ಆಟಕ್ಕೆ ಗುಡ್‌ಬೈ, CSKಗೆ ಧೋನಿ ಮೆಂಟರ್ – ಆರ್ಯವೀರ್‌ಗೆ ಸೆಹ್ವಾಗ್ ಫೆರಾರಿ ಗಿಫ್ಟ್?

ಆಟಕ್ಕೆ ಗುಡ್‌ಬೈ, CSKಗೆ ಧೋನಿ ಮೆಂಟರ್ –  ಆರ್ಯವೀರ್‌ಗೆ ಸೆಹ್ವಾಗ್ ಫೆರಾರಿ ಗಿಫ್ಟ್?

ಸೂರ್ಯಕುಮಾರ್ ಕಂಬ್ಯಾಕ್‌ಗೆ ಎಂಎಸ್‌ ಧೋನಿ ಫಿಲ್ಮ ಸ್ಫೋತಿಯಾಗಿದೆ. ಆ ಸಿನಿಮಾದಲ್ಲಿ ಧೋನಿ ಸ್ನೇಹಿತ ಸೆಲೆಕ್ಟರ್ಸ್‌ ಎಲ್ಲಿ ಇರ್ತಾರೆ ಅಲ್ಲಿಗೆ ಹೊಡಿಬೇಕು ಅನ್ನೋ ಸೀನ್ ಇದೆ. ಅದೇ ರೀತಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಯಲ್ಲಿ ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ಅಬ್ಬರದ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಬಿಸಿಸಿಐ ಹಿರಿಯ ಪುರುಷರ ಆಯ್ಕೆ ಸಮಿತಿಯ ಈಸ್ಟ್‌ ಝೋನ್‌ ಪ್ರತಿನಿಧಿ ಶಿವ್‌ ಸುಂದರ್‌ ದಾಸ್‌ ಕೂಡ ಮೈದಾನದಲ್ಲಿದ್ದರು. ಈ ವೇಳೆ ಸೂರ್ಯ ಸಿಡಿಸಿದ ಸಿಕ್ಸ್ ಅವರ ಮುಂದೆಯೇ ಹಾದು ಮೈದಾನದಿಂದ ಹೊರ ಹೋಗಿದೆ. ಪಂದ್ಯ ಮುಗಿದ ನಂತ್ರ ಧೋನಿ ಸಿನಿಮಾದಂತೆ ನಾನು ಹೊಡೆದಿದ್ದೇನೆ ಎಂದು ಸೂರ್ಯಕುಮಾರ್ ಹೇಳಿಕೊಂಡಿದ್ದಾರೆ.

RCB ಸ್ಟಾರ್ ಬ್ಯಾಟರ್ ರಜತ್ ಪಾಟೀದಾರ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅಸ್ಸಾಂ ವಿರುದ್ಧ ಮಧ್ಯಪ್ರದೇಶ ಪರ ಕೇವಲ 48 ಎಸೆತಗಳಲ್ಲಿ ಅಜೇಯ 135 ರನ್ ಬಾರಿಸಿದ ರಜತ್ ಬರೋಬ್ಬರಿ 13 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಸಿದರು. ಈ ಮೂಲಕ ಟೂರ್ನಿಯ ಇತಿಹಾಸದಲ್ಲಿ ಶತಕ ಬಾರಿಸಿದ ಹಾಗೂ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮಧ್ಯಪ್ರದೇಶದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು.

ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 319 ರನ್‌ಗಳ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ಇದೇ ದಾಖಲೆಯನ್ನು ತಮ್ಮ ಮಕ್ಕಳು ಮುರಿದರೆ ಫೆರಾರಿ ಕಾರು ಉಡುಗೊರೆಯಾಗಿ ನೀಡುವುದಾಗಿ ಅವರು ಹಿಂದೆ ತಮಾಷೆಯಾಗಿ ಸವಾಲು ಹಾಕಿದ್ದರಂತೆ. ಶಾಲಾ ಕ್ರಿಕೆಟ್‌ನಲ್ಲಾದರೂ 319 ರನ್‌ಗಳ ಗಡಿ ದಾಟಿದರೆ ಉಡುಗೊರೆ ಸಿಗಲಿದೆ ಎಂಬುದು ಅವರ ಮಾತಾಗಿತ್ತು. ಆದ್ರೆ 2024ರಲ್ಲಿ ಬೆಹಾರ್ ಟ್ರೋಪಿಯಲ್ಲಿ ಒಮ್ಮೆ ತಂದೆಯ 319 ರನ್‌ಗಳ ದಾಖಲೆಯ ಸನಿಹಕ್ಕೆ ಬಂದು ನಿಂತಿದ್ರು ಆರ್ಯವೀರ್.. ಇದೀಗ ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್‌ ಗಮನ ಸೆಳೆದಿದ್ದು, ಅಪ್ಪನ ಗಿಫ್ಟ್ ಮಾತು ಈಗ ಸಖತ್‌ ಟ್ರೆಡಿಂಗ್‌ನಲ್ಲಿದೆ.

ಇದನ್ನೂ ಓದಿ: KL ಓಪನರ್.. DDPಗಿಲ್ವಾ ಚಾನ್ಸ್? – ನಾಲ್ವರು ಫಾಸ್ಟ್ ಬೌಲರ್ಸ್ ಯಾಕೆ?

ರಾಜಧಾನಿ ಎಕ್ಸ್‌ಪ್ರೆಸ್’ ಖ್ಯಾತಿಯ ಮಯಾಂಕ್ ಯಾದವ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಯಾಂಕ್, ಪ್ರಸ್ತುತ ನಡೆಯುತ್ತಿರುವ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಮಾರಕ ಬೌಲಿಂಗ್ ದಾಳಿಯ ಮೂಲಕ ಕೇವಲ 6 ಓವರ್‌ಗಳಲ್ಲಿ 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

 

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಪ್ರದರ್ಶನದ ಬೆನ್ನಲ್ಲೇ 2027ರ ಏಕದಿನ ವಿಶ್ವಕಪ್‌ನಲ್ಲಿ ಅವರ ಸ್ಥಾನ ಹಾಗೂ ಫಾರ್ಮ್ ಕುರಿತು ಚರ್ಚೆ ಶುರುವಾಗಿದೆ. ಅನುಭವದ ಆಧಾರದಲ್ಲಿ ರೋಹಿತ್‌ಗೆ ಅವಕಾಶ ನೀಡಬೇಕೇ ಅಥವಾ ಯುವ ಆಟಗಾರರಿಗೆ ಮಣೆ ಹಾಕಬೇಕೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಮುಂದಿನ ಸರಣಿಗಳಲ್ಲಿ ರೋಹಿತ್ ಪ್ರದರ್ಶನ ನಿರ್ಣಾಯಕವಾಗಲಿದೆ.

ಕ್ರಿಕೆಟ್ ಅಭಿಮಾನಿಗಳಿಗೆ ಐಸಿಸಿಯಿಂದ ಸಿಹಿ ಸುದ್ದಿ ಸಿಕ್ಕಿದೆ. 2029ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕನ್ನು ಭಾರತ ಪಡೆದುಕೊಂಡಿದೆ. ಅಕ್ಟೋಬರ್ 9ರಿಂದ 28ರವರೆಗೆ ಟೂರ್ನಿ ನಡೆಯಲಿದೆ. 2006ರ ಬಳಿಕ ಭಾರತದಲ್ಲಿ ಮತ್ತೆ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಾಗುತ್ತಿರುವುದು ವಿಶೇಷ. ಈ ಟೂರ್ನಿಯಲ್ಲಿ ವಿಶ್ವದ ಪ್ರಮುಖ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಆತಿಥೇಯ ರಾಷ್ಟ್ರವಾಗಿ ಭಾರತ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

