ಸ್ ಆಗೋ ಮೊದ್ಲೇ ಜೈಸ್ವಾಲ್ ಟ್ರೇಡ್ ಡೀಲ್ಗೆ ಸಾಕಷ್ಟು ಟ್ರೈ ಮಾಡಿದ್ರು. ಆದ್ರೆ ಅದು ಫೈನಲ್ ಆಗಿರಲಿಲ್ಲ. ಕಳೆದ ಎರಡು ತಿಂಗಳಿನಿಂದ ಹಲವು ಫ್ರಾಂಚೈಸಿಗಳ ಜೊತೆ ಟ್ರೇಡ್ ಮಾತುಕತೆ ನಡೆಸಿದೆ. ಆದರೆ ಈವರೆಗೆ ಯಾವುದೇ ಒಪ್ಪಂದ ಅಂತಿಮಗೊಂಡಿಲ್ಲ. ಜೈಸ್ವಾಲ್ ಅವರನ್ನು ಪಡೆಯೋಕೆ ಲಕ್ನೋ ಸೂಪರ್ ಜೈಂಟ್ಸ್ ಆಸಕ್ತಿ ತೋರಿಸಿತ್ತು. ರಿಟೆನ್ಷನ್ ಡೆಡ್ಲೈನ್ವರೆಗೂ ಮಾತುಕತೆ ನಡೆದಿದ್ದರೂ, ರಾಜಸ್ಥಾನ್ ಕೇಳಿದ್ದ ಇಬ್ಬರು ಆಟಗಾರರನ್ನು ನೀಡಲು ಲಕ್ನೋ ಒಪ್ಪಲಿಲ್ಲ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಜೈಸ್ವಾಲ್ ಮೇಲೆ ಕಣ್ಣಿಟ್ಟಿತ್ತು. ಕೆಎಲ್ ರಾಹುಲ್ ಜೊತೆ ಇನ್ನೊಬ್ಬ ಅನುಭವಿ ಆರಂಭಿಕ ಆಟಗಾರನನ್ನು ಕಣಕ್ಕಿಳಿಸುವ ಉದ್ದೇಶದಿಂದ ಡೆಲ್ಲಿ ಆಸಕ್ತಿ ತೋರಿಸಿತ್ತು ಎನ್ನಲಾಗಿದೆ. ಆದರೆ ಡೆಲ್ಲಿ ನೀಡಿದ ಆಟಗಾರರ ಆಯ್ಕೆ ರಾಜಸ್ಥಾನ್ಗೆ ಇಷ್ಟವಿಲ್ಲದ ಕಾರಣ ಈ ಡೀಲ್ ಅಲ್ಲಿಗೇ ನಿಂತಿತ್ತು.
ಇನ್ನು ಕಳೆದ ಆವೃತ್ತಿಯಲ್ಲಿ ರಿಯಾನ್ ಪರಾಗ್ ಅವರನ್ನು ನಾಯಕನನ್ನಾಗಿ ನೇಮಿಸಿದ ಬಳಿಕ ತಂಡದಲ್ಲಿ ಬಿರುಕು ಮೂಡಿವೆ. ಪರಾಗ್ ನಾಯಕತ್ವದಲ್ಲಿ ರಾಜಸ್ಥಾನ್ ಕಳೆದ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಹೊಸ ಮ್ಯಾನೇಜ್ಮೆಂಟ್ ಕೂಡ ನಾಯಕತ್ವದಲ್ಲಿ ಬದಲಾವಣೆಗೆ ಆಸಕ್ತಿ ತೋರಿಸಿಲ್ಲ. ಇದೇ ಬೆಳವಣಿಗೆಗಳ ನಡುವೆ ಜೈಸ್ವಾಲ್ ತಂಡ ತೊರೆಯುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಐಪಿಎಲ್ನಲ್ಲಿ ಜೈಸ್ವಾಲ್ ಇದುವರೆಗೆ 83 ಪಂದ್ಯಗಳಿಂದ 2,593 ರನ್ ಗಳಿಸಿದ್ದಾರೆ. 33.67ರ ಸರಾಸರಿ ಮತ್ತು 152.79ರ ಸ್ಟ್ರೈಕ್ರೇಟ್ ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಅವರ ಹೆಸರಿನಲ್ಲಿ ಎರಡು ಶತಕಗಳು ಮತ್ತು 18 ಅರ್ಧಶತಕಗಳಿವೆ. ಆದ್ರೆ ಈಗ ರಾಜಸ್ಥಾನದಲ್ಲಿ ಅವ್ರ ಇರುವಿಕೆ ಬಗ್ಗೆ ಡವಲಪ್ಮೆಂಟ್ಸ್ ಆಗ್ತಾ ಇದ್ದು 2027ರ ಐಪಿಎಲ್ನಲ್ಲಿ ಜೈಸ್ವಾಲ್ ಯಾವ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

