KL ಓಪನರ್.. DDPಗಿಲ್ವಾ ಚಾನ್ಸ್? – ನಾಲ್ವರು ಫಾಸ್ಟ್ ಬೌಲರ್ಸ್ ಯಾಕೆ?
NZ ಟೆಸ್ಟ್ ಗೆ ಹೀಗಿದೆ ಪ್ಲೇಯಿಂಗ್ 11

KL ಓಪನರ್.. DDPಗಿಲ್ವಾ ಚಾನ್ಸ್? – ನಾಲ್ವರು ಫಾಸ್ಟ್ ಬೌಲರ್ಸ್ ಯಾಕೆ?NZ ಟೆಸ್ಟ್ ಗೆ ಹೀಗಿದೆ ಪ್ಲೇಯಿಂಗ್ 11

ಟಿ-20ಐ ಸಿರೀಸ್ ಗೆದ್ದಾಯ್ತು.. ಏಕದಿನ ಸರಣಿಯನ್ನೂ ಸೀಲ್ ಮಾಡಿದ್ದಾಯ್ತು.. ಈಗ ಟೀಂ ಇಂಡಿಯಾದ ನೆಕ್ಸ್​ಟ್ ಟಾರ್ಗೆಟ್ ಟೆಸ್ಟ್ ಸರಣಿ. ನವೆಂಬರ್ 19ರಿಂದ ಆರಂಭವಾಗಲಿರೋ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭರ್ಜರಿ ಪ್ರಾಕ್ಟೀಸ್ ನಡೀತಿದೆ. 2027ರ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ರೇಸ್​ನಲ್ಲಿ ಉಳೀಬೇಕು ಅಂದ್ರೆ ಭಾರತ ಶತಾಯ ಗತಾಯ ಈ ಸಿರೀಸ್​ ಗೆಲ್ಲಲೇಬೇಕು. ಹೀಗಾಗಿ ಬಲಿಷ್ಠ ಪಡೆಯನ್ನೇ ಅಖಾಡಕ್ಕಿಳಿಸಬೇಕಿದೆ. ಅದ್ರಲ್ಲೂ ಪಂದ್ಯಕ್ಕೂ ಮುನ್ನ ಶುಭ್​ಮನ್ ಗಿಲ್ ನೀಡಿರೋ ಸ್ಟೇಟ್​ಮೆಂಟ್ ಹಲ್​ಚಲ್ ಎಬ್ಬಿಸಿದೆ.

ಇದನ್ನೂ ಓದಿ : KL ಬ್ಯಾಟರ್ ಅಲ್ಲ ಆಪತ್ಬಾಂಧವ – ವಿಶ್ವಕಪ್ ಗಾದ್ರೂ SLOT ಫಿಕ್ಸ್ ಇದ್ಯಾ?

ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಮೊದಲು ಅನೌನ್ಸ್ ಆಗಿದ್ದ ತಂಡಕ್ಕೂ ಈಗಿರೋ ಫೈನಲ್​ ಟೀಮ್​ಗೂ ಸಾಕಷ್ಟು ಡಿಫ್ರೆನ್ಸಸ್ ಇದೆ. ಇಂಜುರಿ, ರಿಪ್ಲೇಸ್​ಮೆಂಟ್ ಲೆಕ್ಕಾಚಾರದಲ್ಲಿ ಕೆಲ ಪ್ಲೇಯರ್ಸ್ ಇನ್ ಌಂಡ್ ಔಟ್ ಆಗಿದ್ದಾರೆ. ಹೀಗಾಗಿ ಪ್ಲೇಯಿಂಗ್ 11 ಫೈನಲ್ ಮಾಡುವಾಗ್ಲೇ ಚಾಲೆಂಜಸ್ ಇದ್ದೇ ಇರುತ್ತೆ. ಅದ್ರಲ್ಲೂ ಪಂದ್ಯಕ್ಕೂ ಮುನ್ನ ತಂಡದ ನಾಯಕ ಶುಭ್​ಮನ್ ಗಿಲ್ ಬಿಗ್ ಸ್ಟೇಟ್​ಮೆಂಟ್ ನೀಡಿದ್ದಾರೆ.

ಪ್ಲೇಯಿಂಗ್ 11ನಲ್ಲಿ ನಾಲ್ವರು ಫಾಸ್ಟ್ ಬೌಲರ್ಸ್ ಬೇಕೆಂದ ಗಿಲ್!