2031ರ ಏಕದಿನ ವಿಶ್ವಕಪ್ ಆಯೋಜನೆಯ ಜವಾಬ್ದಾರಿಯನ್ನು ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ವಹಿಸಿಕೊಂಡಿವೆ. ಅಕ್ಟೋಬರ್ 9ರಿಂದ ನವೆಂಬರ್ 23ರವರೆಗೆ ಟೂರ್ನಿ ನಡೆಯಲಿದೆ. 2023ರಲ್ಲಿ ಭಾರತ ಏಕಾಂಗಿಯಾಗಿ ವಿಶ್ವಕಪ್ ಆಯೋಜಿಸಿತ್ತು. ಆದರೆ ಮುಂದಿನ ಬಾರಿ ಬಾಂಗ್ಲಾದೇಶದ ಜೊತೆ ಆತಿಥ್ಯ ಹಂಚಿಕೊಳ್ಳಲಿದೆ. ಈಗಿನಿಂದಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ವಿಶ್ವಕಪ್ ಸಂಭ್ರಮದ ನಿರೀಕ್ಷೆ ಶುರುವಾಗಿದೆ.

ತಮ್ಮ ಇಡೀ ಕ್ರಿಕೆಟ್ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಅವರೇ ಅತ್ಯಂತ ಪ್ರಭಾವಶಾಲಿ ಟೆಸ್ಟ್ ಆಟಗಾರ ಎಂದು ಅಶ್ವಿನ್ ಹೇಳಿದ್ದಾರೆ.  ಮೈದಾನದಲ್ಲಿ ಕೊಹ್ಲಿ ತೋರುವ ಉತ್ಸಾಹ, ಆಟದ ಮೇಲಿನ ಉಮೇದುವಾರಿಕೆ ಮತ್ತು ಇಡೀ ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯವನ್ನು ಅಶ್ವಿನ್ ಮನಸಾರೆ ಶ್ಲಾಘಿಸಿದ್ದಾರೆ. ಸಿಎಸ್‌ಕೆ ತಂಡದ ಆಟಗಾರನಾಗಿದ್ದ ಅಶ್ವಿನ್, ಆರ್‌ಸಿಬಿಯ ಮುಖವಾಗಿರುವ ವಿರಾಟ್ ಕೊಹ್ಲಿ ಬಗ್ಗೆ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್ ವಲಯದಲ್ಲಿ ಆಟಗಾರರ ವರ್ಗಾವಣೆ ಸುದ್ದಿ ಸದ್ದು ಮಾಡುತ್ತಿದೆ. ಹರ್ಷಲ್ ಪಟೇಲ್ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಕುರಿತು ವರದಿಯಾಗಿದೆ. ಸುಮಾರು ನಾಲ್ಕು ಕೋಟಿ ರೂಪಾಯಿ ನಗದು ವರ್ಗಾವಣೆ ಒಪ್ಪಂದದ ಮೂಲಕ ಈ ಬದಲಾವಣೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಹರ್ಷಲ್, ಗುಜರಾತ್ ತಂಡದ ಬೌಲಿಂಗ್ ವಿಭಾಗಕ್ಕೆ ಎಷ್ಟು ನೆರವಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಆಟಗಾರನಾಗಿ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. 5 ಬಾರಿ ಸಿಎಸ್‌ಕೆಗೆ ಐಪಿಎಲ್ ಟ್ರೋಫಿ ತಂದುಕೊಟ್ಟಿದ್ದ ಧೋನಿ, ಇನ್ಮುಂದೆ ಆಟಗಾರನಾಗಿ ಕಣಕ್ಕಿಳಿಯುವುದಿಲ್ಲ. ಬದಲಾಗಿ 2027ರ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಧೋನಿ ಅವರ ಆಟವನ್ನು ಮತ್ತೆ ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ಭಾವುಕ ಕ್ಷಣವಾಗಿದೆ

 

Kishor KV

Leave a Reply

Your email address will not be published. Required fields are marked *