ಟೆಸ್ಟ್ ನಲ್ಲಿ Tail-Enders ಕಾಟ – ಬೌಲರ್ಸ್ ಬ್ಯಾಟಿಂಗ್ ಗೆ ಭಾರತ ಸುಸ್ತು
NZನಲ್ಲಾದ್ರೂ ಸಲ್ಯೂಷನ್ ಸಿಗುತ್ತಾ?

ಟೆಸ್ಟ್ ನಲ್ಲಿ Tail-Enders ಕಾಟ – ಬೌಲರ್ಸ್ ಬ್ಯಾಟಿಂಗ್ ಗೆ ಭಾರತ ಸುಸ್ತುNZನಲ್ಲಾದ್ರೂ ಸಲ್ಯೂಷನ್ ಸಿಗುತ್ತಾ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಶುರುವಾಗಿದೆ. ವೆಲ್ಲಿಂಗ್ಟನ್​ನಲ್ಲಿ ಇಂದಿನಿಂದ ಮೊದಲ ಪಂದ್ಯ ಆರಂಭವಾಗಿದ್ದು ಆಲ್ರೆಡಿ ಫಸ್ಟ್ ಡೇ ಆಟವೂ ಮುಗೀತು. ನ್ಯೂಜಿಲೆಂಡ್​​ನಲ್ಲಿ ಬೆಳಗ್ಗೆ 10ಕ್ಕೆ ಪಂದ್ಯ ಸ್ಟಾರ್ಟ್ ಆಗಿದ್ರೂ ಕೂಡ ಇಂಡಿಯನ್ ಟೈಮಿಂಗ್ಸ್ ಪ್ರಕಾರ ಮುಂಜಾನೆ 3.30ಕ್ಕೆ ಪಂದ್ಯ ಸ್ಟಾರ್ಟ್ ಆಗಿತ್ತು. ಈ  ಸರಣಿ ಗೆಲುವು ಭಾರತಕ್ಕೆ ಅನಿವಾರ್ಯವಾಗಿದ್ರೂ ಕೂಡ ತಂಡಕ್ಕೆ ಎದುರಾಳಿ ತಂಡಗಳ ಟೇಲ್ ಎಂಡರ್​ಗಳೇ ದೊಡ್ಡ ತಲೆನೋವಾಗಿದ್ದಾರೆ.