ಗುರುವಾರ ವೆಲ್ಲಿಂಗ್ಟನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇಂಡಿಯನ್ ಟೈಮಿಂಗ್ಸ್ ಪ್ರಕಾರ ಮುಂಜಾನೆ 3.30ಕ್ಕೆ ಪಂದ್ಯ ಸ್ಟಾರ್ಟ್ ಆಗಲಿದೆ. ಸರಣಿಗೂ ಮುನ್ನ ಪ್ರೆಸ್​ಮೀಟ್​ನಲ್ಲಿ ಮಾತನಾಡಿದ ಭಾರತದ ನಾಯಕ ಶುಭ್​ಮನ್ ಗಿಲ್ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯೋದಾಗಿ ಹೇಳಿದ್ದಾರೆ. ನ್ಯೂಝಿಲೆಂಡ್‌ನ ಪಿಚ್‌ಗಳು ಪಂದ್ಯದ ಮೂರನೇ ದಿನದ ನಂತರ ಬ್ಯಾಟಿಂಗ್‌ಗೆ ಹೆಚ್ಚು ಸಪೋರ್ಟಿವ್ ಆಗಿ ಇರೋದ್ರಿಂದ ಬಾಲ್ ಹಳೆಯದಾದಂತೆ ವೇಗಿಗಳ ಅಗತ್ಯವಿದೆ. ಹಾಗೇ ಬ್ಯಾಟಿಂಗ್ ಡೆಪ್ತ್ ಗೂ ಕೂಡ ಇಂಪಾರ್ಟೆನ್ಸ್ ನೀಡಲಾಗಿದೆ. ಟಾಪ್ 7ವರೆಗೂ ಬ್ಯಾಟಿಂಗ್​ಗೆ ಹೆಚ್ಚಿನ ಪ್ರಿಯಾರಿಟಿ ನೀಡಲಾಗುತ್ತೆ ಎಂದಿದ್ದಾರೆ. ಇನ್ನು ಈಗಾಗ್ಲೇ ಕುಲ್ದೀಪ್ ಯಾದವ್ ಬದಲಿಗೆ ಗುರ್ನೂರ್ ಬ್ರಾರ್ ಕೂಡ ತಂಡಕ್ಕೆ ಜಾಯ್ನ್ ಆಗಿರೋದ್ರಿಂದ ಫಾಸ್ಟ್ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಆಪ್ಶನ್ಸ್ ಕೂಡ ಇದೆ.

16 ಸದಸ್ಯರ ತಂಡದಲ್ಲಿದ್ದಾರೆ 6 ವೇಗದ ಬೌಲರ್ಸ್!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸಿರೀಸ್​ಗೆ ಸೆಲೆಕ್ಟ್ ಆಗಿರೋ 16 ಸದಸ್ಯರ ತಂಡದಲ್ಲಿ ಆರು ಜನ ವೇಗದ ಬೌಲರ್‌ಗಳೇ ಇದ್ದಾರೆ. ಜಸ್ಪ್ರೀತ್ ಬುಮ್ರಾ ಅಂತೂ ಪ್ಳೇಯಿಂಗ್ 11ನಲ್ಲಿ ಇದ್ದೇ ಇರ್ತಾರೆ. ಮೊಹಮ್ಮದ್ ಸಿರಾಜ್ ತಂಡದಲ್ಲಿ ಎರಡನೇ ಅತ್ಯಂತ ಅನುಭವಿ ವೇಗಿಯಾಗಿದ್ದು, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅನ್ಶುಲ್ ಕಾಂಬೋಜ್ ಮತ್ತು ಗುರ್ನೂರ್ ಬ್ರಾರ್ ಅವರಂತಹ ಆಟಗಾರರು ಇದ್ದಾರೆ. ಅನ್ಶುಲ್ ಕಾಂಬೋಜ್ ಭಾರತ ಪರ  ಒಂದು ಟೆಸ್ಟ್ ಪಂದ್ಯ ಆಡಿದ್ರೆ ಗುರ್ನೂರ್ ಬ್ರಾರ್ ಇನ್ನೂ ಕೂಡ ಪಾದಾರ್ಪಣೆ ಮಾಡಿಲ್ಲ. ಮೊದಲ ಟೆಸ್ಟ್‌ನಲ್ಲಿ ಇವರಿಬ್ಬರಲ್ಲಿ ಒಬ್ರಂತೂ ಪಕ್ಕಾ ಇರ್ತಾರೆ. ಅಥವಾ ಇಬ್ರೂ ಆಡಿದ್ರೂ ಅಚ್ಚರಿಯೇನಿಲ್ಲ. ಇನ್ನು 2025ರ ನವೆಂಬರ್​ನಲ್ಲಿ ಗುವಾಹಟಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಬುಮ್ರಾ, ಫಾಸ್ಟ್ ಬೌಲಿಂಗ್ ವಿಭಾಗವನ್ನ ಲೀಡ್ ಮಾಡ್ತಾರೆ.

