ಸಿರಾಜ್ ಮುಗಿಸಲು ಗಂಭೀರ್ ಪಣ- ಕೊಹ್ಲಿ ಶಿಷ್ಯನೆಂದು ಬೆಂಚ್ ನಲ್ಲೇ ಬರೆ?
ಕೋಚ್ ಕೈಗೊಂಬೆಯಾದ್ರಾ ಗಿಲ್?

ಸಿರಾಜ್ ಮುಗಿಸಲು ಗಂಭೀರ್ ಪಣ- ಕೊಹ್ಲಿ ಶಿಷ್ಯನೆಂದು ಬೆಂಚ್ ನಲ್ಲೇ ಬರೆ?ಕೋಚ್ ಕೈಗೊಂಬೆಯಾದ್ರಾ ಗಿಲ್?

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿ ಶುರುವಾಗಿದ್ದು ಆಲ್ರೆಡಿ ಮೊದಲ ದಿನದಾಟವೂ ಕಂಪ್ಲೀಟ್ ಆಗಿದೆ. ಆರಂಭದಲ್ಲಿ ಟೀಂ ಇಂಡಿಯಾಗೆ ಬ್ರೇಕ್ ಥ್ರ್ಯೂ ಸಿಕ್ರೂ ಕೂಡ ಡೇ ಎಂಡ್​ನಲ್ಲಿ ಕಿವೀಸ್ ಪ್ಲೇಯರ್ಸ್ ಡಾಮಿನೇಟ್ ಮಾಡಿದ್ದಾರೆ. ಆದ್ರೆ ಇಲ್ಲಿ ಭಾರತದ ಪ್ರದರ್ಶನಕ್ಕಿಂತ ಪ್ಲೇಯಿಂಗ್ 11 ಬಗ್ಗೆಯೇ ಜಾಸ್ತಿ ಚರ್ಚೆಯಾಗ್ತಿದೆ. ತಲೆ ಇಲ್ಲದ ಕೋಚ್, ಧಮ್ ಇಲ್ಲದ ಕ್ಯಾಪ್ಟನ್ ಬಗ್ಗೆ ಆಕ್ರೋಶ ಭುಗಿಲೆದ್ದಿದೆ.