ಇದನ್ನೂ ಓದಿ : ಚಾಂಪಿಯನ್ಸ್ ಟಚ್ ಮಾಡದ RCB – HAT-TRICK ಕಪ್ ಗೆ ಬಲಿಷ್ಠ ಟೀಂ

ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್, ಬೌಲಿಂಗ್ ಎಲ್ಲವೂ ಸ್ಟ್ರಾಂಗ್ ಆಗೇ ಇದೆ. ಅದ್ರಲ್ಲೂ ವೇಗದ ಬೌಲರ್​ಗಳ ದಂಡು, ಸ್ಪೆಷಲಿಸ್ಟ್ ಸ್ಪಿನ್ನರ್​ಗಳೂ ಇರ್ತಾರೆ. ಆದ್ರೆ ಎದುರಾಳಿ ತಂಡದ 8, 9, 10 ಮತ್ತು 11ನೇ ಕ್ರಮಾಂಕದ ಬ್ಯಾಟರ್‌ಗಳೇ ಭಾರತದ ಬೌಲರ್‌ಗಳಿಗೆ ತಲೆನೋವಾಗುತ್ತಿದ್ದಾರೆ. ಶುಭಮನ್ ಗಿಲ್ ನಾಯಕತ್ವ ವಹಿಸಿಕೊಂಡ ಬಳಿಕ ಆಡಿರುವ 12 ಟೆಸ್ಟ್ ಪಂದ್ಯಗಳಲ್ಲಿ ಎದುರಾಳಿ ತಂಡಗಳ ಕೆಳ ಕ್ರಮಾಂಕದ ಬ್ಯಾಟರ್​ಗಳೇ ಸಾಕಷ್ಟು ರನ್ ಗಳಿಸಿದ್ದಾರೆ. ಹಿಂದಿನ ಸಿರೀಸ್​ಗಳ ರೆಕಾರ್ಡ್ಸ್ ತೆಗೆದ್ರೆ ಅಚ್ಚರಿಯ ಅಂಕಿಅಂಶಗಳು ಹೊರಬಿದ್ದಿವೆ. ಇದೇ ಕಾರಣಕ್ಕೆ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಶಾಕಿಂಗ್ ವಿಚಾರವನ್ನ ರಿವೀಲ್ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸಿರೀಸ್​ನಲ್ಲಿ ತಂಡದ ಟೇಲ್ ಎಂಡರ್ಸ್ 8 ಇನ್ನಿಂಗ್ಸ್‌ಗಳಲ್ಲಿ 369 ರನ್ ಗಳಿಸಿದ್ರೆ, ವೆಸ್ಟ್ ಇಂಡೀಸ್ 4 ಇನ್ನಿಂಗ್ಸ್‌ಗಳಲ್ಲಿ 201 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ಕೂಡ ಕೇವಲ 3 ಇನ್ನಿಂಗ್ಸ್‌ಗಳಲ್ಲಿ 213 ರನ್ ಗಳಿಸಿ ಭಾರತದ ಬೌಲರ್‌ಗಳನ್ನು ಕಾಡಿದೆ. ಇನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೆಳ ಕ್ರಮಾಂಕದಿಂದ ಭಾರತ 4 ಇನ್ನಿಂಗ್ಸ್‌ಗಳಲ್ಲಿ 145 ರನ್ ಬಿಟ್ಟುಕೊಟ್ಟಿತ್ತು. ಅಷ್ಟೇ ಅಲ್ಲ, ಟೇಲ್ ಎಂಡ್ ಬ್ಯಾಟರ್‌ಗಳು ಬರೋಬ್ಬರಿ 95.2 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ಉಳಿದಿದ್ರು. ಹಾಗಂತ ಇಲ್ಲಿ ಭಾರತದ ಬೌಲಿಂಗ್​ನಲ್ಲಿ ವಿಕೆಟ್ಸ್ ಬರ್ತಿಲ್ಲ ಅಂತಲ್ಲ. ಆದ್ರೆ ಬೌಲರ್‌ಗಳ ತಂತ್ರಗಾರಿಕೆಯಲ್ಲೂ ಬದಲಾವಣೆ ಅಗತ್ಯವಿದೆ ಅನ್ನೋದು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವ್ರ ಎಚ್ಚರಿಕೆ. ಟೇಲ್ ಎಂಡ್ ಬ್ಯಾಟರ್‌ಗಳನ್ನು ಸುಲಭವಾಗಿ ಔಟ್ ಮಾಡಬಹುದು ಅನ್ನೋ ಮೈಂಡ್​ಸೆಟ್ ಈಗ ಕೆಲಸ ಮಾಡಲ್ಲ. ಅವರಿಗೂ ಬ್ಯಾಟಿಂಗ್ ಸಾಮರ್ಥ್ಯವಿದೆ. ಸಣ್ಣ ಸಣ್ಣ ಜೊತೆಯಾಟಗಳ ಮೂಲಕ 20, 30 ರನ್ ಸೇರಿಸಿ ಪಂದ್ಯದ ಮೊಮೆಂಟಮ್ ಬದಲಿಸುವ ಶಕ್ತಿ ಇದೆ. ಕೆಲವೊಮ್ಮೆ ವಿಕೆಟ್ ಪಡೆಯುವ ಆತುರದಲ್ಲಿ, ಅಥವಾ ಪ್ರೆಶರ್​ನಲ್ಲಿ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಡುತ್ತಾರೆ. ಫೀಲ್ಡಿಂಗ್ ಸೆಟ್ ಮಾಡುವಾಗಲೂ ತಂತ್ರಗಾರಿಕೆ ಬೇಕಾಗುತ್ತೆ.   ಶಾರ್ಟ್ ಬಾಲ್ ಟೆಕ್ನಿಕ್, ಸರಿಯಾದ ಫೀಲ್ಡ್ ಪ್ಲೇಸ್ಮೆಂಟ್ ಮತ್ತು ಕಂಟಿನ್ಯುಯಸ್ ಪ್ರೆಶರ್ ಕ್ರಿಯೇಟ್ ಮಾಡ್ಬೇಕು. ಆಗಷ್ಟೇ ಸಕ್ಸಸ್ ಆಗೋಕೆ ಸಾಧ್ಯ ಅಂತಾ ಮೊರ್ಕೆಲ್ ವಾರ್ನ್ ಮಾಡಿದ್ದಾರೆ.

ಪ್ರಸ್ತುತ ಈಗಾಗ್ಲೇ ಟೀಂ ಇಂಡಿಯಾದಲ್ಲಿ ಮೂರೂ ಮಾದರಿಯಲ್ಲೂ ಟಾಪ್ ಆರ್ಡರ್ ಬ್ಯಾಟಿಂಗ್ ಮೇಲೆ ಮಾತ್ರ ಡಿಪೆಂಡ್ ಆಗ್ತಿರೋದ್ರ ಬಗ್ಗೆ ಚರ್ಚೆಯಾಗ್ತಿದೆ. ಇದರ ಜೊತೆಗೆ ಎದುರಾಳಿ ತಂಡದ ಲೋವರ್ ಆರ್ಡರ್ ಬ್ಯಾಟಿಂಗ್​ಗೆ ಕಡಿವಾಣ ಹಾಕುವಲ್ಲಿ ಭಾರತ ವಿಫಲವಾದರೆ, ಟೆಸ್ಟ್ ಪಂದ್ಯಗಳಲ್ಲಿ ಮತ್ತೊಮ್ಮೆ ಸಂಕಷ್ಟ ಎದುರಾಗಬಹುದು. ಒಟ್ನಲ್ಲಿ ಟಾಪ್ ಆರ್ಡರ್ ವಿಕೆಟ್ ಪಡೆದರೆ ಸಾಕು ಅನ್ನೋ ಕಾಲ ಈಗ ಮುಗಿದಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ವಿಕೆಟ್ ಕೂಡ ಮೊದಲ ವಿಕೆಟ್‌ನಷ್ಟೇ ಮುಖ್ಯವಾಗುತ್ತೆ. ನ್ಯೂಜಿಲೆಂಡ್​ನಲ್ಲೂ ಕೂಡ ಕೆಳ ಕ್ರಮಾಂಕದಲ್ಲಿ ಬಲಿಷ್ಠ ಪ್ಳೇಯರ್​ಗಳೇ ಇರೋದ್ರಿಂದ ಈ ಟೇಲ್ ಎಂಡ್ ಸವಾಲನ್ನು ಭಾರತ ಹೇಗೆ ಎದುರಿಸಲಿದೆ ಅನ್ನೋದೇ ಇಲ್ಲಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *