RCB ಕೈ ಬಿಟ್ಟಿದ್ದಕ್ಕೆ ಬೆಥಲ್ ಬೇಜಾರು – BIG ಡೀಲ್, ಶಾರುಖ್ KKR ಸೇಲ್
ಟೀಂ IND ಪ್ಲೇಯರ್ಸ್ ಸ್ಯಾಲರಿ ಕಟ್

ಐಸಿಸಿ ಟೀಂ ಇಂಡಿಯಾ ಆಟಗಾರರ ಸಂಬಳಕ್ಕೆ ಕತ್ತರಿ ಹಾಕಿದೆ. ನ್ಯೂಜಿಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಓವರ್ ದರದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ತಂಡ ಏಳು ಓವರ್ಗಳನ್ನು ಕಡಿಮೆ ಮಾಡಿದ್ದರಿಂದ ಒಟ್ಟು ಶೇ. 35ರಷ್ಟು ದಂಡ ವಿಧಿಸಲಾಗಿದೆ. ಶ್ರೇಯಸ್ ಅಯ್ಯರ್ ಈ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ.
2027ರ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಬೇಕು ಎಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ. ದೊಡ್ಡ ಟೂರ್ನಿಗಳಲ್ಲಿ ಅನುಭವ ಹೊಂದಿರುವ ಆಟಗಾರರ ಅಗತ್ಯವಿದೆ. ಈ ಇಬ್ಬರು ಆಟಗಾರರ ಅನುಭವ ಮತ್ತು ಪ್ರದರ್ಶನ ಭಾರತ ತಂಡಕ್ಕೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ ವಿಶ್ವಕಪ್ ವೇಳೆಗೆ ಅವರ ಫಾರ್ಮ್ ಮತ್ತು ಫಿಟ್ನೆಸ್ ಕೂಡ ಪ್ರಮುಖವಾಗಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ವೇಗಿ ಅರ್ಷದೀಪ್ ಸಿಂಗ್ ಐಸಿಸಿ ಏಕದಿನ ಬೌಲರ್ಗಳ ಶ್ರೇಯಾಂಕದಲ್ಲಿ ದೊಡ್ಡ ಪ್ರಗತಿ ಸಾಧಿಸಿದ್ದಾರೆ. ಅವರು 12 ಸ್ಥಾನ ಮೇಲೇರಿ ಜಂಟಿ 19ನೇ ಸ್ಥಾನ ತಲುಪಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತೋರಿದ ಪ್ರದರ್ಶನ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ. ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಇದು ಮತ್ತೊಂದು ಸಂತಸದ ಸುದ್ದಿಯಾಗಿದೆ.
ಆರ್ಸಿಬಿಯಿಂದ ಬಿಡುಗಡೆಯಾದ ಜೇಕಬ್ ಬೆಥೆಲ್ ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗೆ ಹೃದಯಸ್ಪರ್ಶಿ ವಿದಾಯದ ಸಂದೇಶವನ್ನು ಹಂಚಿಕೊಂಡಿದ್ದಾರೆ. ನನ್ನ ಮೊದಲ ಐಪಿಎಲ್ ಅನುಭವವನ್ನು ಪಡೆಯಲು ಇದಕ್ಕಿಂತ ಉತ್ತಮವಾದ ಫ್ರಾಂಚೈಸಿಯನ್ನು ನಾನು ಬಯಸಲು ಸಾಧ್ಯವಿರಲಿಲ್ಲ. ಎಲ್ಲದ್ದಕಿಂತ ಮುಖ್ಯವಾಗಿ, ಎರಡು ಟ್ರೋಫಿ ಗೆದ್ದ ಆವೃತ್ತಿಗಳ ಭಾಗವಾಗಿದ್ದು ನನಗೆ ತುಂಬಾ ವಿಶೇಷವಾಗಿದೆ. ಆರ್ಸಿಬಿ ಜೆರ್ಸಿಯಲ್ಲಿ ಇದು ನನ್ನ ಅಂತ್ಯವಲ್ಲ, ಆದಷ್ಟು ಬೇಗ ಮತ್ತೆ ಸಿಗೋಣ ಎಂಬ ಭರವಸೆಯಿದೆ ಎಂದು ಜೇಕಬ್ ಬೆಥೆಲ್ ಪೋಸ್ಟ್ ಹಾಕಿದ್ದಾರೆ.
