ಒಂದೇ ದಿನ ಅಪ್ಪ ಮಗನ ಸಿನಿಮಾ ರಿಲೀಸ್ – ಬಾಕ್ಸ್ಆಫೀಸ್‌ನಲ್ಲಿ ಮುಮ್ಮುಟಿ, ದುಲ್ಕರ್ ಮುಖಾಮುಖಿ

ಒಂದೇ ದಿನ ಅಪ್ಪ ಮಗನ ಸಿನಿಮಾ ರಿಲೀಸ್ – ಬಾಕ್ಸ್ಆಫೀಸ್‌ನಲ್ಲಿ ಮುಮ್ಮುಟಿ, ದುಲ್ಕರ್ ಮುಖಾಮುಖಿ

ಮಲಯಾಳಂ ಸಿನಿಮಾ ಸೂಪರ್ ಸ್ಟಾರ್ ಅಪ್ಪ.. ತಂದೆಗೆ ತಕ್ಕ ಮಗ ದುಲ್ಕರ್ ಸಲ್ಮಾನ್.. ಈ ಇಬ್ಬರು ನಟರ ಸಿನಿಮಾ ಒಂದೇ ದಿನ ತೆರೆಕಂಡಿದೆ. ಮಮ್ಮುಟ್ಟಿ ಮತ್ತು ದುಲ್ಕರ್ ಸಿನಿಮಾ ಒಂದೇ ದಿನ ತೆರೆಗೆ ಅಪ್ಪಳಿಸಿದ್ದು, ಅಪ್ಪ ಮಗನ ಸಿನಿಮಾದಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ:ಕಿರುತೆರೆಯಲ್ಲಿ ಗೌರಿ ಪುತ್ರ ಮಾಸ್ ಎಂಟ್ರಿ – ಹೆತ್ತವರ ಬಳಿ ಅಮ್ಮನ ಸೇರಿಸಲು ಶ್ರವಣಸೇವೆ

ಕಾಲಿವುಡ್ ಸ್ಟಾರ್ ಧನುಷ್ ಮತ್ತು ಮಾಲಿವುಡ್ ಸ್ಟಾರ್ ಮಮ್ಮುಟಿ ನಟನೆಯ ಓಂ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ನಾಯಕನಾಗಿ, ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸಿದ್ದಾರೆ. ಮಲಯಾಳಂ ಸ್ಟಾರ್ ಹೀರೋ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಕಥೆ ಶ್ರೀಗಂಧದ ಕಳ್ಳಸಾಗಣೆಯ ಸುತ್ತ ಸಾಗುತ್ತದೆ. ಆಂಧ್ರಪ್ರದೇಶದಿಂದ ಶ್ರೀಗಂಧದ ಮರಗಳನ್ನು ಕಡಿದು ಇತರ ರಾಜ್ಯಗಳಿಗೆ ಕಳ್ಳಸಾಗಣೆ ಮಾಡುತ್ತಿರುವ ಗ್ಯಾಂಗ್ ಅನ್ನು ಹುಡುಕಿ ನಿರ್ಮೂಲನೆ ಮಾಡಲು ನಾಯಕ ಗೂಢಚಾರನಾಗಿ ಗ್ಯಾಂಗ್‌ಗೆ ಪ್ರವೇಶಿಸುತ್ತಾನೆ. ಈ ಸಿನಿಮಾದಲ್ಲಿ ಮಮ್ಮುಟಿ ರೋಲ್ ಅಭಿಮಾನಿಗಳ ಮನಗೆದ್ದಿದೆ. ಇತ್ತ ಅಪ್ಪ ತಮಿಳು ಸಿನಿಮಾದಲ್ಲಿ ಮಿಂಚಿದರೆ ಅತ್ತ ತೆಲುಗು ಸಿನಿಮಾದಲ್ಲಿ ಮಗ ಕೂಡಾ ಮಿಂಚಿದ್ದಾರೆ.

ತೆಲುಗು ಸಿನಿಮಾ ಆಕಾಸಂಲೋ ಒಕ ತಾರ  ರಿಲೀಸ್ ಆಗಿದೆ. ಟಾಲಿವುಡ್ ನಲ್ಲಿ ಮಾಲಿವುಡ್ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಭರ್ಜರಿ ಸೌಂಡ್ ಮಾಡಿದ್ದಾರೆ. ಮೊದಲ ದಿನವೇ ಚಿತ್ರ ಉತ್ತಮ ರೆಸ್ಪಾನ್ಸ್ ಕಂಡಿದೆ. ಪತ್ನಿಯ ಕನಸಿಗೆ ತನ್ನದೇ ರೀತಿಯಲ್ಲಿಯೇ ಸಾಥ್ ಕೊಡುವ ಗಂಡನ ಕಥೆ ಇಲ್ಲಿದೆ. ಈ ಕನಸಿಗೆ ಯಾರೂ ಅಡ್ಡಿ ಬರದಂತೆ ನೋಡಿಕೊಳ್ಳುವ ಗಂಡನ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ಅದ್ಭುತವಾಗಿಯೇ ನಟಿಸಿದ್ದಾರೆ. ನಟಿ ಸಾತ್ವಿಕಾ ವೀರವಲ್ಲಿ ದುಲ್ಕರ್‌ ಸಲ್ಮಾನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

Sulekha

Leave a Reply

Your email address will not be published. Required fields are marked *