ಇದನ್ನೂ ಓದಿ : HEADನೇ ಕಳ್ಕೊಂಡ ಹೈದ್ರಾಬಾದ್ – ಸೂರ್ಯವಂಶಿ ಇದ್ರೂ RRಗೆ ತಲೆಬಿಸಿ

ವೆಲ್ಲಿಂಗ್ಟನ್‌ನಲ್ಲಿ ಆರಂಭವಾದ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತು. ಹೀಗಾಗಿ ಕಿವೀಸ್ ಪಡೆ ಫಸ್ಟ್ ಬ್ಯಾಟಿಂಗ್​ ಶುರುಮಾಡಿದ್ರು. ಟಾಮ್ ಲಾಥಮ್ ಹಾಗೇ ಡೆವೊನ್ ಕಾನ್ವೆ ಇನ್ನಿಂಗ್ಸ್ ಸ್ಟಾರ್ಟ್ ಮಾಡಿದ್ದು ಫಸ್ಟ್ ಓವರ್​ನಲ್ಲೇ ಜಸ್ಪ್ರೀತ್ ಬುಮ್ರಾ ಲಾಥಮ್​ರನ್ನ ಡಕ್ ಔಟ್ ಮಾಡಿದ್ರು. ಕಾನ್ವೆ ಕೂಡ 4 ರನ್​ಗಳಿಗೆ ಪೆವಿಲಿಯನ್ ಸೇರಿದ್ರೆ ರಚಿನ್ ರವೀಂದ್ರ 15, ಡೇರಿಲ್ ಮಿಚೆಲ್ 1, ಟಾಮ್ ಬ್ಲಂಡೆಲ್ 5 ರನ್​ಗಳಿಗೆ ಸುಸ್ತಾದ್ರು. 70 ರನ್ಸ್ ಆಗುವಷ್ಟ್ರಲ್ಲೇ ಕಿವೀಸ್ 5 ವಿಕೆಟ್ ಕಳ್ಕೊಂಡಿತ್ತು. ಆದ್ರೆ 3ನೇ ಕ್ರಮಾಂಕದಲ್ಲಿದ್ದ ಹೆನ್ರಿ ನಿಕೋಲ್ಸ್ 7ನೇ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್ ಭಾರತೀಯ ಬೌಲರ್​ಗಳ ಬೆವರಿಳಿಸಿದ್ರು. ಇಬ್ಬರೂ ಜೊತೆಗೂಡಿ 6ನೇ ವಿಕೆಟ್ ನಷ್ಟಕ್ಕೆ 173 ರನ್​ಗಳ ಜೊತೆಯಾಟವಾಡಿದ್ದಾರೆ. ಹೆನ್ರಿ 113 ರನ್ ಗಳಿಸಿ ಕ್ರೀಸ್​ನಲ್ಲಿದ್ರೆ ಫಿಲಿಪ್ಸ್ 94 ರನ್ಸ್ ಕಲೆ ಹಾಕಿ ಅಜೇಯರಾಗಿ ಉಳಿದಿದ್ದಾರೆ. ಸೋ ಅಲ್ಲಿಗೆ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 243 ರನ್​ಗಳನ್ನ ನ್ಯೂಜಿಲೆಂಡ್ ಕಲೆ ಹಾಕಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ ಎಕ್ಸ್​ಟ್ರಾರ್ಡಿನರಿ ಬೌಲಿಂಗ್ ಪ್ರದರ್ಶನ ನೀಡಿದ್ದು 3 ವಿಕೆಟ್ಸ್ ಬೇಟೆಯಾಡಿದ್ರು. ಹಾಗೇ ಅನ್ಶುಲ್ ಕಾಂಬೋಜ್, ಆಕಾಶ್ ದೀಪ್ ತಲಾ ಒಂದೊಂದು ವಿಕೆಟ್ಸ್ ತೆಗೆದ್ರು. ಸೋ ಫಸ್ಟ್ ಡೇನಲ್ಲಿ ಭಾರತ ಆರಂಭದಲ್ಲಿ ಹಿಡಿತ ಸಾಧಿಸಿದ್ರೂ ಕೊನೆಯಲ್ಲಿ ಕಿವೀಸ್ ಕಂ ಬ್ಯಾಕ್ ಮಾಡಿದೆ. ಸೋ 2ನೇ ದಿನದಾಟ ಇಂಟ್ರೆಸ್ಟಿಂಗ್ ಆಗಿರಲಿದೆ. ಆದ್ರೆ ಇಲ್ಲಿ ಭಾರತದ ಪ್ರದರ್ಶನಕ್ಕಿಂತ ಪ್ಲೇಯಿಂಗ್ 11ದೇ ದೊಡ್ಡ ಕಾಂಟ್ರವರ್ಸಿಯಾಗಿದೆ.

ಅನುಭವಿ ಸಿರಾಜ್ & ಜಡೇಜಾರನ್ನೇ ಕೈಬಿಟ್ಟ ಗಂಭೀರ್!