ಹೇಗಿರುತ್ತೆ ಪ್ಲೇಯಿಂಗ್ 11?

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ದೇವದತ್ ಪಡಿಕ್ಕಲ್

ಶುಭ್ ಮನ್ ಗಿಲ್

ರಿಷಭ್ ಪಂತ್

ರವೀಂದ್ರ ಜಡೇಜಾ

ನಿತೀಶ್ ಕುಮಾರ್ ರೆಡ್ಡಿ

ಆಕಾಶ್ ದೀಪ್/ಅನ್ಶುಲ್ ಕಾಂಬೋಜ್

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ/ಗುರ್ನೂರ್ ಬ್ರಾರ್

ಅಷ್ಟಕ್ಕೂ ಇಲ್ಲಿ ಭಾರತ ಪ್ಲೇಯಿಂಗ್ 11ನಲ್ಲಿ ಎಷ್ಟೇ ಲೆಕ್ಕಾಚಾರಗಳನ್ನ ಮಾಡಿದ್ರೂ ಕಿವೀಸ್ ನೆಲದಲ್ಲಿ ಸಿರೀಸ್ ಗೆಲ್ಲೋದು ಸುಲಭ ಇಲ್ವೇ ಇಲ್ಲ. ಹಿಂದಿನ ರೆಕಾರ್ಡ್​​ಗಳನ್ನ ನೋಡಿದ್ರೇನೇ ಗೊತ್ತಾಗುತ್ತೆ ಭಾರತ ನ್ಯೂಜಿಲೆಂಡ್​ನಲ್ಲಿ ಎಸ್​ಪೆಶಲಿ ಟೆಸ್ಟ್ ಪಂದ್ಯಗಳನ್ನ ಗೆಲ್ಲೋಕೆ ಹೇಗೆ ಒದ್ದಾಡಿದೆ ಅನ್ನೋದು. ಕಿವೀಸ್ ನೆಲದಲ್ಲಿ ಭಾರತ ಇದುವರೆಗೆ 25 ಟೆಸ್ಟ್ ಪಂದ್ಯಗಳನ್ನ ಆಡಿದೆ. ಆದ್ರೆ ಗೆದ್ದಿರುವಂಥದ್ದು ಕೇವಲ 5 ಪಂದ್ಯಗಳನ್ನ ಮಾತ್ರ. 10 ಪಂದ್ಯಗಳನ್ನ ಸೋತಿದ್ರೆ ಇನ್ನು 10 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಸೋ ಇಲ್ಲಿ ಗೆಲುವಿನ ಪರ್ಸೆಂಟೇಜ್ ಇರೋದೇ 20ಪರ್ಸೆಂಟ್ ಮಾತ್ರ. 1968ರಲ್ಲಿ ಪಟೌಡಿ ನಾಯಕತ್ವದಲ್ಲಿ 4 ಪಂದ್ಯಗಳ ಸರಣಿಯನ್ನು 3-1ರಿಂದ ಗೆದ್ದಿತ್ತು.  ಹಾಗೇ 2009ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದಿದ್ದೇ ಈವರೆಗಿನ ಸಾಧನೆಯಾಗಿದೆ. 2020ರಲ್ಲಿ ಕೊನೇ ಬಾರಿಗೆ ಭಾರತ ನ್ಯೂಜಿಲೆಂಡ್​ನಲ್ಲಿ ಟೆಸ್ಟ್ ಸರಣಿ ಆಡಿದ್ದು ಎರಡೂ ಪಂದ್ಯಗಳನ್ನ ಗೆದ್ದು ಭಾರತವನ್ನ ವೈಟ್ ವಾಶ್ ಮಾಡಿದ್ರು. ಅದೂ ಅಲ್ದೇ ಇತ್ತೀಚೆಗೆ ಟಿ-20ಐ ಸರಣಿ ಹಾಗೇ ಏಕದಿನ ಸರಣಿಯಲ್ಲಿ ಭಾರತದ ವಿರುದ್ಧ ಸೋತಿರೋದ್ರಿಂದ ಅಟ್​ಲೀಸ್ಟ್ ಟೆಸ್ಟ್ ಸಿರೀಸ್​ನಲ್ಲಾದ್ರೂ ಗೆಲ್ಲೋಕೆ ಕಿವೀಸ್ ಪ್ಳೇಯರ್ಸ್ ಪಣ ತೊಟ್ಟಿದ್ದಾರೆ. ಹೀಗಾಗಿ ಈ ಟೆಸ್ಟ್ ಸರಣಿ ಕೂಡ ರಣರೋಚಕವಾಗಿರೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *