ಚಾಂಪಿಯನ್ಸ್ ಟಚ್ ಮಾಡದ RCB – HAT-TRICK ಕಪ್ ಗೆ ಬಲಿಷ್ಠ ಟೀಂ
10 ತಂಡಗಳಲ್ಲಿ ಬೆಂಗಳೂರೇ ಡೇಂಜರ್

ಚಾಂಪಿಯನ್ಸ್ ಟಚ್ ಮಾಡದ RCB – HAT-TRICK ಕಪ್ ಗೆ ಬಲಿಷ್ಠ ಟೀಂ10 ತಂಡಗಳಲ್ಲಿ ಬೆಂಗಳೂರೇ ಡೇಂಜರ್

20ನೇ ಸೀಸನ್ ಐಪಿಎಲ್​ನಲ್ಲಿ ಟ್ರೋಫಿ ಗೆಲ್ಬೇಕು ಅಂತಾ ಫ್ರಾಂಚೈಸಿಗಳೆಲ್ಲಾ ಅಳೆದುತೂಗಿ ಕೆಲ ಆಟಗಾರರನ್ನ ಮಿನಿ ಆಕ್ಷನ್​ಗೆ ಬಿಟ್ಟಿದ್ದಾರೆ. ಹಾಗೇ ಯಾರನ್ನ ಖರೀದಿ ಮಾಡ್ಬೇಕು, ಯಾವ ಸ್ಲಾಟ್ ಟಾರ್ಗೆಟ್ ಮಾಡ್ಬೇಕು, ಬೆಂಚ್ ಸ್ಟ್ರೆಂಥ್ ಹೇಗಿರಬೇಕು ಅನ್ನೋ ಲಿಸ್ಟ್ ಕೂಡ ರೆಡಿಯಾಗ್ತಿದೆ. ಆದ್ರೆ ಬೇರೆಲ್ಲಾ ತಂಡಗಳಿಗೆ ಕಂಪೇರ್ ಮಾಡಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಮಾರ್ಟ್ ಡಿಸಿಷನ್ಸ್ ತಗೊಂಡಿದೆ. ಹ್ಯಾಟ್ರಿಕ್ ಕಪ್ ಮೇಲೆ ಕಣ್ಣಿಟ್ಟಿರೋ ರೆಡ್ ಆರ್ಮಿಯಲ್ಲಿ ಚಾಂಪಿಯನ್​ಗಳನ್ನ ಟಚ್ ಮಾಡೋಕೂ ಹೋಗಿಲ್ಲ.

ಇದನ್ನೂ ಓದಿ : KL ಓಪನರ್.. DDPಗಿಲ್ವಾ ಚಾನ್ಸ್? – ನಾಲ್ವರು ಫಾಸ್ಟ್ ಬೌಲರ್ಸ್ ಯಾಕೆ?

2027ರ ಐಪಿಎಲ್​ಗೂ ಮುನ್ನ ಬೆಂಗಳೂರು ತಂಡದಿಂದ 6 ಆಟಗಾರರನ್ನ ರಿಲೀಸ್ ಮಾಡಲಾಗಿದೆ. ಮಂಗೇಶ್ ಯಾದವ್, ಜೇಕಬ್ ಬೆಥೆಲ್, ರಿಚರ್ಡ್ ಗ್ಲೀಸನ್, ಸಾತ್ವಿಕ್ ದೇಸ್ವಾಲ್, ವಿಹಾನ್ ಮಲ್ಹೋತ್ರಾ ಹಾಗೇ  ಸ್ವಪ್ನಿಲ್‌ ಸಿಂಗ್‌ ಹೊರಬಿದ್ದಿದ್ದಾರೆ. ಸದ್ಯ 14.15 ಕೋಟಿ ಪರ್ಸ್ ಬ್ಯಾಲೆನ್ಸ್​ನೊಂದಿಗೆ ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರೋ ಮಿನಿ ಆಕ್ಷನ್​ನಲ್ಲಿ ಒಬ್ಬ ಓವರ್​ಸೀಸ್ ಪ್ಲೇಯರ್ ಸೇರಿ ರಿಲೀಸ್ ಆದ ಸ್ಥಾನಗಳನ್ನ ಫಿಲ್ ಮಾಡ್ಬೇಕಿದೆ. ಸತತ ಎರಡು ಬಾರಿ ಅಂದ್ರೆ 2025 ಮತ್ತು 2026ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬೆಂಗಳೂರು ತಂಡ ಸಣ್ಣಪುಟ್ಟ ಬದಲಾವಣೆಗಳಲ್ಲೇ ಹ್ಯಾಟ್ರಿಕ್ ಕಪ್ ಗೆಲ್ಲೋಕೆ ಪಣ ತೊಟ್ಟಿದೆ.

 ಚಾಂಪಿಯನ್ಸ್ ಟಚ್ ಮಾಡದೇ ಫ್ರಾಂಚೈಸಿ ಸ್ಮಾರ್ಟ್ ಗೇಮ್!

20ನೇ ಸೀಸನ್ ಐಪಿಎಲ್​ಗಾಗಿ ಕೆಲ ತಂಡಗಳಲ್ಲಿ ಅರ್ಧಕ್ಕರ್ಧ ಪ್ಲೇಯರ್​ಗಳನ್ನ ಕೈಬಿಟ್ಟಿದ್ದಾರೆ. ಌಂಡ್ ದುಬಾರಿ ಮತ್ತು ಸ್ಟಾರ್ ಪ್ಲೇಯರ್​ಗಳಿಗೂ ಗೇಟ್​ಪಾಸ್ ಕೊಟ್ಟಿದ್ದಾರೆ. ಈ ಪೈಕಿ ಲಕ್ನೋ ಸೂಪರ್ ಜೇಂಟ್ಸ್ ತಂಡ 47.45 ಕೋಟಿಯೊಂದಿಗೆ ಹೈಯೆಸ್ಟ್ ಪರ್ಸ್ ಬ್ಯಾಲೆನ್ಸ್​ನೊಂದಿಗೆ ಮಿನಿ ಆಕ್ಷನ್​ಗೆ ಬರಲಿದೆ. ಗುಜರಾತ್ ತಂಡ 8.75 ಕೋಟಿಯೊಂದಿಗೆ ಅತೀ ಕಡಿಮೆ ಬ್ಯಾಲೆನ್ಸ್ ಇರೋ ಟೀಂ ಆಗಿದೆ. ಈ ಪೈಕಿ ಬೆಂಗಳೂರು 14.15 ಕೋಟಿಯೊಂದಿಗೆ ಲೋಯೆಸ್ಟ್ ಪರ್ಸ್ ಬ್ಯಾಲೆನ್ಸ್​ನಲ್ಲಿ ಸೆಕೆಂಡ್ ಪ್ಲೇಸ್​ನಲ್ಲಿದೆ. ಯಾಕಂದ್ರೆ ಬೆಂಗಳೂರು ತಂಡ ಪ್ಲೇಯಿಂಗ್ 11 ಟಚ್ ಮಾಡೋ ಗೋಜಿಗೂ ಹೋಗಿಲ್ಲ.

ಆರ್ ಸಿಬಿ ಸ್ಮಾರ್ಟ್ ಗೇಮ್!