ಭಾರತದ ಪ್ಲೇಯಿಂಗ್ 11 ಅನೌನ್ಸ್ ಆದಾಗ ತುಂಬಾ ಜನ್ರಿಗೆ ಶಾಕಿಂಗ್ ಎನ್ನುವಂತೆಯೇ ಇತ್ತು. ಜಸ್ಪ್ರೀತ್ ಬುಮ್ರಾ ಜೊತೆಗೆ ಆಕಾಶ್ ದೀಪ್, ಅನ್ಶುಲ್ ಕಂಬೋಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ನೀಡಲಾಗಿತ್ತು. ಌಂಡ್ ಎಲ್ಲಾ ವೇಗಿಗಳು ಉತ್ತಮ ಫಾರ್ಮ್‌ನಲ್ಲಿರೋದ್ರಿಂದ ಸಿರಾಜ್ ಅವರನ್ನು ಹೊರಗಿಡುವುದು ಟಫ್ ಡಿಸಿಷನ್ ಆಗಿತ್ತು ಅಂತಾ ಟಾಸ್ ಟೈಮಲ್ಲಿ ಶುಭ್​ಮನ್ ಗಿಲ್ ಹೇಳಿದ್ರು. ಮತ್ತೊಂದೆಡೆ ಟೆಸ್ಟ್ ಆಲ್‌ರೌಂಡರ್‌ಗಳ ರ್ಯಾಂಕಿಂಗ್​ನಲ್ಲಿ ಸೆಕೆಂಡ್ ಪ್ಲೇಸ್​ನಲ್ಲಿರೋ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿದೆ. ಕಿವೀಸ್ ಟಾಪ್ ಆರ್ಡರ್​ನಲ್ಲಿ ನಾಲ್ವರು ಲೆಫ್ಟ್ ಹ್ಯಾಂಡ್ ಬ್ಯಾಟರ್​​ಗಳು ಇರೋದ್ರಿಂದ ಸುಂದರ್​ ಬೆಟರ್ ಆಪ್ಶನ್ ಅನ್ನೋದು ಇವ್ರ ಲೆಕ್ಕಾಚಾರ. ಆದ್ರೆ ಸಿರಾಜ್ ವಿಚಾರದಲ್ಲಿ ಮಾತ್ರ ಅವ್ರ ಕೆರಿಯರ್ ಮುಗಿಸಲೇಬೇಕು ಅಂಥಾ ಪಣ ತೊಟ್ಟಂತಿದೆ.

ಸಿರಾಜ್ ವಿಚಾರದಲ್ಲಿ ಗಂಭೀರ್ ಬೇಕಾಬಿಟ್ಟಿ ನಿರ್ಧಾರ!

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಡಿಕ್ಟೇಟರ್ ರೀತಿ ಡಿಸಿಷನ್ಸ್ ತಗೊಳ್ತಿದ್ದಾರೆ ಅನ್ನೋ ಆರೋಪಗಳಿತ್ತು. ಕ್ಯಾಪ್ಟನ್​ಗಳು ಜಸ್ಟ್ ಮೈದಾನಕ್ಕಷ್ಟೇ ಸೀಮಿತವಾಗಿದ್ದಾರೆ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಯಾಕಂದ್ರೆ ಮೊದ್ಲೆಲ್ಲಾ ತಂಡದ ಆಯ್ಕೆ ಜೊತೆಗೆ ಪ್ಲೇಯಿಂಗ್ 11 ಅಂದಾಗ ಕೋಚ್ ಮತ್ತು ಕ್ಯಾಪ್ಟನ್ ಇಬ್ಬರೂ ಸೇರಿಯೇ ಫೈನಲ್ ಮಾಡ್ತಿದ್ರು. ಡ್ರಾವಿಡ್, ರವಿಶಾಸ್ತ್ರಿ, ಕೊಹ್ಲಿ, ರೋಹಿತ್ ಇದೇ ಕಾರಣಕ್ಕೆ ಇವ್ರೆಲ್ಲರ ನಡುವೆ ಕಮ್ಯುನಿಕೇಷನ್ ಕೂಡ ಚೆನ್ನಾಗಿ ಇದ್ದದ್ದು. ಆದ್ರೆ ಗಂಭೀರ್ ಕೋಚ್ ಆದ್ಮೇಲೆ ಎಲ್ಲವೂ ಅವ್ರ ಅಣತಿಯಂತೇ ಆಗ್ಬೇಕು. ಹಾಗಂತ ಫೇರ್ ಡಿಸಿಷನ್ಸ್ ತಗೊಳ್ತಿದ್ದಾರಾ ಅಂದ್ರೆ ಅದೂ ಇಲ್ಲ. ಈಗ ಸಿರಾಜ್ ವಿಚಾರದಲ್ಲಿ ಅದೇ ಆಗ್ತಿದೆ. ತಂಡ ಗೆಲ್ಬೇಕು ಅಂದರೆ ಇಂಥವ್ರು ಇರಲೇಬೇಕು ಅಂತಾ ಹಠ ಹಿಡೀತಿದ್ದ ಧೋನಿ, ಕೊಹ್ಲಿ, ರೋಹಿತ್ ಅವ್ರಿಗೆ ಅವಕಾಶ ಸಿಗೋವರೆಗೂ ಬಿಡ್ತಿರಲಿಲ್ಲ. ಆದ್ರೆ ಗಿಲ್ ಕೋಚ್ ಗಂಭೀರ್ ಅವ್ರ ಕೈಗೊಂಬೆಯಾಗಿ ಅವ್ರ ತಾಳಕ್ಕೆ ತಕ್ಕಂತೆ ಕುಣೀತಿದ್ದಾರೆ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಸಿರಾಜ್​ರನ್ನೇ ಕೈಬಿಟ್ಟಿದ್ದಾರೆ. ಹಾಗಂತ ಫಾರ್ಮ್ ಇಲ್ಲ, ಇಂಜುರಿ ಈ ಥರದ ರೀಸನ್ಸ್ ಕೂಡ ಇಲ್ಲ. ಌಕ್ಚುಲ್ ಆಗಿ ಹೇಳ್ಬೇಕು ಅಂದ್ರೆ ಬುಮ್ರಾ ಬಳಿಕ ಅಟ್ ಪ್ರಸೆಂಟ್ ಭಾರತ ತಂಡದ ಮೇನ್ ಬೌಲರೇ ಸಿರಾಜ್. ಅವ್ರ ಪರ್ಫಾಮೆನ್ಸೇ ಇದನ್ನ ಹೇಳ್ತಿದೆ.

