48 ಬಾಲ್.. 13 ಸಿಕ್ಸ್.. 135* ರನ್ಸ್ – SMATನಲ್ಲಿ ಧೂಳೆಬ್ಬಿಸಿದ ಪಾಟಿದಾರ್
ಇಂಜುರಿ.. ಸೆಂಚುರಿ.. ಏನಿದು ವಿವಾದ?

48 ಬಾಲ್.. 13 ಸಿಕ್ಸ್.. 135* ರನ್ಸ್ – SMATನಲ್ಲಿ ಧೂಳೆಬ್ಬಿಸಿದ ಪಾಟಿದಾರ್ಇಂಜುರಿ.. ಸೆಂಚುರಿ.. ಏನಿದು ವಿವಾದ?

ಒಂದೇ ವಾರ.. ಜಸ್ಟ್ ಒಂದೇ ವಾರ. ಲಾಸ್ಟ್ ವೀಕ್ ರೈಸಿಂಗ್ ಸ್ಟಾರ್ ಏಷ್ಯಾಕಪ್ ಭಾರತ ಎ ತಂಡದ ಪರ ಆಡಲ್ಲ ಅಂತಾ ಹಿಂದೆ ಸರಿದಿದ್ದ ಅದೇ ರಜತ್ ಪಾಟಿದಾರ್ ಈಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಸೆಂಚುರಿ ಬಾರಿಸಿದ್ದಾರೆ. ಸಿಕ್ಸ್​, ಫೋರ್​ಗಳಲ್ಲೇ ಬೌಲರ್​ಗಳನ್ನ ಬೆಂಡೆತ್ತಿ ಅಬ್ಬರಿಸಿದ್ದಾರೆ. ಫೀಲ್ಡಿಂಗ್​ನಲ್ಲಂತೂ ಚಿರತೆಯಂತೆ ಹಾರಿ ಕ್ಯಾಚ್​ಗಳನ್ನ ಹಿಡಿದಿದ್ದಾರೆ.

ಇದನ್ನೂ ಓದಿ : T-20I, ODI ಆಯ್ತು ಈಗ ಟೆಸ್ಟ್ ಟಾಸ್ಕ್ – WTC ರೇಸ್ ನಲ್ಲಿ ಉಳಿಯುತ್ತಾ ಭಾರತ?

ಕತಾರ್‌ನ ದೋಹಾದಲ್ಲಿ ನವೆಂಬರ್ 19 ರಿಂದ 29, 2026 ರವರೆಗೆ ರೈಸಿಂಗ್ ಸ್ಟಾರ್ ಏಷ್ಯಾಕಪ್ ಪಂದ್ಯಾವಳಿ ನಡೆಯಲಿದ್ದು, ನವೆಂಬರ್ 26 ಮತ್ತು 27 ರಂದು ಸೆಮಿಫೈನಲ್ ಪಂದ್ಯಗಳು ಹಾಗೂ ನವೆಂಬರ್ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಗೆ ತಿಲಕ್ ವರ್ಮಾ ಕ್ಯಾಪ್ಟನ್ಸಿಯಲ್ಲಿ ಅನೌನ್ಸ್ ಆಗಿರೋ  ತಂಡಕ್ಕೆ ವೈಸ್ ಕ್ಯಾಪ್ಟನ್ ಆಗಿ ಸೆಲೆಕ್ಟ್ ಆಗಿದ್ದ ರಜತ್ ಪಾಟಿದಾರ್ ಇಂಜುರಿಯ ಕಾರಣ ನೀಡಿ ಟೂರ್ನಮೆಂಟ್​ನಿಂದ ಹಿಂದೆ ಸರಿದಿದ್ರು. ಪಾಟಿದಾರ್ ಬದಲಿಗೆ ಆಯುಷ್ ಬದೋನಿಯನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಌಂಡ್ ರಿಂಕು ಸಿಂಗ್​ಗೆ ವೈಸ್ ಕ್ಯಾಪ್ಟನ್ಸಿ ನೀಡಲಾಯ್ತು. ಆದ್ರೀಗ ಡೊಮೆಸ್ಟಿಕ್​​ನಲ್ಲಿ ಧೂಳೆಬ್ಬಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

41 ಬಾಲಲ್ಲಿ ಸೆಂಚುರಿ.. 48 ಎಸೆತಗಳಲ್ಲಿ ಅಜೇಯ 135 ರನ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಆಗಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನ ಗೆಲ್ಲಿಸಿದ ರಜತ್ ಪಾಟಿದಾರ್ ಬ್ಯಾಟಿಂಗ್​ನಲ್ಲೂ ಕೂಡ ಅದ್ಭುತ ಪ್ರದರ್ಶನ ನೀಡಿದ್ರು. ಹೀಗಾಗಿ ಭಾರತ ತಂಡಕ್ಕೂ ಪಾಟಿದಾರ್​ರನ್ನ ಸೆಲೆಕ್ಟ್ ಮಾಡಿ ಅನ್ನೋ ಕೂಗು ಜೋರಾಗಿತ್ತು. ಇತ್ತೀಚೆಗೆ ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿ ಎ ತಂಡದಲ್ಲಿ ಅವಕಾಶವೂ ಸಿಕ್ಕಿತ್ತು. ಆದ್ರೆ ಗಾಯದ ಕಾರಣ ನೀಡಿ ತಂಡದಿಂದ ಹೊರಬಂದ ಪಾಟಿದಾರ್ ಈಗ ಡೊಮೆಸ್ಟಿಕ್​​ನಲ್ಲಿ ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ನ್ಯೂ ಚಂಡೀಗಢದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಮಧ್ಯಪ್ರದೇಶ ಮತ್ತು ಅಸ್ಸಾಂ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಅಸ್ಸಾಂ ಬೌಲಿಂಗ್ ಚೂಸ್ ಮಾಡಿಕೊಂಡಿದ್ರು. ಹೀಗಾಗಿ ಫಸ್ಟ್ ಬ್ಯಾಟಿಂಗ್​ಗೆ ಬಂದ ಮಧ್ಯಪ್ರದೇಶ ತಂಡ 57 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ರಾಜತ್ ಪಾಟಿದಾರ್ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ಅಸ್ಸಾಂ ಬೌಲರ್‌ಗಳನ್ನ ಚೆಂಡಾಡಿದ್ರು. ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದ ಪಾಟಿದಾರ್, ಅಂತಿಮವಾಗಿ 48 ಎಸೆತಗಳಲ್ಲಿ ಅಜೇಯ 135 ರನ್ ಗಳಿಸಿದರು. ಆದ್ರಿಲ್ಲಿ ಪಾಟಿದಾರ್ ಅವರ ಇನ್ನಿಂಗ್ಸ್‌ನ ಸ್ಪೆಷಾಲಿಟಿ ಏನಂದ್ರೆ ಅವ್ರ ಬ್ಯಾಟಿಂಗ್ ಸ್ಪೀಡ್. 15 ಓವರ್‌ಗಳ ಅಂತ್ಯಕ್ಕೆ 24 ಎಸೆತಗಳಲ್ಲಿ 48 ರನ್ ಗಳಿಸಿದ್ದ ಪಾಟಿದಾರ್, ಕೊನೆಯ ಐದು ಓವರ್‌ಗಳಲ್ಲಿ ಒನ್ ಮ್ಯಾನ್ ಶೋ ಥರ ಬ್ಯಾಟ್ ಬೀಸಿದ್ರು. ನೆಕ್ಸ್​ಟ್ 24 ಎಸೆತಗಳಲ್ಲಿ ಬರೋಬ್ಬರಿ 87 ರನ್ ಸಿಡಿಸಿದರು. ಒಟ್ಟು 13 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳನ್ನು ಬಾರಿಸಿದ ಪಾಟಿದಾರ್, 281.25ರ ಸ್ಟ್ರೈಕ್‌ರೇಟ್‌ನಲ್ಲಿ ಬೌಲರ್​ಗಳ ಬೆವರಿಳಿಸಿದ್ರು. ಇನ್ನೊಂದು ಕಡೆ ಶಿವಾಂಗ್ ಕುಮಾರ್ ಕೂಡ 38 ಎಸೆತಗಳಲ್ಲಿ 61 ರನ್ ಗಳಿಸಿ ಪಾಟಿದಾರ್‌ಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರ ನಡುವೆ ನಾಲ್ಕನೇ ವಿಕೆಟ್‌ಗೆ 62 ಎಸೆತಗಳಲ್ಲಿ 153 ರನ್‌ಗಳ ಜೊತೆಯಾಟ ಬಂತು. ಇವ್ರಿಬ್ಬರ ಬೆಂಕಿ ಬ್ಯಾಟಿಂಗ್​ನಿಂದ ಮಧ್ಯಪ್ರದೇಶ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 250 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಅಸ್ಸಾಂ 119 ರನ್​ಗಳಿಗೆ ಆಲೌಟ್ ಆಗಿ 131 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋಲೊಪ್ಪಿಕೊಳ್ತು. ಆದ್ರಿಲ್ಲಿ ಮಧ್ಯಪ್ರದೇಶ ಪಂದ್ಯವನ್ನ ಗೆಲ್ತು ಅನ್ನೋದಕ್ಕಿಂತ ಪಾಟಿದಾರ್ ಪರ್ಫಾಮೆನ್ಸ್ ಬಾರೀ ಚರ್ಚೆಯಾಗ್ತಿದೆ.

ನವೆಂಬರ್ 8ರಂದು ವಿತ್ ಡ್ರಾ.. ನವೆಂಬರ್ 16ಕ್ಕೆ ಸೆಂಚುರಿ!

ನವೆಂಬರ್ 8ರಂದು ಬಿಸಿಸಿಐ ಮಾಹಿತಿಯ ಪ್ರಕಾರ, ರಜತ್ ಪಾಟಿದಾರ್ ಇಂಜುರಿ ಕನ್ಸರ್ನ್ ಹಿನ್ನೆಲೆಯಲ್ಲಿ  50 ಓವರ್‌ಗಳ ಮಾದರಿಯಲ್ಲಿ ತಮ್ಮನ್ನು ಆಯ್ಕೆಗೆ ಸದ್ಯಕ್ಕೆ ಪರಿಗಣಿಸಬಾರದು ಎಂದು ಮನವಿ ಮಾಡಿದ್ದರು.  ಆದ್ರೀಗ ಸ್ಮ್ಯಾಟ್​ನಲ್ಲಿ ಪವರ್ ಹಿಟ್ಟಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ತಂಡದ ಪರ ಹಲವು ದಾಖಲೆಗಳನ್ನೂ ಬರೆದಿದ್ದಾರೆ.  2026ರ ಐಪಿಎಲ್‌ನಲ್ಲಿ 501 ರನ್ ಗಳಿಸಿ RCB ಪರ ಗಮನ ಸೆಳೆದಿದ್ದ ಪಾಟಿದಾರ್, 2027ರ ಐಪಿಎಲ್‌ಗೂ ಮುನ್ನ ತಮ್ಮ ಫಾರ್ಮ್ ಮುಂದುವರಿಸಿದ್ದಾರೆ. ಆರ್​ಸಿಬಿಯ ರಿಲೀಸ್ ಮತ್ತು ರಿಟೇನ್ ಲಿಸ್ಟ್ ಅನೌನ್ಸ್ ಆಗೋ ಟೈಮಲ್ಲಿ ನಾಯಕನ ಪ್ರದರ್ಶನ ಫ್ರಾಂಚೈಸಿಗೂ ಖುಷಿ ನೀಡಿದೆ. ಟಿ-20 ಫಾರ್ಮೆಟ್​ನಲ್ಲಿ ಅವ್ರ ಕನ್ಸಿಸ್ಟೆನ್ಸಿ ನೋಡಿದ ಮೇಲೆ ಭಾರತ ಟಿ-20ಐ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬೆಸ್ಟ್ ಪ್ಲೇಯರ್ ಆಗ್ತಾರೆ ಅನ್ನೋದು ಎಲ್ಲರ ಅಭಿಪ್ರಾಯ. ಯಾಕಂದ್ರೆ 50 ಓವರ್ ಗಳ ಮಾದರಿಗೆ ಸದ್ಯಕ್ಕೆ ಕಷ್ಟ ಅಂತಿರೋ ಪಾಟಿದಾರ್ ಟಿ-20 ಮಾದರಿಯಲ್ಲಿ ಮಾತ್ರ ಯಾವತ್ತೂ ಹಿಂದೆ ಸರಿದಿಲ್ಲ. ಆದ್ರೆ ರಾಷ್ಟ್ರೀಯ ತಂಡದಲ್ಲಿ ಇರೋ ಪೈಪೋಟಿ ನೋಡ್ತಿದ್ರೆ ಸೆಲೆಕ್ಟ್ ಆಗೋದು ಸ್ವಲ್ಪ ಕಷ್ಟವೇ.

Shantha Kumari

Leave a Reply

Your email address will not be published. Required fields are marked *