ಆರ್ ಸಿಬಿಗೆ ಕಪ್ ಗೆಲ್ಲಿಸಿದ ಚಾಂಪಿಯನ್ಸ್ 2027ಕ್ಕೂ ಸೇಫ್

ಪ್ಲೇಯಿಂಗ್ 11 ಭಾಗವಾಗಿದ್ದ ಪ್ಲೇಯರ್ ಗಳೆಲ್ಲಾ ಮತ್ತೆ ರಿಟೇನ್

ಜೇಕಬ್ ಬೆಥೆಲ್ ಸರ್ಜರಿ ಕಾರಣದಿಂದಾಗಿ ತಂಡದಿಂದ ಹೊರಗೆ

ಬೆಂಚ್ ಕಾಯ್ತಿದ್ದ ಪ್ಲೇಯರ್ ಗಳನ್ನ ಮಾತ್ರ ಕೈಬಿಟ್ಟು ಪ್ರಕ್ರಿಯೆ

ಜಿತೇಶ್ ಶರ್ಮಾ & ರೊಮ್ಯಾರಿಯೋ ಶೆಫರ್ಡ್ ಗೂ ಮತ್ತೆ ಚಾನ್ಸ್

2025 & 2026ರಲ್ಲಿ ಕಪ್ ಗೆಲ್ಲಿಸಿಕೊಟ್ಟ ಪ್ಲೇಯರ್ ಗಳೆಲ್ಲಾ ಸೇಫ್

ಹೀಗೆ ಬೆಂಗಳೂರು ತಂಡಕ್ಕೆ ಯಾವುದೇ ಸ್ಲಾಟ್ ಆಗ್ಲಿ ಅಥವಾ ಅವ್ರ ಇಂಡಿವಿಶ್ಯುಯಲ್ ಪರ್ಫಾಮೆನ್ಸ್ ಆಗ್ಲಿ ಸಮಸ್ಯೆ ಅನ್ನಿಸಿಲ್ಲ. ಕೆಲ ಆಟಗಾರರ ಪ್ರದರ್ಶನ ಡಲ್ ಆಗಿದ್ರೂ ಟ್ರೋಫಿ ಗೆಲ್ಲೋದಕ್ಕೆ ಅದೇನು ಅಡ್ಡಿಯಾಗಿಲ್ಲ. ಒಂಥರಾ ಈಗಿರುವಂಥ ಟೀಂ ಲಕ್ಕಿ ಕಾಂಬಿನೇಷನ್ ಌಂಡ್ ಮೋಸ್ಟ್ ಡೇಂಜರಸ್ ಅನ್ನೋ ಥರನೇ ಇರೋದ್ರಿಂದ ಯಾವುದೇ ಬದಲಾವಣೆ ಮಾಡೊ ಗೋಜಿಗೆ ಹೋಗಿಲ್ಲ. ಓಪನಿಂಗ್ ಜೋಡಿಯಾಗಿ ಅನಿಭವಿಗಳಾದ ಕಿಂಗ್ ವಿರಾಟ್ ಕೊಹ್ಲಿ ಹಾಗೇ ಫಿಲ್ ಸಾಲ್ಟ್ ಪವರ್ ಹಿಟ್ಟಿಂಗ್ ಪ್ರದರ್ಶನ ನೀಡ್ತಾರೆ. ನಂಬರ್ 3ನಲ್ಲಿ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್ ಗೇಮ್ ಚೇಂಜರ್ ಆಗ್ತಿದ್ದಾರೆ. ಇನ್ನು ಮಿಡಲ್ ಆರ್ಡರ್​ನಲ್ಲಿ ನಾಯಕ ರಜತ್ ಪಾಟಿದಾರ್ ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸೋ ಸಾಮರ್ಥ್ಯ ಅವ್ರಲ್ಲಿದೆ. ಇನ್ನು ಜಿತೇಶ್ ಶರ್ಮಾ ವಿಕೆಟ್ ಕೀಪಿಂಗ್ ತುಂಬಾ ಚೆನ್ನಾಗಿದೆ. ಲಾಸ್ಟ್ ಸೀಸನ್​ನಲ್ಲಿ ಅವ್ರ ಬ್ಯಾಟಿಂಗ್ ಮಂಕಾಗಿದ್ರೂ ಕೂಡ 2025ರಲ್ಲಿ ಬೆಂಗಳೂರು ಕಪ್ ಗೆಲ್ಲೋದ್ರಲ್ಲಿ ಅವ್ರ ಪಾತ್ರವೂ ದೊಡ್ಡದಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲೂ ಅದೇ ನಿರೀಕ್ಷೆಯಲ್ಲೇ ಕಂಟಿನ್ಯೂ ಮಾಡಿದ್ದಾರೆ. ಇನ್ನು ಫಿನಿಶಿಂಗ್ ರೋಲ್​ನಲ್ಲಿ ಕೃನಾಲ್ ಪಾಂಡ್ಯ, ಟಿಮ್ ಡೇವಿಡ್ ಬ್ಯಾಟಿಂಗ್​ ಅಂತೂ ಸಾಲಿಡ್ ಆಗಿದೆ. ರೊಮ್ಯಾರಿಯೋ ಶೆಫರ್ಡ್ ಕೂಡ ಬಿಗ್ ಹಿಟ್ಟರ್ ಅನ್ನೋ ಕಾರಣಕ್ಕೂ ಅವ್ರನ್ನೂ ಉಳಿಸಿಕೊಳ್ಳಲಾಗಿದೆ. ಹಾಗೇ ಬೌಲಿಂಗ್ ಅಂತಾ ಬಂದ್ರೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ ವುಡ್, ರಸಿಕ್ ಸಲಾಂ ಧಾರ್, ಯಶ್ ದಯಾಳ್, ಜೇಕಬ್ ಡಫಿಯಂಥ ಕ್ವಾಲಿಟಿ ಪ್ಲೇಯರ್​ಗಳೇ ಇರೋದ್ರಿಂದ ಇಲ್ಲೂ ಕೂಡ ಚೇಂಜಸ್ ಅಗತ್ಯ ಇರ್ಲಿಲ್ಲ. ಈ ಎಲ್ಲಾ ಕಾರಣಗಳಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರಿಸ್ಕ್ ಫ್ರೀ ಡಿಸಿಷನ್ಸ್ ತಗೊಂಡಿದೆ. ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದಿರೋ ತಂಡಕ್ಕೆ ಬದಲಾವಣೆ ಬೇಕಿಲ್ಲ. ಜಸ್ಟ್ ಮಿನಿ ಆಕ್ಷನ್ ಪ್ರೊಸೀಜರ್ಸ್ ಫಾಲೋ ಮಾಡ್ಬೇಕು ಅನ್ನೋ ನಿಟ್ಟಿನಲ್ಲಿ ಬೆಂಚ್ ಕಾಯ್ತಿದ್ದ ಕೆಲ ಆಟಗಾರರನ್ನ ಕೈಬಿಟ್ಟು ಬುದ್ದಿವಂತಿಕೆ ತೋರಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಅಟ್ ಪ್ರಸೆಂಟ್ ಟೂರ್ನಿ ಸ್ಟಾರ್ಟ್ ಆದ್ರೂ ಬೆಂಗಳೂರು ತಂಡ ಚೂರೇಚೂರು ಟೆನ್ಷನ್ ಇಲ್ಲದೆ ಬಲಿಷ್ಠ ಪ್ಲೇಯಿಂಗ್​ 11ನೇ ಅಖಾಡಕ್ಕಿಳಿಸಲಿದೆ. ಇದೇ ಕಾರಣಕ್ಕೆ 2027ರಲ್ಲೂ ಟ್ರೋಫಿ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ.

Shantha Kumari

Leave a Reply

Your email address will not be published. Required fields are marked *