ಕ್ರಿಕೆಟ್ ಸೈನಿಕ ಸಿರಾಜ್!

2020ರ ಡಿಸೆಂಬರ್‌ ನಲ್ಲಿ ಮೆಲ್ಬೋರ್ನ್‌ ನಲ್ಲಿ ಟೆಸ್ಟ್‌ ಗೆ ಪದಾರ್ಪಣೆ

2020-21ರ ಆಸ್ಟ್ರೇಲಿಯಾ ಸರಣಿಯಲ್ಲಿ 3 ಪಂದ್ಯಗಳಿಂದ 13 ವಿಕೆಟ್

2024ರಲ್ಲಿ ದ.ಆಫ್ರಿಕಾ ವಿರುದ್ಧ ಕೇಪ್‌ ಟೌನ್ ನಲ್ಲಿ 15 ರನ್ ನೀಡಿ 6 ವಿಕೆಟ್

2025ರಲ್ಲಿ 10 ಟೆಸ್ಟ್ ಪಂದ್ಯಗಳಿಂದ 43 ವಿಕೆಟ್, ಬೆಸ್ಟ್ ಕ್ಯಾಲೆಂಡರ್ ಇಯರ್

2025ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಓವರ್ ಬೌಲಿಂಗ್ ಮಾಡಿದ ಬೌಲರ್