ಸಿಎಸ್ಕೆ ತಂಡದಲ್ಲಿ ಮೆಂಟರ್ ಆಗಿ ಮುಂದುವರಿಯಲಿರುವ ಎಂ.ಎಸ್. ಧೋನಿಗೆ ಹೊಸ ಜವಾಬ್ದಾರಿ ಸುಲಭವಾಗುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ. ಮೈದಾನದಲ್ಲಿದ್ದು ನಿರ್ಧಾರ ತೆಗೆದುಕೊಳ್ಳುತ್ತಿದ್ದ ಧೋನಿ, ಇನ್ನು ಮುಂದೆ ಹೊರಗಿನಿಂದ ಆಟಗಾರರಿಗೆ ಮಾರ್ಗದರ್ಶನ ನೀಡಬೇಕಾಗುತ್ತದೆ. ತಂಡ ಸಂಕಷ್ಟಕ್ಕೆ ಸಿಲುಕಿದಾಗ ನೇರವಾಗಿ ಮಧ್ಯಪ್ರವೇಶಿಸಲು ಸಾಧ್ಯವಾಗದಿರುವುದು ಅವರಿಗೆ ಸವಾಲಾಗಬಹುದು ಎಂದು ಹೇಳಿದ್ದಾರೆ.
ಐಪಿಎಲ್ನ ಜನಪ್ರಿಯ ತಂಡಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕತ್ವದಲ್ಲಿ ದೊಡ್ಡ ಬದಲಾವಣೆಯಾಗುವ ಸೂಚನೆ ಸಿಕ್ಕಿದೆ. ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪತಿ ಹಾಗೂ ಕೆಕೆಆರ್ ತಂಡದ ಸಹ-ಮಾಲೀಕ ಜಯ್ ಮೆಹ್ತಾ ಅವರು ತಂಡದಲ್ಲಿರುವ ತಮ್ಮ ಪಾಲಿನ ಒಂದು ಭಾಗವನ್ನ ಅಮೆರಿಕದ ಕಂಪನಿಯೊಂದಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಒಪ್ಪಂದವು ಬರೋಬ್ಬರಿ ₹3,700 ಕೋಟಿಗೂ ಹೆಚ್ಚು ಮೊತ್ತಕ್ಕೆ ನಡೆಯಬಹುದು ಎನ್ನಲಾಗಿದೆ.
2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿ ಇಂದಿನಿಂದ ಕತಾರ್ನ ದೋಹಾದಲ್ಲಿ ಆರಂಭವಾಗಲಿದೆ. ಭಾರತ ಎ, ಪಾಕಿಸ್ತಾನ ಎ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ನವೆಂಬರ್ 19ರಿಂದ 29ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 15 ಪಂದ್ಯಗಳು ನಡೆಯಲಿವೆ. ಭಾರತ ಎ ತಂಡಕ್ಕೆ ತಿಲಕ್ ವರ್ಮಾ ನಾಯಕತ್ವ ವಹಿಸಿಕೊಂಡಿದ್ದಾರೆ. ಯುವ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಮಿಜೋರಾಂ ವಿರುದ್ಧ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಕರ್ನಾಟಕದ ಬೌಲರ್ ಮನ್ವಂತ್ ಕುಮಾರ್ ಐದು ವಿಕೆಟ್ ಪಡೆದು ಮಿಂಚಿದ್ದಾರೆ. ಎದುರಾಳಿ ತಂಡದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕಿದ ಕರ್ನಾಟಕದ ಆಟಗಾರರು ನಂತರ ಸುಲಭವಾಗಿ ಗುರಿ ತಲುಪಿದರು. ದೇಶೀಯ ಟಿ20 ಕ್ರಿಕೆಟ್ನಲ್ಲಿ ಕರ್ನಾಟಕದ ಈ ಪ್ರದರ್ಶನ ಅಭಿಮಾನಿಗಳಿಗೆ ಖುಷಿ ನೀಡಿದೆ.
ಭಾರತ ಮಹಿಳಾ ತಂಡದಿಂದ ಹೊರಗುಳಿದಿದ್ದ ಶ್ರೇಯಾಂಕಾ ಪಾಟೀಲ್, ಸೀನಿಯರ್ ಮಹಿಳಾ ಟಿ20 ಟ್ರೋಫಿಯಲ್ಲಿ ಅಬ್ಬರಿಸಿದ್ದಾರೆ. ದೆಹಲಿ ವಿರುದ್ಧ ಕೇವಲ 29 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿ ಆಲ್ರೌಂಡ್ ಪ್ರದರ್ಶನ ನೀಡಿದರು. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮೊದಲ ಅರ್ಧಶತಕ ದಾಖಲಿಸಿದ ಅವರು, ಭಾರತ ತಂಡಕ್ಕೆ ಮರಳುವ ತಮ್ಮ ಇಂಗಿತವನ್ನು ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 97 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಬೆನ್ ಡಕೆಟ್ 133 ರನ್ಗಳ ಸ್ಫೋಟಕ ಶತಕ ಸಿಡಿಸಿದರೆ, ವಿಲ್ ಜ್ಯಾಕ್ಸ್ 59 ರನ್ ಗಳಿಸಿದರು. ಇಂಗ್ಲೆಂಡ್ 328 ರನ್ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 231 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ನೋಡಿರಿ