310.9 ಓವರ್ ಅಂದ್ರೆ 1,865 ಎಸೆತಗಳನ್ನ ಬೌಲಿಂಗ್ ಮಾಡಿದ್ದ ಸಿರಾಜ್

ಅಷ್ಟಕ್ಕೂ ಸಿರಾಜ್ ಇಂಜುರಿ ಅಂತಾ ಹೊರಗುಳಿಯಲ್ಲ. ರೆಸ್ಟ್ ಬೇಕು ಅಂತಾ ಕೇಳಿಲ್ಲ. ಡೊಮೆಸ್ಟಿಕ್ ಅಂತಾನೂ ತಾತ್ಸಾರ ಮಾಡಲ್ಲ. ಪ್ರತೀ ಸಲವೂ ಆಡಲು ಸಿದ್ಧ ಎನ್ನುವ ಏಕೈಕ ಆಟಗಾರ. ಸಿರಾಜ್ ಪದಾರ್ಪಣೆ ಮಾಡಿದಾಗಿನಿಂದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 23 ಟೆಸ್ಟ್‌ಗಳಲ್ಲಿ 91 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಬುಮ್ರಾಗೆ ರೆಸ್ಟ್ ನೀಡಿದ್ರೂ ಇಂಗ್ಲೆಂಡಿನಲ್ಲೂ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನೂ ಆಡಿ 23 ವಿಕೆಟ್ಸ್ ತೆಗೆದಿದ್ರು. ಕೊನೆಯ ಪಂದ್ಯದಲ್ಲಂತೂ ಸಿರಾಜ್ ಅವ್ರ ಅದ್ಭುತ ಸ್ಪೆಲ್​ನಿಂದಲೇ ಇಂಗ್ಲೆಂಡ್ ಸೋಲಿಸಿ ಭಾರತ ಸರಣಿ ಡ್ರಾ ಮಾಡಿಕೊಳ್ಳಲು ನೆರವಾಗಿದ್ದೇ ಸಿರಾಜ್. ವಿದೇಶಿ ಪಿಚ್ ಗಳಾದ ಗಾಬಾ, ಕೇಪ್ ಟೌನ್ ಮತ್ತು ಓವಲ್ ನಲ್ಲಿ ಅಬ್ಬರಿಸಿರೋ ಸಿರಾಜ್​ರನ್ನ ಪ್ರಸ್ತುತ ತಂಡದಲ್ಲಿ ನಡೆಸಿಕೊಳ್ತಿರೋ ರೀತಿ ನಿಜಕ್ಕೂ ಒಂದು ರೀತಿ ಅವಮಾನಕರ ಎನ್ನುವಂತೆಯೇ ಇದೆ.

ಏಕದಿನ ಸರಣಿಯಲ್ಲೂ ಬೆಂಚ್ ಕಾಯಿಸಿದ್ದ ಗಂಭೀರ್!

ಟೆಸ್ಟ್ ಸರಣಿಗೂ ಮುನ್ನ ನಡೆದಿದ್ದ 5 ಪಂದ್ಯಗಳ ಏಕದಿನ ಸರಣಿಯಲ್ಲೂ ಸಿರಾಜ್​ರನ್ನ ಮೊದಲ 4 ಪಂದ್ಯಗಳಲ್ಲಿ ಬೆಂಚ್ ಕಾಯಿಸಲಾಗಿತ್ತು. ಬಹುಶಃ ಟೆಸ್ಟ್​ಗಾಗಿ ರೆಸ್ಟ್ ಕೊಡ್ತಿದ್ದಾರೇನೋ ಅನ್ನೋದು ಎಲ್ಲರ ಲೆಕ್ಕಚಾರ ಆಗಿತ್ತು. ಇನ್ನು 5ನೇ ಏಕದಿನ ಪಂದ್ಯದಲ್ಲಿ ಅನಿವಾರ್ಯವಾಗಿ ಅವಕಾಶ ಸಿಕ್ಕಾಗ ಸಿರಾಜ್ 2 ಪ್ರಮುಖ ವಿಕೆಟ್ ಪಡೆದಿದ್ರು. ಈವನ್ ಬ್ಯಾಟಿಂಗ್​ನಲ್ಲೂ ಶೈನ್ ಆಗಿದ್ರು. ಹೀಗಿದ್ರೂ ಕೂಡ ಟೆಸ್ಟ್ ಪಂದ್ಯದಿಂದ ಹೊರಗಿಟ್ಟಿದ್ದಕ್ಕೆ ಭಾರತ ತಂಡದ ಮಾಜಿ ದಿಗ್ಗಜರು ಕೂಡ ಕೆಂಡವಾಗಿದ್ದಾರೆ. ಸುನಿಲ್ ಗವಾಸ್ಕರ್ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗಂತೂ ಇದು ಅರ್ಥವಾಗುತ್ತಿಲ್ಲ, ಸಿರಾಜ್ ಎಂದಿಗೂ ಭಾರತ ತಂಡಕ್ಕೆ ನಿರಾಸೆ ಮಾಡಿಲ್ಲ. ವಿದೇಶಿ ಪಿಚ್‌ಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಅವರನ್ನು ಕೈಬಿಟ್ಟಿದ್ದು ಆಘಾತಕಾರಿ ಎಂದು ಕಿಡಿಕಾರಿದ್ದಾರೆ. ಇತ್ತ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಕೂಡ ತಂಡದ ಆಯ್ಕೆಯ ಬಗ್ಗೆ ನ್ಯೂ ನಾರ್ಮಲ್ ಎಂದು ವ್ಯಂಗ್ಯವಾಡಿದ್ದಾರೆ. ರವಿಶಾಸ್ತ್ರಿ ಮತ್ತು ಹರ್ಷ ಭೋಗ್ಲೆ ಕಿಡಿ ಕಾರಿದ್ದಾರೆ. ಒಟ್ನಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ತುಂಬಾ ಓವರ್​ಗಳನ್ನ ಬೌಲ್ ಮಾಡ್ಬೇಕು, ವರ್ಕ್ ಲೋಡ್ ಜಾಸ್ತಿ ಇರುತ್ತೆ ಅಂತಾ ಆರೋಪ ಮಾಡೋ ಆಟಗಾರರ ನಡುವೆ ಕೆಲಸದ ಒತ್ತಡವನ್ನೇ ಸವಾಲಾಗಿ ಸ್ವೀಕರಿಸಿ ಭಾರತದ ಬೌಲಿಂಗ್ ವಿಭಾಗದ ಆಪತ್ಬಾಂಧವ ಎನಿಸಿಕೊಂಡ ಮೊಹಮ್ಮದ್ ಸಿರಾಜ್ ಇಂದು ಯಾರದ್ದೋ ಜಿದ್ದಿಗೆ ಬೆಂಚ್ ಕಾಯ್ಬೇಕಾಗಿದೆ. ಜಸ್ಪ್ರೀತ್ ಬುಮ್ರಾನಂಥ ವರ್ಲ್ಡ್​​ಕ್ಲಾಸ್ ಬೌಲರ್ ತಂಡದಲ್ಲಿದ್ದಾಗ್ಲೂ ಅವರ ನೆರಳಿನಲ್ಲಿ ಗುರುತಿಸಿಕೊಳ್ಳದೆ ತಮ್ಮದೇ ಬೌಲಿಂಗ್ ಸಾಮರ್ಥ್ಯದಿಂದ ಭಾರತ ತಂಡದ ಮೇನ್ ಫಾಸ್ಟ್ ಬೌಲರ್ ಆಗಿ ಬೆಳೆದ ಸಿರಾಜ್ ರನ್ನ ಈ ರೀತಿ ನಡೆಸಿಕೊಳ್ಳುತ್ತಿರೋದು ನಿಜಕ್ಕೂ ದುರಂತ. ಈಗಾಗ್ಲೇ ಮೊಹಮ್ಮದ್ ಶಮಿ ಇಂಥಾ ಅವಮಾನಗಳಿಂದಲೇ ಟೆಸ್ಟ್​ಗೆ ಗುಡ್ ಬೈ ಹೇಳಿದ್ರು. ಬಹುಶಃ ಗಂಭೀರ್ ಹುಚ್ಚಾಟ ನೋಡ್ತಿದ್ರೆ ನೆಕ್ಸ್​ಟ್ ಸಿರಾಜ್ ಸರದಿ ಬಂದ್ರೂ ಅಚ್ಚರಿ ಪಡ್ಬೇಕಿಲ್ಲ.

Shantha Kumari

Leave a Reply

Your email address will not be published. Required fields are marked *